ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಲ್ಲರ ಒಪ್ಪಿಗೆ ಇದ್ದರೆ ಮಾತ್ರ ರಸ್ತೆ ಅಗಲೀಕರಣ ಬಗ್ಗೆ ಕ್ರಮ ವಹಿಸಲು ಮುಂದಾಗುತ್ತೇನೆ :ಶಾಸಕ ಎಂ. ಆರ್. ಮಂಜುನಾಥ್

ಹನೂರು, ರಾಮಾಪುರ ಉತ್ತಮ ವ್ಯಾಪಾರ ವಹಿವಾಟು ನಡೆಯುತ್ತಿದ್ದು ಮತ್ತಷ್ಟು ಅಭಿವೃದ್ಧಿ ಹೊಂದಲು ಮುಖ್ಯರಸ್ತೆ ಅಗಲೀಕರಣದ ಅಗತ್ಯ ಇದೆ ಶಾಸಕ ಎಂ. ಆರ್. ಮಂಜುನಾಥ್ ತಿಳಿಸಿದರು.

ತಾಲ್ಲೂಕಿನ ರಾಮಾಪುರ ಗ್ರಾಮದಲ್ಲಿ ವರ್ತಕರು ಗ್ರಾಮಸ್ಥರು ಮುಖಂಡರು ಆಯೋಜಿಸಿದ್ದ ಮುಖ್ಯ ರಸ್ತೆ ಅಗಲೀಕರಣ ಸಂಬಂಧ ಗ್ರಾಮಸ್ಥರ ಜೊತೆ ಸಭೆ ನಡೆಸಿ ಚರ್ಚಿಸಿ ಸಮಸ್ಯೆ ಬಗ್ಗೆ ಜನರಿಂದ ಬಂದ ಪ್ರತಿಕ್ರಿಯೆಗಳನ್ನು ಆಲಿಸಿ ಶಾಸಕರು ಮಾತನಾಡಿದರು. ಎಲ್ಲರ ಒಪ್ಪಿಗೆ ಇದ್ದರೆ ಮಾತ್ರ ರಸ್ತೆ ಅಗಲೀಕರಣ ಬಗ್ಗೆ ಕ್ರಮ ವಹಿಸಲು ಮುಂದಾಗುತ್ತೇನೆ ಇದರಿಂದ ಮುಂದಿನ ದಿನಗಳಲ್ಲಿ ನಿಮ್ಮ ಮಕ್ಕಳು ಯುವಕರಿಗೆ ಅನುಕೂಲವಾಗಲಿದೆ. ರಸ್ತೆ ಅಗಲೀಕರಣದಿಂದ ಮತ್ತಷ್ಟು ವ್ಯಾಪಾರ ವಹಿವಾಟುಗಳು ಅಭಿವೃದ್ಧಿ ಹೊಂದುತ್ತದೆ. ಮತ್ತು ಹೆಚ್ಚಿನ ಉಧ್ಯೋಗಗಳು ಸಿಗಲಿದೆ ಎಂದರು. ಸರ್ವೇ ಇಲಾಖೆಯ ಅಧಿಕಾರಿಗಳು ಆದಷ್ಟು ಬೇಗ ರಸ್ತೆಯನ್ನು ಸರ್ವೇ ನಡೆಸಿ ರಸ್ತೆಯ ಬಗ್ಗೆ ಮಾಹಿತಿಯನ್ನು ನೀಡುವಂತೆ ಸೂಚಿಸಿದರು.
ರಾಮಾಪುರ ವ್ಯಾಪ್ತಿಯಲ್ಲಿ ವಿವಿಧ ಭಾಗಗಳಲ್ಲಿ ನೀರಿನ ಸಮಸ್ಯೆ ಎದುರಾಗಿರುವ ಬಗ್ಗೆ ಸಾರ್ವಜನಿಕರ ಶಾಸಕ ಎಂ. ಆರ್. ಮಂಜುನಾಥ್ ರವರ ಗಮನಕ್ಕೆ ತಂದಿದ್ದು ಇದಕ್ಕೆ ಸ್ಪಂದಿಸಿದ ಶಾಸಕರು ಗ್ರಾಮ ಪಂಚಾಯಿತಿ ಅಬಿವೃದ್ಧಿ ಅಧಿಕಾರಿ ಪುಷ್ಪಲತಾ ಅವರಿಗೆ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ತಕ್ಷಣ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಅಲ್ಲದೆ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಲು ಸರ್ವೇ ಇಲಾಖೆ ಅಧಿಕಾರಿಗಳು ಈಗಾಗಲೆ ಸರ್ವೇ ನಡೆಸಿ ಸ್ಥಳ ಗುರುತು ಮಾಡಿದ್ದಾರೆ. ಸದ್ಯದಲ್ಲೆ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಿ ಸ್ವಚ್ಚತೆಗೆ ಹೆಚ್ಚಿನ ಆಧ್ಯೆತೆ ನೀಡಲು ಕ್ರಮ ವಹಿಸಲು ಸಿದ್ದತೆ ಮಾಡಲಾಗುವುದು ಎಂದರಲ್ಲದೆ ಕ್ಷೇತ್ರ ವ್ಯಾಪ್ತಿಯ ಜಲಾಶಯಗಳಿಂದ ನದಿ ಮೂಲದಿಂದ ನೀರು ತುಂಬಿಸಲು ಕ್ರಮ ಕೈಗೊಂಡಿದ್ದು ಸದ್ಯದಲ್ಲೇ ರಾಮನ ಗುಡ್ಡೆ ಕೆರೆಗೆ ನೀರು ಬರಲಿದೆ ತದನಂತರದಲ್ಲಿ ಉಬ್ಬೇಹುಣಸೆ ಡ್ಯಾಂ ಇನ್ನಿತರ ಕೆರೆಗಳಿಗೂ ನೀರು ತುಂಬಿಸಲು ಕ್ರಮ ವಹಿಸಲಾಗುವುದು ಎಂದರು

ಈ ವೇಳೆ ಭೂ ಮಾಪನ ಇಲಾಖೆ ಎಇಇ ನಟರಾಜು ಜೆಜೆಎಂ ಇಂಜಿನಿಯರ್ ಪೂರ್ಣಿಮಾ, ಆರ್. ಐ, ಶಿವಕುಮಾರ್, ಗ್ರಾ. ಪಂ. ಪಿಡಿಓ ಪುಷ್ಪಲತಾ, ರಾಮಾಪುರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಚಿಕ್ಕರಾಜು ಶೆಟ್ಟಿ, ಪಿ.ಎಸ್.ಐ ಈಶ್ವರ್, ಚೆಸ್ಕಾಂ ಜೆಇ ನವೀನ್, ಎಸ್ ಮಹದೇವ್, ಕಿಟ್ಟಣ್ಣ, ರಾಜಣ್ಣ, ಸುನಿಲ್, ಡಿ ಆರ್ ಹಾರ್ಡ್ ವೇರ್ ಸೀನಪ್ಪ, ಅನಿಲ್ , ಸುರೇಶ್, ದಯಾನಂದ, ಜಯ, ಜಗದೀಶ್, ವೀರಭದ್ರ, ತಂಗವೇಲು, ವಿಜಯ್ ಕುಮಾರ್, ಮುನೇಶ,
ಎಸ್. ಆರ್. ಮಹದೇವ್, ಮುತ್ತುರಾಜಮ್ಮ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ವರದಿ :ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!