
ಬಳ್ಳಾರಿ / ಕಂಪ್ಲಿ : ಪತ್ರಿಕೆ, ಮಾಧ್ಯಮಗಳು ಸಮಾಜದಲ್ಲಿ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು, ವಿದ್ಯಾರ್ಥಿಗಳು ಮೊಬೈಲ್ ಗಳಿಗೆ ಮಾರು ಹೋಗದೆ, ಪತ್ರಿಕೆ ಓದುವ ಹವ್ಯಾಸ ರೂಢಿ ಮಾಡಿಕೊಳ್ಳಬೇಕು, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ ಶಿಕ್ಷಣದ ಜ್ಞಾನ, ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಮಾ.ನಿ.ಪ್ರ. ಶ್ರೀ ಅಭಿನವ ಪ್ರಭು ಮಹಾಸ್ವಾಮಿಗಳು ಕಂಪ್ಲಿ ಕಲ್ಮಠ ಅವರು ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಫಂಕ್ಷನ್ ಹಾಲ್ ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಕಂಪ್ಲಿ ತಾಲೂಕು ಘಟಕ ವತಿಯಿಂದ ಜರುಗಿದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಮಾಧ್ಯಮ ಅಕಾಡೆಮಿ ಸದಸ್ಯರಾದ ನಿಂಗಜ್ಜ ಗಂಗಾವತಿ ಮಾತನಾಡಿ ಪತ್ರಿಕೆ ಹಾಗೂ ಮಾಧ್ಯಮ ಇಲ್ಲದಿದ್ದರೆ ಸರ್ಕಾರ ಮತ್ತು ಜನರ ನಡುವೆ ಸಂಪರ್ಕ ಉಂಟಾಗುವುದಿಲ್ಲ, ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ತಿಳಿಯಬೇಕೆಂದರೆ ಅದು ಪತ್ರಿಕಾ ಮಾಧ್ಯಮಗಳಿಂದ ಸಾಧ್ಯ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಮಾಡಿಕೊಳ್ಳಬೇಕೆಂದರು.
ಕಾಲೇಜು ಪ್ರಾಂಶುಪಾಲರಾದ ಶ್ರೀನಿವಾಸ ರೆಡ್ಡಿ ಮಾತನಾಡಿ ಪತ್ರಿಕಾ ರಂಗ ಸಾಮಾಜಿಕ ಕಳಕಳಿಯ ಬದ್ಧತೆಯಿಂದ ಇರುವಂತದ್ದು ಪತ್ರಿಕಾರಂಗವೂ 4ನೇ ಅಂಗವಾಗಿದೆ. ಸಮಾಜದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುವ ಕೆಲಸ ಪತ್ರಿಕೋದ್ಯಮ ಮಾಡುತ್ತದೆ ಎಂದರು.
ಕಾ.ನಿ.ಪ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಮಾತನಾಡಿ ರಾಜ್ಯದ ಪತ್ರಕರ್ತರಿಗೆ ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಪತ್ರಿಕೆ ಮಾಲೀಕರಾಗಲಿ ಜೊತೆಗಿಲ್ಲ. ಪತ್ರಕರ್ತರ ಕ್ಷೇಮಾಭಿವೃದ್ಧಿಯು ಸರಿಯಾಗಿ ದೊರಕುತ್ತಿಲ್ಲ. ಆದ್ದರಿಂದ ಬರುವ ದಿನಗಳಲ್ಲಿ ನಮ್ಮ ಸಂಘದ ಸದಸ್ಯರಿಗೆ ಪತ್ರಕರ್ತರ ಆರೋಗ್ಯ, ಅಪಘಾತಗಳಂತ ಸಮಯದಲ್ಲಿ ಸಹಾಯ ಮಾಡಲು ಹಣವನ್ನು ಮೀಸಲಿಡುತ್ತೇವೆ ಎಂದರು.
ತಾಲೂಕಿನ 12 ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 4 ವಿದ್ಯಾರ್ಥಿಗಳಿಗೆ ದಾನಿಗಳು ನೀಡಿದ ಪ್ರೋತ್ಸಾಹ ವಿಶೇಷವಾಗಿ ಸನ್ಮಾನಿಸಲಾಯಿತು. ಈ ಸಮಯದಲ್ಲಿ ಭರತನಾಟ್ಯ ಕಾರ್ಯಕ್ರಮವನ್ನು ಖುಷಿ ವಿಶೇಷವಾಗಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘಟನೆ ಕಂಪ್ಲಿ ತಾಲೂಕು ಘಟಕದಿಂದ ಪತ್ರಿಕಾ ವಿತರಕರಿಗೆ ಉಚಿತವಾಗಿ ಜಾಕೆಟ್ ಗಳನ್ನು ವಿತರಿಸಿ ಸನ್ಮಾನಿಸಲಾಯಿತು.
ರಾಜೇಶ್ ಮತ್ತು ಖುಷಿ ವಿರಾಜ್ ಇಬ್ಬರೂ ಭರತನಾಟ್ಯ ಪ್ರದರ್ಶನ ಮಾಡಿದರು. ಭರತನಾಟ್ಯದಲ್ಲಿ ಸಾಧನೆಗೈದ ಬಿ.ಸಾಯಿನಿಧಿ ಅವರಿಗೆ ಸನ್ಮಾನಿಸಿದರು.
ಈ ಸಮಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀನಿವಾಸ ರೆಡ್ಡಿ, ಕಂಪ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ತಾಲೂಕು ಅಧ್ಯಕ್ಷ ಇಂದ್ರಜಿತ್ ಸಿಂಗ್ ಕೆ, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಬೋವೆರ್, ತಾಲೂಕು ಉಪಾಧ್ಯಕ್ಷ ರಘುವೀರ್ ಸಿದ್ಧಿ, ಚನ್ನಕೇಶವ, ವಿರೂಪಾಕ್ಷಯ್ಯ, ಗಿರೀಶ್ ಕುಮಾರ್ ಜಿ, ಕಟ್ಟೆ ಮಾರೆಪ್ಪ, ವಿರೂಪಾಕ್ಷಯ್ಯ ಸ್ವಾಮಿ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















