
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ನಂದಿಹಾಳ ಗ್ರಾಮ ಪಂಚಾಯತಿ ಅಧಿಕಾರಿ ಕಾನೂನು ಚೌಕಟ್ಟನ್ನು ಮೀರಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರವರ ಮುಖ್ಯ ಕಾರ್ಯಗಳು :
ಗ್ರಾಮ ಪಂಚಾಯಿತಿಯ ಆಡಳಿತ, ಅಭಿವೃದ್ಧಿ ಯೋಜನೆಗಳ ಅನುಷ್ಠಾನ, ಹಣಕಾಸು ನಿರ್ವಹಣೆ, ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿ, ಮತ್ತು ಪಂಚಾಯಿತಿಯ ಎಲ್ಲಾ ಕೆಲಸಗಳ ಮೇಲ್ವಿಚಾರಣೆ ಮಾಡುವುದನ್ನು ಒಳಗೊಂಡಿವೆ ಎಂಬುವ ಮೂಲ ಉದ್ದೇಶವನ್ನು ಮರೆತು ಅಧಿಕಾರ ದುರುಪಯೋಗಿಸಿಕೊಂಡರೂ ಫಲಾನುಭವಿಗಳಿಗೆ ಸಿಗಬೇಕಾದ ಮೂಲ ಭೂತ ಸೌಕರ್ಯಗಳು ವಂಚಿಸಿ ಅಧಿಕಾರ ಕರ್ತವ್ಯ ಮರೆತು ಸಾರ್ವಜನಿಕರಿಗೆ ಮೋಸ ಮಾಡಿರುತ್ತಾರೆ.
ಪಿಡಿಒ ಆಡಳಿತ ನಿರ್ವಹಣೆ ಅಧಿಕಾರ ದುರುಪಯೋಗ: ಗ್ರಾಮ ಪಂಚಾಯಿತಿಯ ಎಲ್ಲಾ ಆಡಳಿತ ನಿರ್ವಹಣೆಯನ್ನು ನೋಡಿಕೊಳ್ಳುವುದು, ಸಭೆಗಳನ್ನು ನಡೆಸುವುದು, ಮತ್ತು ಎಲ್ಲಾ ದಾಖಲೆಗಳನ್ನು ನಿರ್ವಹಿಸುವುದು.
ಅಭಿವೃದ್ಧಿ ಯೋಜನೆಗಳ ಮೂಲ ಉದ್ದೇಶವನ್ನೇ ಮರೆತ ಪಿಡಿಒ.
ಪಿಡಿಒ ಅನುಷ್ಠಾನ ಅಧಿಕಾರ ದುರುಪಯೋಗ:
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಗ್ರಾಮೀಣ ಅಭಿವೃದ್ಧಿ ಯೋಜನೆಗಳನ್ನು ಗ್ರಾಮ ಮಟ್ಟದಲ್ಲಿ ಅನುಷ್ಠಾನಗೊಳಿಸುವುದು. ಮೂಲಸೌಕರ್ಯಗಳ ನಿರ್ಮಾಣವನ್ನು ಖಚಿತಪಡಿಸುವುದು.
ಹಣಕಾಸು ನಿರ್ವಹಣೆ ದುರುಪಯೋಗ :
ಪಂಚಾಯಿತಿಯ ಹಣಕಾಸು ಲೆಕ್ಕಪತ್ರಗಳನ್ನು ನಿರ್ವಹಿಸುವುದು, ಅನುದಾನದ ಹಂಚಿಕೆ ಮತ್ತು ಬಳಕೆಯನ್ನು ನಿಯಂತ್ರಿಸುವುದು, ಮತ್ತು ಹಣದ ದುರ್ಬಳಕೆಯಾಗದಂತೆ ನೋಡಿಕೊಳ್ಳುವದನ್ನು ಅಧಿಕಾರವನ್ನು ಮರೆತ ದುರುಪಯೋಗ ಪಿಡಿಒ.
ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ ದುರುಪಯೋಗ :
ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಆಲಿಸುವುದು ಮತ್ತು ಅವುಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವುದು ಆಗಿರುತ್ತದೆ.
ಗ್ರಾಮಸ್ಥರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡುವುದನ್ನು ಬಿಟ್ಟು ಸಾರ್ವನಿಕರಿಗೆ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಿರುವ ಪಿಡಿಒ ಅಧಿಕಾರ ದುರುಪಯೋಗ.
PDO ಸಭೆಗಳ ನಿರ್ವಹಣೆ ಅಧಿಕಾರ ದುರುಪಯೋಗ:
ಗ್ರಾಮ ಪಂಚಾಯಿತಿ ಸಭೆಗಳು ಹಾಗೂ ಗ್ರಾಮಸಭೆಗಳು ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು ಮತ್ತು ತೀರ್ಮಾನಗಳನ್ನು ಅನುಷ್ಠಾನಗೊಳಿಸುವುದರ ಕರ್ತವ್ಯವನ್ನು ಮರೆತು ಜನರ ಕುಂದು ಕೊರತೆ ಸರಿಯಾಗಿ ಆಲಿಸದೆ ಪಿಡಿಒ ಅಧಿಕಾರ ದುರುಪಯೋಗ.
ಪಿಡಿಒ ಅಧಿಕಾರ ಪರಿಶೀಲನೆ ಮತ್ತು ಮೇಲ್ವಿಚಾರಣೆ ದುರುಪಯೋಗ:
ಗ್ರಾಮ ಪಂಚಾಯಿತಿಯ ಎಲ್ಲಾ ಕೆಲಸಗಳನ್ನು ಪರಿಶೀಲಿಸುವುದು ಮತ್ತು ಅವುಗಳು ಯೋಜನೆಯಂತೆ ನಡೆಯುತ್ತಿವೆಯೇ ಎಂದು ಖಚಿತಪಡಿಸುವುದನ್ನು ಮರೆತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವ
ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ (ಪಿಡಿಒ) ಅವರಿಗೆ ಗ್ರಾಮೀಣ ಜನರ ತೆರಿಗೆ ಜೊತೆಗೆ
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಂದ ಅನುದಾನ ಬರುವ ಗ್ರಾಮೀಣ ಜನರ ಮೂಲಭೂತ ಸೌಕರ್ಯಗಳು ಮಾತ್ರ ಬೇಕು.
ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ (ಪಿಡಿಒ) ಅವರಿಗೆ ಗ್ರಾಮೀಣ ಪ್ರದೇಶದ ವಾಸಿಸುತ್ತಿರುವ ಜನರ ಸಮಸ್ಯೆಗಳು ಮಾತ್ರ ಬೇಡ.
ಈ ವಿಷಯವನ್ನು ಬೆಳಗಾವಿ ಜಿಲ್ಲಾಧಿಕಾರಿ ಅವರ ಗಮನಕ್ಕೆ ವಿಷಯವನ್ನು ತಿಳಿಸಿರುತ್ತಾರೆ ನಮಗೆ ನ್ಯಾಯ ಕೊಡಿಸಿ ಎಂದು ಬಸವ್ವ ಬೆನ್ನಪ್ಪ ಮಾದರ ಅವರು ಶ್ರೀ ಅಶೋಕ ಮ. ಮ. ಪಟ್ಟಣ ಶಾಸಕರು ರಾಮದುರ್ಗ ಹಾಗೂ ಸರ್ಕಾರಿ ಮುಖ್ಯ ಸಚೇತಕರು, ಕರ್ನಾಟಕ ವಿಧಾನಸಭೆ ಬೆಂಗಳೂರು ಇವರ ಗಮನಕ್ಕೆ ಆದಷ್ಟು ಬೇಗನೆ ತಲುಪಿಸಿ, ನಮ್ಮ ಕ್ಷೇತದ್ರ ಶಾಸಕರ ಹೆಸರನ್ನು ಹಾಳು ಮಾಡುತ್ತಿರುವ ಸರಕಾರಿ ಅಧಿಕಾರಿಯನ್ನು ಅಧಿಕಾರದಿಂದ ವಜಾಗೊಳಿಸಿ ಕಾನೂನಿನ ಮೂಲಕ ನಂದಿಹಾಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿಡಿಒ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಭೀಮ್ ಆರ್ಮಿ ಭಾರತ ಏಕತ ಮಿಷನ ಅಧ್ಯಕ್ಷರು ಶ್ರೀ ಚಂದ್ರಶೇಖರ್ ಆಜಾದ್, ಅಂಬೇಡ್ಕರ ಸೇವಾ ಸಮಿತಿ ಕರ್ನಾಟಕ ಸಂಸ್ಥಾಪಕರ ಅಧ್ಯಕ್ಷರು ಡಾ. ಕೆ. ಎಮ್. ಸಂದೇಶ, ಅಖಿಲ ಕರ್ನಾಟಕ ಚೇತನ ಅಂಹಿಸಾ ರಾಷ್ಟೀಯ ದಲಿತ ಸಂಘ, ಭೀಮ ಆರ್ಮಿ ಭಾರತ ಏಕತಾ ಮಿಷನ್ ಬೆಳಗಾವಿ, ಭೀಮ ಆರ್ಮಿ ಮತೀನಕುಮಾರ ವಿಜಯಪುರ, ವಿಶ್ವ ಮಾನವ ಅಂಬೇಡ್ಕರ್ ಜೈ ಭೀಮ, ಡಿಎಸ್ಎಸ್ ಶ್ರೀ ಪರಶುರಾಮ ನೀಲನಾಯಕ ಬಾಗಲಕೋಟೆ,
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರು ಶ್ರೀ ಬಸುರಾಜ ಧರ್ಮಂತಿ ಬಾಗಲಕೋಟೆ,
ASSK ಕಾಂತರಾಜ್ ಚೌಡದೇನಹಳ್ಳಿ ರಾಜ್ಯಾಧ್ಯಕ್ಷರು.
ASSK N.K ಅರ್ಜುನ ಕಲಬುರ್ಗಿ ಜಿಲ್ಲಾಧ್ಯಕ್ಷರು.
ಇನ್ನು ಹಲವಾರು ವಿಧದ ಸಂಘಟನೆ, ನಾಯಕರು ಕಾರ್ಯಕರ್ತರು ಮುಂದಿನ ದಿನಮಾನಗಳಲ್ಲಿ ರಾಜ್ಯ ಮತ್ತು ಅಂತರ್ ರಾಜ್ಯ ಮಟ್ಟದಲ್ಲಿ ಉಗ್ರವಾದ ಹೋರಾಟವನ್ನು ಮಾಡಲಾಗುವದು ಎಂದು ಬಸವ್ವ, ಬೆನ್ನಪ್ಪ ಮಾದರ ಅವರ ಕುಟುಂಬಕ್ಕೆ ಧೈರ್ಯವನ್ನು ತುಂಬುತ್ತಾ ನಿಮ್ಮೊಂದಿಗೆ ಸದಾ ಕಾನೂನಿನ ರೀತಿಯಲ್ಲಿ ಸಕಾರಾತ್ಮಕವಾಗಿರಲಿ ನಿಮಗೆ ಸೀಗಬೇಕಾಗಿರುವ ಮೂಲಭೂತ ಸೌಕರ್ಯಗಳು ಸಿಗುವರೆಗೂ ನಿಮ್ಮೊಂದಿಗೆ ನಾವೆಲ್ಲರೂ ಮಾನಸಿಕವಾಗಿ ನೊಂದ ಕುಟುಂಬದ ಜೊತೆಗೆ ನಾವು ಇದ್ದೀವಿ ಎಂದು ಧೈರ್ಯ ತುಂಬಿದರು.
ವರದಿ: ಯಮನಪ್ಪ ಮಾದರ



















