ಬಳ್ಳಾರಿ / ಕಂಪ್ಲಿ : ನಗರದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಶ್ರಾವಣ ಮಾಸದ ನಿಮಿತ್ಯ ಆಯೋಜಿಸಿದ ಕಲ್ಬುರ್ಗಿಯ ಶ್ರೀ ಶರಣ ಬಸವೇಶ್ವರ ಪುರಾಣ ಪ್ರವಚನ ಮಹಾಮಂಗಳದ ಪ್ರಯುಕ್ತ ಬಸವೇಶ್ವರರ ಪ್ರತಿಮೆ ಮತ್ತು ಪುರಾಣ ಗ್ರಂಥದ ಮೆರವಣಿಗೆ ಜರುಗಿತು.
ಪಾಠಶಾಲೆಯ ಪ್ರಾಚಾರ್ಯರಾದ ಘನಮಠದಯ್ಯ ಹಿರೇಮಠ್ ಪೌರೋಹಿತದಲ್ಲಿ ಈಶ್ವರ, ನಂದಿ, ಚೋಚ್ಚಯ್ಯ ಸ್ವಾಮಿ ಗುರುಸಿದ್ದಮರಿದೇವರ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ ಸಹಸ್ರ ನಾಮಾವಳಿ ಸೇರಿದಂತೆ ವಿವಿಧ ಪೂಜಾ ವಿಧಾನಗಳು ಜರುಗಿದವು .
ಮೆರವಣಿಗೆ ನಂತರ ಪುರಾಣ ಪ್ರವಚನ ಮಹಾಮಂಗಳಗೊಂಡಿತು. ಪುರಾಣ ಪ್ರವಚನವನ್ನು ಬೂದಿಹಾಳದ ಶ್ರೀ ಗವಿಸಿದ್ದೇಶ್ವರ ಶಾಸ್ತ್ರಿಗಳು ಸಂಗೀತ ವಾಚನವನ್ನು ರಾರಾವಿಯ ಚಿದಾನಂದಪ್ಪ ಗವಾಯಿಗಳು ತಬಲವಾದನವನ್ನು ಕಂಪ್ಲಿಯ ಕೆ. ದೊಡ್ಡ ಬಸಪ್ಪ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಪಾಠಶಾಲೆ ಅಧ್ಯಕ್ಷ ಇಟ್ಟಗಿ ಬಸವರಾಜ್ ಗೌಡ ಪ್ರಾಚಾರ್ಯ ಘನಮಠದಯ್ಯ ಹಿರೇಮಠ, ಪಾಠಶಾಲೆಯ ಪದಾಧಿಕಾರಿಗಳಾದ ಆಲಬನೂರು ಬಸವರಾಜ ಜಿ.ಹೆಚ್., ಶಶಿಧರ.ಎಮ್, ಟಿ ಸುರೇಶ್ ಗೌಡ, ಅರವಿ ಅಂಬರೀಶ ಗೌಡ, ಹಳ್ಳಿ ನಾಗರಾಜ, ಎಲೆಗಾರ ವೆಂಕಟರೆಡ್ಡಿ, ಎಸ್.ಡಿ. ಬಸವರಾಜ, ಗಂಡಿ ಗಣೇಶ, ಕೋರಿ ಶೆಟ್ರು ಸಣ್ಣ ಶಿವಶರಣ, ಹುಲಿಹೈದರ ಅಂಬರೀಶ, ಎಂ. ವಿಜಯ್ ಕುಮಾರ, ಅಶೋಕ್ ಕುಕುನೂರ, ಶರಣಪ್ಪ ಸಜ್ಜನ, ಎಸ್. ಎಸ್.ಎಮ್. ಚೆನ್ನಯ್ಯಸ್ವಾಮಿ, ವಾಲಿ ಕೊಟ್ರಪ್ಪ, ಎಸ್. ಎಂ. ನಾಗರಾಜ ಸ್ವಾಮಿ, ಚಿನ್ನದ ಕಂಠಿ ಶಿವಮೂರ್ತಿ, ಜಿ. ಚಂದ್ರಶೇಖರ ಗೌಡ, ಯುಗಾದಿ ಶಿವರಾಜ, ಪುಟ್ಟಿ ಸಚಿನ್, ಅಕ್ಕನ ಬಳಗದ ಪದಾಧಿಕಾರಿಗಳು ವೀರಶೈವ ಸಮಾಜದ ಮುಖಂಡರು, ವಿವಿಧ ಸಮಾಜದ ಮುಖಂಡರು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















