
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೃಷಿ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಕೃಷಿ ಪರಿಕರಗಳ ವಿತರಣೆ ಮಾಡಲಾಯಿತು.
2025 -26 ನೇ ಸಾಲಿನಲ್ಲಿ ಇಲ್ಲಿವರೆಗೂ 92 ಜನ ರೈತ ಫಲಾನುಭಾವಿಗಳಿಗೆ ತುಂತುರು ನೀರಾವರಿ ಘಟಕಗಳು ವಿತರಿಸಲಾಗಿದೆ.
ಈ ಸಂಧರ್ಭದಲ್ಲಿ ಕೃಷಿ ಅಧಿಕಾರಿ ನಾಗೇಂದ್ರ ರವರು ಮಾತನಾಡಿ ನಮ್ಮ ಕೃಷಿ ಇಲಾಖೆಯಿಂದ ನೀರಾವರಿ ಪರಿಕರ ವಿತರಣೆ ಮಾಡಿರುವ ಉದ್ದೇಶ ಗ್ರಾಮೀಣ ಭಾಗದ ರೈತರಿಗೆ ತುಂಬ ಅನುಕೂಲವಾಗಿದೆ ನಮ್ಮ ಕೃಷಿ ಇಲಾಖೆಯು ರೈತರಿಗೆ ಹತ್ತು ಹಲವು ಕಾರ್ಯಕಮಗಳು ರೂಪಿಸಿಕೊಂಡು ರೈತರಿಗೆ ವ್ಯವಸಾಯ ಮಾಡಲು ಅನುಕೂಲವಾಗಲು ಅನೇಕ ಕಾರ್ಯಕ್ರಮಗಳು ಮಾಡಿಕೊಟ್ಟಿದೆ ಇದರ ಸದುಪಯೋಗ ಪಡೆದುಕೊಂಡು ರೈತರು ಆರ್ಥಿಕವಾಗಿ ಹಾಗೂ ಸಾಮಾಜಿಗವಾಗಿ ಮುಂದೆ ಬರಬೇಕು ಎಂದರು.
ನಂತರ ಫಲಾನುಭವಿಗಳಿಗೆ ತುಂತುರು ನೀರಾವರಿ ಘಟಕದ ಪರಿಕರಗಳನ್ನು ವಿತರಣೆ ಮಾಡಿದರು.
ನಂತರ ರೈತ ಫಲಾನುಭವಿಗಳು ಇದರ ಸದುಪಯಗ ಪಡೆದುಕೊಂಡು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ನಾಗೇಂದ್ರ ಹಾಗೂ ಕೃಷಿ ಇಲಾಖೆಯ ಹನೂರು ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ವರ್ಗದವರು ಇದ್ದರು.
ವರದಿ ಉಸ್ಮಾನ್ ಖಾನ್



















