ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅದ್ದೂರಿಯಾಗಿ ಜರುಗಿದ ಗೌರಿ ಪೂಜೆ

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಗದುರಿ ಗ್ರಾಮದ ಶ್ರೀ ನಾರಾಯಣರಾವ ಬಿರಾದಾರ ಅವರ ಮನೆಯಲ್ಲಿ ಅದ್ದೂರಿಯಾಗಿ ಗೌರಿ ಪೂಜೆ ನೆರವೇರಿಸಲಾಯಿತು. ಈ ಗೌರಿ ಪೂಜೆಗೆ ಸ್ಥಳೀಯವಾಗಿ ಆಡು ಭಾಷೆಯಲ್ಲಿ ಲಕ್ಷ್ಮೀ ಪೂಜೆ ಅಂತಲೂ ಕರೆಯುತ್ತಾರೆ. ಈ ಹಬ್ಬವು ಪುರಾತನ ಹಿಂದೂ ಧರ್ಮದ ಪ್ರಕಾರ ಬಂದಂತಹ ಪೂಜೆಯಾಗಿದ್ದು, ಹೆಣ್ಣು ಮಕ್ಕಳು ತಮ್ಮ ಪತಿಯ ಆಯಸ್ಸು ದೀರ್ಘಕಾಲ ಮುಂದುವರಿಯಲಿ, ಹಾಗೂ ಕೌಟುಂಬಿಕ ಜೀವನ ಸುಖ, ಶಾಂತಿ, ಸಮೃದ್ಧಿಯಿಂದ ಸಾಗಲಿ ಎಂದು ಈ ಪೂಜೆಯನ್ನು ತುಂಬಾ ಭಕ್ತಿಪೂರ್ವಕವಾಗಿ ಆಚರಣೆ ಮಾಡುತ್ತಾರೆ. ಈ ಲಕ್ಷ್ಮೀ ಪೂಜೆಗೆ ಇಬ್ಬರು ಲಕ್ಷ್ಮೀಯರನ್ನು ಒಂದೆಡೆ ಕೂರಿಸಿ, ಬಣ್ಣ ಬಣ್ಣದ ಸೀರೆಯನ್ನು ತೊಡಿಸಿ ಮೈಮೇಲೆ ಒಡವೆ ವಸ್ತ್ರಗಳು ಮತ್ತಿತರೆ ಆಭರಣಗಳನ್ನು ತೊಡಿಸಿ ಅಲಂಕಾರದೊಂದಿಗೆ ತುಂಬಾ ಭಕ್ತಿಯಿಂದ ಪೂಜೆ ಮಾಡುತ್ತಾರೆ. ಈ ಗೌರಿ ಪೂಜೆಗೆ ಹುಮನಾಬಾದ ನ್ಯಾಯಾಲಯದ ನ್ಯಾಯವಾದಿಗಳಾದ ಶ್ರೀ ಪ್ರಶಾಂತ ಅಂದೇನಿಮಠ, ಸುಭಾಷ್ ಮಚಕುರೆ, ಕೇದಾರ ಅಂಬುಲ್ಗೆ, ಸಚಿನ್ ಹತ್ತೇ, ಶಿವಾನಂದ ಬಿರಾದಾರ, ಪಂಡಿತರೆಡ್ಡಿ, ವಿಜಯಕುಮಾರ್ ದಾಡಗೆ, ಶೇಕ್ ಆದಾಮ, ಚೇತನ್, ಶಂಭುಲಿಂಗ ರಾಜೊಳೆ, ರೇವಣಸಿದ್ಧ ರಾಜೊಳೆ, ಬಸಯ್ಯ ಸ್ವಾಮಿ, ಅಖಿಲೇಶ್ ಬಿರಾದಾರ, ಪ್ರದೀಪ್ ಮೂಲಗೆ, ಬಾಬುರಾವ್ ದೇಶಪಾಂಡೆ, ವೀರಕುಮಾರ್ ಬೆಳಕೇರಿ ಹಾಗೂ ಮತ್ತಿತರರು ಪೂಜೆಯಲ್ಲಿ ಭಾಗವಹಿಸಿದರು.

ವರದಿ: ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!