೧. ವ್ಯತ್ಯಾಸ.
ಅನ್ನುತ್ತಿದ್ದರು ಅಂದು,
ಗುರುವೇ ನಮಃ,
ಪರಿಸ್ಥಿತಿ ಬದಲಾದ
ಹಿನ್ನೆಲೆಯಲ್ಲಿ...
ಅನ್ನುತ್ತಿದ್ದಾರೆ ಇಂದು,
ಗುರು ಏನ್ ಮಹಾ!?
೨. ತಿರುಮಂತ್ರ.
ಕಲಿತೆವು ಅಂದು
ಗುರುಗಳಿಂದ ಮಂತ್ರ,
ಹಾಕುತ್ತಿದ್ದೇವೆ ಇಂದು,
ಗುರುವಿಗೇ ತಿರುಮಂತ್ರ!
- ಶಿವಪ್ರಸಾದ್ ಹಾದಿಮನಿ.✍️.
ಕನ್ನಡ ಉಪನ್ಯಾಸಕರು.
ಕೊಪ್ಪಳ. 583231.




















