ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಸ್ ಸಿ ಕಾಲೋನಿ ಜನರಿಗೆ ಉಪಯೋಗವಾಗಲಿ ಅಂತ ಸರಿ ಸುಮಾರು 50 ಸಾವಿರ ಲೀಟರ್ ನೀರಿನ ಸಾಮರ್ಥ್ಯ ಹೊಂದಿರುವ ಟ್ಯಾಂಕ್ ಅನ್ನು ಸರ್ಕಾರ ನಿರ್ಮಾಣ ಮಾಡಿರುತ್ತದೆ. ಈ ಟ್ಯಾಂಕ್ ಗೆ ತಾಂಬಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೂಗಿಹಾಳ ಕೆರೆಯ ಪೈಪ್ ಲೈನ್ ಮೂಲಕ ಕುಡಿಯುವ ನೀರಿನ ನೀರು ಬಂದು ಬೀಳುತ್ತೆ ಅಲ್ಲಿಂದ ಎಸ್ ಸಿ ಕಾಲೋನಿ ಗೆ ನೀರು ಸರಬರಾಜು ಆಗುತ್ತಿರುತ್ತದೆ. ಆದರೆ ಕೆಲವೊಂದಿಷ್ಟು ಪುಢಾರಿಗಳು ಪಂಚಾಯಿತಿಯಿಂದ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಗುಗಿಹಾಳ ಮುಖ್ಯ ಪೈಪಲೈನ್ ಮೂಲಕ ತಮ್ಮ ತೋಟಗಳಿಗೆ ನೀರಿನ ಪೈಪ್ಲೈನ್ ಮಾಡಿಕೊಂಡಿರುತ್ತಾರೆ. ಅದಕ್ಕಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಾದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ಅಧ್ಯಕ್ಷರು, ಪಂಚಾಯತಿ ಸದಸ್ಯರು ಹಾಗೂ ತಾಲೂಕಿನ ಕುಡಿಯುವ ನೀರಿನ ನೈರ್ಮಲ್ಯ ಇಲಾಖೆಯವರು ಕೂಡ ಇತ್ತ ಕಡೆ ಗಮನಹರಿಸಿ ಕಾಲೋನಿಗೆ ಅನುಕೂಲ ಮಾಡಿಕೊಡಬೇಕೆಂದು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಯುವಕ ಮಂಡಳದ ಎಲ್ಲಾ ಯುವಕರು ಆಗ್ರಹಿಸಿದ್ದಾರೆ.
- ಕರುನಾಡ ಕಂದ



















