ಬಳ್ಳಾರಿ / ಕಂಪ್ಲಿ : ಹಜರತ್ ಪ್ರವಾದಿ ಮಹ್ಮದ್ ಪೈಗಂಬರರವರ 1500ನೇ ಜನ್ಮದಿನ ಅಚರಣೆ ಪ್ರಯುಕ್ತ ಖಾನ್ ಕಾ ಯೇ ದಿವಾನ್ಖಾನೆಯಲ್ಲಿ ಹಜರತ್ ಪ್ರವಾದಿ ಮಹ್ಮದ್ ಪೈಗಂಬರರವರ ವಂಶಸ್ಥ ಧರ್ಮಗುರುಗಳಾದ ಸೈಯ್ಯದ್ ಷಾ ಅಬುಲ್ ಹಸನ್ ಖಾದ್ರಿ ಉರ್ಫ ಆಜಂ ಪಾಷಾ ಸಾಹೇಬ್ ಸಜ್ಜಾದೆ ನಶೀನ್ ದಿವಾನ್ಖಾನೆ, ಸೈಯ್ಯದ್ ಷಾ ಅಬ್ದುಲ್ ಖಾದರ್ ಖಾದ್ರಿ ಉರ್ಫ ಮುಕ್ತಿಯಾರ್ ಸಾಹೇಬ್, ಸೈಯ್ಯದ್ಷಾಹ್ ಮೆಹೆಮೂದ್ ಖಾದ್ರಿ ಉರ್ಫ ರೈಸ್ ಸಾಹೇಬ್ ಸಜ್ಜಾದೇ ನಶೀನ್ ದರ್ಗ ಹಟ್ಟಿ ದೀವಾನ್ ಖಾನ್, ಸೈಯ್ಯದ್ಷಾಹ್ ಗೌಸ್ಮೋಹಿದ್ದೀನ್ ಖಾದ್ರಿ ಉರ್ಫ ಇಖ್ಬಾಲ್ ಸಾಹೇಬ್, ಸೈಯ್ಯದ್ ಷಾ ಹುಸೇನ್ ಪೀರ್ ಖಾದ್ರಿ ಉರ್ಫ ಮುನ್ನಾ ಸಾಹೇಬ್ ರವರಿಗೆ ಸನ್ಮಾನಿಸಿ ಗೌರವಿಸಿ ನಮನವನ್ನು ಸಲ್ಲಿಸಲಾಯಿತು. ಹಾಗೇಯೆ ಖದೀಂ ಜಾಮೀಯಾ ಜುಮ್ಮಾ ಮಸೀದಿಯ ಅಫೀಜ್ಸಾಬ್ರವರಿಗೂ ಸನ್ಮಾನಿಸಿ ಗೌರವಿಸಲಾಯಿತು. ನಂತರ ಖಿದ್ಮಾತೆ ಅಂಜುಮಾನ್ ಇಸ್ಲಾಂ ಕಮಿಟಿಯ ಸದಸ್ಯ ಹಾಗೂ ಮುಸ್ಲಿಂ ಮುಖಂಡ ಕೆ. ಮೆಹೆಬುಬ್ ಮಾತಾನಾಡಿ ಮುಂದೆ ಗುರಿ ಇರಬೇಕು. ಹಿಂದೆ ಗುರುಗಳು ಇರಬೇಕು. ಗುರು ಬದುಕಿಗೆ ದಾರಿ, ಜೀವನಕ್ಕೆ ಶಕ್ತಿ. ಎಲ್ಲರ ಬದುಕಿನಲ್ಲೂ ಗುರುವಿನ ಪಾತ್ರ ಹಿರಿದು. ಪ್ರತಿಯೊಬ್ಬರ ಜೀವನದಲ್ಲಿ ಹೆತ್ತವರಿಗೆ ಇರುವಷ್ಟೇ ಉನ್ನತ, ಪವಿತ್ರ ಸ್ಥಾನ ಗುರುಗಳಿಗೂ ಇದೆ. ಮಾತಾ, ಪಿತಾ, ಗುರು, ದೈವಂ ಎಂಬ ಮಾತಿದೆ. ಗುರುಗಳು ದೇವರ ಎಲ್ಲರೂ ಸಮಾನರು. `ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬ ಮಾತೇ ಗುರುವಿನ ಸ್ಥಾನದ ವಿಸ್ತಾರದ ಸೂಚಕವಾಗಿದೆ ಕಲಿಸುವ ಪಾಠ, ನೀಡುವ ಮಾರ್ಗದರ್ಶನ ತೋರುವ ಜ್ಞಾನದ ಬೆಳಕು ಎಲ್ಲರ ಬದುಕಿಗೊಂದು ಭದ್ರ ಬುನಾದಿ ಹಾಕಿಕೊಡುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಕ್ತಾಧಿಗಳು ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















