ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಿರ್ಮಾಣ ಕಾರ್ಯದಲ್ಲಿ ಹಾರ್ಡ್ ವೇರ್ ಸಾಮಾಗ್ರಿಗಳ ಪಾತ್ರ ಪ್ರಧಾನ : ಶಾಸಕಿ ಅನ್ನಪೂರ್ಣ

ಬಳ್ಳಾರಿ / ಕಂಪ್ಲಿ : ಕುಡತಿನಿ ಪಟ್ಟಣದ ಪ. ಪಂ ಬಳಿಯ ಮುಖ್ಯರಸ್ತೆ ಬದಿಯಲ್ಲಿ ಆರಂಭಗೊಂಡ ನೂತನ ಭರತ್ ಮತು ಭಗತ್ ಹಾರ್ಡ್ ವೇರ್ ಅಂಗಡಿಯನ್ನು ಶಾಸಕಿ ಈ. ಅನ್ನಪೂರ್ಣ ತುಕಾರಾಮ್ ಇವರು ಶುಕ್ರವಾರ ಉದ್ಘಾಟಿಸಿದರು.
ನಂತರ ಶಾಸಕಿ ಅನ್ನಪೂರ್ಣ ಮಾತನಾಡಿ, ಪ್ರಸ್ತುತ ಪ್ರತಿಯೊಂದು ಕಟ್ಟಡ ಕಾರ್ಯದಲ್ಲಿ ಬಳಕೆಯಾಗುತ್ತಿರುವ ಹಾರ್ಡ್ ವೇರ್ ಸಾಮಾಗ್ರಿಗಳನ್ನು ನೋಡಿದಾಗ ಹಾರ್ಡ್ ವೇರ್ ಮಾರಾಟ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದು ಆರ್ಥಿಕ ಅಭಿವೃದ್ಧಿಗೆ ನಾಂದಿಯಾಗುತ್ತಿದೆ ಸಾಮಾನ್ಯವಾಗಿ ಮನೆ, ಕಟ್ಟಡ ನಿರ್ಮಾಣ ಮತ್ತು ರಸ್ತೆ ಸೇರಿದಂತೆ ಇನ್ನಿತರ ಯಾವುದೇ ನಿರ್ಮಾಣ ಕಾರ್ಯದಲ್ಲಿ ಹಾರ್ಡ್ ವೇರ್ ಸಾಮಾಗ್ರಿಗಳ ಪಾತ್ರ ಪ್ರಧಾನವಾಗಿರುತ್ತದೆ. ಕುಡತಿನಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರು ಹಾರ್ಡ್ ವೇರ್ ಸಾಮಾಗ್ರಿಗಳನ್ನು ಖರೀದಿಸಬೇಕೆಂದು ದೂರದ ಬಳ್ಳಾರಿ ಸೇರಿದಂತೆ ಇನ್ನಿತರ ನಗರ ಪ್ರದೇಶಗಳಿಗೆ ತೆರಳಬೇಕಾಗಿತ್ತು. ಆದರೆ, ಈಗ ಕುಡತಿನಿ ಪಟ್ಟಣದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ. ರಾಜಶೇಖರ ನೇತೃತ್ವದ ಭರತ್ ಮತ್ತು ಭಗತ್ ಹಾರ್ಡ್ ವೇರ್ ಶಾಪ್ ಆರಂಭಿಸಿದ್ದು, ಈ ಭಾಗದ ಜನತೆಗೆ ಬಹಳಷ್ಟು ಅನುಕೂಲವಾಗಲಿದೆ. ಇಲ್ಲಿನ ಅಂಗಡಿಯಲ್ಲಿ ಪೈಪ್, ಪೇಂಟಿಂಗ್, ಹೋಲ್ಡರ್ ಸೇರಿದಂತೆ ಪ್ರತಿಯೊಂದು ಸಾಮಾಗ್ರಿ ಮತ್ತು ಪರಿಕರಗಳು ಒಳ್ಳೆಯ ದರದಲ್ಲಿ ದೊರಕಲಿದ್ದು, ಜನರು ಸಾಮಾಗ್ರಿಗಳ ಖರೀದಿಗೆ ಮುಂದಾಗಬೇಕು ಎಂದರು.
ತದ ನಂತರ ಶಾಸಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಎಂಎಲ್‌ಸಿ ಕೆ. ಎಸ್. ಎಲ್. ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಕಾಂಬ್ರಪ್ಪ, ಪ. ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವಿ. ರಾಜಶೇಖರ, ಉಪಾಧ್ಯಕ್ಷ ಕನಿಕೇರಿ ಪಂಪಾಪತಿ, ಸದಸ್ಯ ವೆಂಕಟರಮಣಬಾಬು, ಮುಖಂಡರಾದ ದೊಡ್ಡಬಸಪ್ಪ, ಸತ್ಯಪ್ಪ, ದೊಡ್ಡೆಪ್ಪ, ವಿಕೆಸಿ ಚಂದ್ರಪ್ಪ, ಜನಾರ್ಧನ, ಅಂಬಣ್ಣ, ಗುರುಮೂರ್ತಿ, ಪ್ರತಾಪ್, ಮಹಾಂತೇಶ, ರಾಮ, ಗಂಗಾಧರ ಸೇರಿದಂತೆ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!