
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಳಗಾನೂರ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಶಿಕ್ಷಕಿ ಹಾಗೂ ಸಾಹಿತಿ ಮಡಿವಾಳಮ್ಮ ನಾಡಗೌಡ, ಅವರು ರಾಜ್ಯ ಸರ್ಕಾರದಿಂದ ಕೊಡ ಮಾಡುವ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶಾಲೆಯ ಎಲ್ಲಾ ಶಿಕ್ಷಕರು, ಎಸ್ ಡಿ ಎಮ್ ಸಿ ಹಾಗೂ ಗ್ರಾಮಸ್ಥರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಶೈಕ್ಷಣಿಕ ಸಾಹಿತ್ಯ ಕ್ಷೇತ್ರದಲ್ಲಿ ತಾಲೂಕಿನ ಬಳಗಾನೂರು ಗ್ರಾಮವನ್ನು ರಾಜ್ಯಮಟ್ಟಕ್ಕೆ ಕೊಂಡೊಯ್ದ ಮಡಿವಾಳಮ್ಮ ನಾಡಗೌಡ, ಅವರು ನಾನಾ ಕಡೆ ಸೇವೆ ಸಲ್ಲಿಸುತ್ತಾ ಸಾಹಿತಿಯಾಗಿ ಸಹ ಹೆಸರು ಮಾಡಿದ್ದಾರೆ ಉತ್ತಮ ಶಿಕ್ಷಕಿ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಲಭಿಸಿವೆ.
ವರದಿ : ಉಸ್ಮಾನ ಬಾಗವಾನ ( ಬಳಗಾನೂರ)



















