
ಯಾದಗಿರಿ/ ಗುರುಮಠಕಲ್: ಶ್ರೀ ಗಜಾನನ ಉತ್ಸವ ಸಮಿತಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಯಾದಗಿರಿ ವಿಭಾಗ ಗುರುಮಠಕಲ್ ಘಟಕದ ಸಿಬ್ಬಂದಿ ವತಿಯಿಂದ ನಾಳೆ ಗಣೇಶ ವಿಸರ್ಜನೆ ನಿಮಿತ್ಯ ಇಂದು ಬಸ್ ನಿಲ್ದಾಣದಲ್ಲಿ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಸದಾ ಪ್ರಯಾಣಿಕರಿಂದ ತುಂಬಿರುವ ಗುರುಮಠಕಲ್ ಬಸ್ ನಿಲ್ದಾಣ ಇಂದು ಗಣೇಶ ಉತ್ಸವ ಸಮಿತಿ ವತಿಯಿಂದ ಆಚರಿಸಲಾಗಿರುವ ಕಾರ್ಯಕ್ರಮದಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಊರಿಗೆ ತೆರಳಲು ಬಂದಿರುವ ಪ್ರಯಾಣಿಸುವ ಪ್ರಯಾಣಿಕರು ಮತ್ತು ಸ್ಥಳೀಯ ಸಾರ್ವಜನಿಕರು ಪಾಲ್ಗೊಂಡು ಸಿಬ್ಬಂದಿಯವರು ಆಯೋಜಿಸಿರುವ ಅನ್ನ ಪ್ರಸಾದ ಸ್ವೀಕರಿಸಿದರು.
ಸುಮಾರು 2004 ರಿಂದ ಗಣೇಶ ಪ್ರತಿಷ್ಠಾಪನೆ ಮಾಡುತ್ತಿದ್ದು ಸುಮಾರು ಹತ್ತು ವರ್ಷಕ್ಕೂ ಹೆಚ್ಚು ದಿನಗಳಿಂದ ಅನ್ನದಾಸೋಹವನ್ನು ಸಿಬ್ಬಂದಿ ವತಿಯಿಂದ ಮಾಡುತ್ತಿದ್ದೇವೆ, ಅನ್ನ, ಟೊಮ್ಯಾಟೊ ಸಾಗು, ಸಾಂಬಾರ್, ಹುಗ್ಗಿ ಸಿಹಿ ಸಜ್ಜುಕ ಪ್ರಸಾದ ರೂಪದಲ್ಲಿ ಸುಮಾರು 4 ರಿಂದ 5 ಸಾವಿರ ಜನರಿಗೆ ವ್ಯವಸ್ಥೆ ಮಾಡಿದ್ದು, ಈ ಅನ್ನ ದಾಸೋಹದಲ್ಲಿ ಪಾಲ್ಗೊಂಡಿರುವದಾಗಿ ಸಾಯಿರೆಡ್ಡಿ ಚೆಪ್ಪೆಟ್ಲಾ ಸಂಚಾರಿ ವ್ಯವಸ್ಥಾಪಕರು ತಿಳಿಸಿದರು.
ನಾಳೆ ಗಜಾನನ ವಿಸರ್ಜನ ಕಾರ್ಯಕ್ರಮ ನಿಮಿತ್ಯ ಇವತ್ತಿನ ಈ ಅನ್ನದಾಸೋಹ ಕಾರ್ಯಕ್ರಮದಲ್ಲಿ ಗುರುಮಠಕಲ್ ಘಟಕದ ಎಲ್ಲಾ ಸಿಬ್ಬಂದಿ ಭಾಗವಹಿಸಿದರು.
ವರದಿ: ಜಗದೀಶ್ ಕುಮಾರ್ ಭೂಮಾ



















