
ಬಳ್ಳಾರಿ/ ಕಂಪ್ಲಿ : ಪಟ್ಟಣದ ಹೊಸ ಬಸ್ ನಿಲ್ದಾಣದ ನಂಬರ್ 10 ಮುದ್ದಾಪುರ ರಸ್ತೆಯ 2024 25 ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಯೋಜನೆ ಅನುದಾನದಲ್ಲಿ ಹೊಸ ಬಸ್ ನಿಲ್ದಾಣದಿಂದ ನಂಬರ್ 10 ಮುದ್ದಾಪುರ ರಸ್ತೆಯಿಂದ ರಾಮಸಾಗರ ಕ್ರಾಸ್ ವರೆಗೆ 4 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮತ್ತು ಹಳೆ ಬಾಸ್ ನಿಲ್ದಾಣದ ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿ 2024 25 ನೇ ಸಾಲಿನ 50544 EPPIDIX 80 ಲಕ್ಷದಲ್ಲಿ ರಸ್ತೆ ನಿರ್ಮಾಣ ಮತ್ತು ರಾಮ್ ಸಾಗರ ಗ್ರಾಮದ ಕೆಕೆಆರ್‌ಡಿ ಯಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಒಟ್ಟು ಐದು ಕೋಟಿ 30 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಸಕ ಜಯಂ ಗಣೇಶ್ ಭೂಮಿ ಪೂಜೆ ನೆರವೇರಿಸಿದರು ನಂತರ ಮಾತನಾಡಿ ಶಾಶ್ವತವಾಗಿ ಕಂಪ್ಲಿ ಕ್ಷೇತ್ರಕ್ಕೆ ಹಗಲಿರಲು ಶ್ರಮಿಸಲಾಗುವುದು ಹೃದಯ ಭಾಗದಲಿರುವ ಇರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸ್ ರಾವ್, ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಉಸ್ಮಾನ್ ಸದಸ್ಯರಾದ ಕೆ. ಎಸ್. ಚಂದ್ ಬಾಷಾ, ಸಿ.ಆರ್. ಹನುಮಂತ, ಲಡ್ಡು ಹೊನ್ನೂರ ವಲಿ, ಎಪಿಎಂಸಿ ಅಧ್ಯಕ್ಷ ಹಬೀಬಿ ರೆಹಮಾನ, ಕಂಪ್ಲಿ ಕ್ಷೇತ್ರ ಯೂಥ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಿಯಾಜ್ ಅಹ್ಮದ್, ಮುಖಂಡರಾದ ಬಿ. ಸಿದ್ದಪ್ಪ ಕರಿಬಸವನಗೌಡ ಶಿಬಿರದಿನ್ನಿ ಗೌಸ್, ಪು. ಮಾಜಿ ಅಧ್ಯಕ್ಷ ಎಂ ಸುಧೀರ್, ಕಟ್ಟೆ ಬಸವ, ಡಿ. ಹುಲಗಪ್ಪ, ನಿಂಗಪ್ಪ, ಡಿ. ಮಹಾದೇವ, ಡಿಶ್ ಪ್ರಸಾದ್, ವಿರೂಪಾಕ್ಷಿ, ಪರಶುರಾಮ, ಶಶಿಕುಮಾರ್ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















