
ಯಾದಗಿರಿ/ಗುರುಮಠಕಲ್: ಪಟ್ಟಣದ ನಾರಾಯಣಪುರ ಬಡಾವಣೆಯ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಜಯಂತೋತ್ಸವ ನಾಳೆ ಮಂಗಳವಾರ ವಿಜೃಂಭಣೆಯಿಂದ ಜರುಗಿಸಲಾಗುವುದು ಎಂದು ದೇವಸ್ಥಾನದ ಸಮಿತಿಯವರು ತಿಳಿಸಿದ್ದಾರೆ.
ಪ್ರತಿ ವರ್ಷ ಶ್ರಾವಣ ಮಾಸ ಮುಕ್ತಾಯದ ಎರಡನೇ ಮಂಗಳವಾರ ಈ ಉತ್ಸವ ಮೊದಲಿನಿಂದ ಜರುಗಿಸುತ್ತಿದ್ದು, ಪುರವಂತರ ವೀರಗಾಸೆ ಈ ಉತ್ಸವದ ವಿಶೇಷ ಆಕರ್ಷಣೆಯಾಗಿದೆ.
ಬೆಳಿಗ್ಗೆಯಿಂದಲೇ ಪೂಜಾ ಕಾರ್ಯಕ್ರಮಗಳು ಮತ್ತು ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ ಜರುಗುವುದು, ಈ ಉತ್ಸವಕ್ಕೆ ಗುರುಮಠಕಲ್ ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ದೇವಸ್ಥಾನದ ಅಪಾರ ಭಕ್ತರು ಪಾಲ್ಗೊಳ್ಳುವರು ಎಂದು ದೇವಸ್ಥಾನ ಸಮಿತಿ ವತಿಯಿಂದ ವಿವರ ನೀಡಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ



















