ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಸ್. ಆರ್. ಕಂಠಿ ವೇದಿಕೆಯಿಂದಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ

ಬಾಗಲಕೋಟೆ/ಇಲಕಲ್ಲ:ವಿದ್ಯಾರ್ಥಿಗಳು ಶೈಕ್ಷಣಿಕ ರಂಗದಲ್ಲಿ ಎಷ್ಟೇ ಸಾಧನೆ ಮಾಡಿದರು ತಮ್ಮ ತಂದೆ ತಾಯಿಗಳನ್ನು ಮರೆಯಬಾರದು ಎಂದು ನಿವೃತ್ತ ಶಿಕ್ಷಕ ಅಮರೇಶ ಐಹೊಳ್ಳಿ ಹೇಳಿದರು.

ನಗರದ ಎಸ್.ಆರ್.ಕಂಠಿ ವೇದಿಕೆ ಸಿಎ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತಮ ಅಂಕಗಳನ್ನು ಪಡೆದು ಪಾಸಾದ ಪ್ರತಿಭಾವಂತ ವಿದ್ಯಾರ್ಥಿ ರೋಹನ್ ಜೋಗಿನ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಮೆರಿಟ್ ಮೂಲಕ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿ ಬಸವೇಶ ಕೊತಬಾಳ ಇವರ ಸತ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂದೆ ತಾಯಿ,ಗುರುಗಳ ಶ್ರಮವನ್ನು ಸದಾ ಸ್ಮರಣೆಯಲ್ಲಿ ಇಟ್ಟುಕೊಳ್ಳಬೇಕು. ತಂದೆ ತಾಯಿ ತ್ಯಾಗದ ಫಲವಾಗಿ ಮಕ್ಕಳ ಭವಿಷ್ಯ ರೂಪಿತವಾಗಿರುತ್ತದೆ. ತಮ್ಮ ಇಡೀ ಬದುಕನ್ನು ಮಕ್ಕಳ ಬದುಕಿಗಾಗಿ ಸವೆಸಿದ ತಂದೆ ತಾಯಿಗಳ ಕಣ್ಣಲ್ಲಿ ನೀರು ತರಿಸಬಾರದು ಎಂದರು.

ಕರ್ನಾಟಕ ರಕ್ಷಣಾ ವೇದಿಕೆಯ ನಗರ ಚಾಲಕರ ಘಟಕದ ಅಧ್ಯಕ್ಷ ಮಲ್ಲಪ್ಪ ಅಂಗಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂಠಿ ವೇದಿಕೆ ಅಧ್ಯಕ್ಷೆ ಮಹಾದೇವಿ ತೊಂತನಾಳ ವಹಿಸಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಲಕ್ಷ್ಮಣ ಚಲವಾದಿ,ವೆಂಕಟೇಶ ಜೋಗಿನ,
ಮಂಜುನಾಥ ಜೋಗಿನ,
ಕಂಠಿ ವೇದಿಕೆಯ ಬಸವರಾಜ ಚಳಗೇರಿ,
ಚನ್ನಪ್ಪ ಲವಳಸರ,ಮಹಾಂತೇಶ ಕಕ್ಕಸಗೇರಿ,ಅಡಿವೆಪ್ಪ ಅಂಗಡಿ, ಶರಣಪ್ಪ ಕೊತಬಾಳ,ಬಸವರಾಜ ಗುಗ್ಗರಿ,
ಮಲ್ಲಿಕಾರ್ಜುನ ನೀರಲಕೇರಿ,
ಮಹಾಂತೇಶ ಬಂಡಿ, ಶರಣಬಸವ
ನಾಲವಾಡದ, ಶಕುಂತಲಾ ಜೋಗಿನ,
ಭಾಗ್ಯಶ್ರೀ ಜೋಗಿನ,ಮಹಾಂತಮ್ಮ ಹೂಲಗೇರಿ ಮತ್ತಿತರರು ಭಾಗವಹಿಸಿದ್ದರು.

ನೀಲಾಂಬಿಕಾ ಬಾದಿಮನಾಳ ಪ್ರಾರ್ಥಿಸಿದರು. ಶ್ರೀಧರ ಜೋಗಿನ ಸ್ವಾಗತಿಸಿದರು. ವಿಜಯಲಕ್ಷ್ಮೀ ಲೆಕ್ಕಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಸವರಾಜ ಅಂಗಡಿ(ಐಟಿಐ) ನಿರೂಪಿಸಿದರು. ವಿಜಯಲಕ್ಷ್ಮೀ ಕಂಠಿ ವಂದಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!