ಬಳ್ಳಾರಿ / ಕಂಪ್ಲಿ : ತಾಲೂಕಿನ ಸಣಾಪುರ ಗ್ರಾಮದ ಉದ್ಭವ ವೀರಭದ್ರೇಶ್ವರ ದೇವಸ್ಥಾನ ಬಳಿಯಲ್ಲಿರುವ ನೀರು ಬಳಕೆದಾರರ ಕಛೇರಿಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ನೀರು ಬಳಕೆದಾರರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಕೆ. ಎಸ್. ದೊಡ್ಡಬಸಪ್ಪ, ಉಪಾಧ್ಯಕ್ಷೆಯಾಗಿ ಜೋಗದ ಅಯ್ಯಮ್ಮ ಅವಿರೋಧ ಆಯ್ಕೆಗೊಂಡರು.
ಡಿಆರ್ಸಿಎಸ್ ಕಚೇರಿಯ ಯರಿಸ್ವಾಮಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಮುಖ್ಯ ಕಾರ್ಯನಿರ್ವಾಹಕ ಹಳೇಗೌಡರ ಹರೀಶ್, ನಿರ್ದೇಶಕರಾದ ಟಿ. ಶರಣಪ್ಪ, ಅಯ್ಯೋದಿ ವೆಂಕಟೇಶ, ಎ. ಬಸವರಾಜ, ಸಿ. ಶರಣೇಗೌಡ, ಯು.ಅರುಣ್ಕುಮಾರ ಚಂದ್ರಮೌಳಿ ವರಪ್ರಸಾದ, ಒಂಟೆ ಪಂಪಾಪತಿ, ಬಡಗಿ ಅಯ್ಯಮ್ಮ, ಶಶಿಕಲಾ, ಡಿ.ಯಲ್ಲಪ್ಪ, ಮುಖಂಡರಾದ ಪಿ.ಮೂಕಯ್ಯಸ್ವಾಮಿ, ಈಶಪ್ಪ, ವೆಂಕಟರಾಮರಾಜು, ವೈ. ರಮಣಯ್ಯ, ಎಸ್.ಚಂದ್ರಶೇಖರಗೌಡ, ಕನಕಗಿರಿ ರೇಣುಕಾಗೌಡ, ಹೆಚ್.ಹನುಮಂತಪ್ಪ, ಕನಕಗಿರಿ ವಿರೇಶಪ್ಪ, ಮುಸ್ಟೂರು ಚನ್ನಪ್ಪ, ಎನ್.ಸುಧಾಕರ ಸೇರಿದಂತೆ ಇತರರು ಇದ್ದರು. ನಂತರ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಮಾಲಾರ್ಪಣೆಯೊಂದಿಗೆ ಅಭಿನಂದಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್



















