ಶಿವಮೊಗ್ಗಕ್ಕೆ ನೂತನ ವಾರ್ತಾಧಿಕಾರಿ ಬಿ.ಧನಂಜಯ್ ರವರು ಇಂದು ಬೆಳಿಗ್ಗೆ ಶಿವಮೊಗ್ಗ ವಾರ್ತಾ ಇಲಾಖೆಯ ಕಚೇರಿಗೆ ಬಂದು ಸರ್ಕಾರದ ಆದೇಶದ ಮೇರೆಗೆ ಅಧಿಕಾರ ಸ್ವೀಕರಿಸಿದರು.
ಈ ಮೊದಲು ಕರ್ತವ್ಯ ನಿರ್ವಹಿಸುತ್ತಿದ್ದ ವಾರ್ತಾಧಿಕಾರಿ ಮಾರುತಿ.ಆರ್.ಇವರನ್ನು ಶಿವಮೊಗ್ಗದಿಂದ ದಾವಣಗೆರೆ ಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ನೂತನ ವಾರ್ತಾಧಿಕಾರಿಯನ್ನು ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಶಿವಮೊಗ್ಗ ಘಟಕದಿಂದ ಸ್ವಾಗತಿಸಿ, ಸನ್ಮಾನಿಸಲಾಯಿತು.
ನೂತನ ವಾರ್ತಾಧಿಕಾರಿ ಧನಂಜಯ್ ರವರು ಜಿಲ್ಲೆಯ ಪತ್ರಕರ್ತರಿಗೆ ಮೀಡಿಯಾ ಮತ್ತು ನಾನ್ ಮೀಡಿಯಾ ತಾರತಮ್ಯ , ಬೇದಭಾವ ತೋರದೇ ಕರ್ತವ್ಯವನ್ನು ನಿರ್ವಹಣೆ ಮಾಡಿ ಶಿವಮೊಗ್ಗ ವಾರ್ತಾ ಇಲಾಖೆಯನ್ನು ಶುದ್ದಿಗೊಳಿಸಬೇಕಿದೆ. ಮೀಡಿಯಾ ಮತ್ತು ನಾನ್ ಮೀಡಿಯಾ ಅಂತ ವಿಂಗಡಿಸದೆ ಎಲ್ಲಾ ಪತ್ರಕರ್ತರ ಜನಸ್ನೇಹಿಯಾಗಿ ಕೆಲಸ ಮಾಡಲಿ ಎಂಬುದು ನಮ್ಮ ಆಶಯವಾಗಿದೆ.
ವರದಿ ಪ್ರಸಾದ್ ಹೆಚ್. ಬಿ



















