ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಲಿಯಂಬರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಬೀದರ್ ತಾಲೂಕಿನ ಅಲಿಯಂಬರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಇಂದು ಶಿಕ್ಷಕರ ದಿನಾಚರಣೆ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮವನ್ನು ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭಿಸಲಾಯಿತು. ಮಕ್ಕಳ ಕಲಾತ್ಮಕ ಪ್ರತಿಭೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ವಿದ್ಯಾರ್ಥಿಗಳು ತಮ್ಮ ಶಿಕ್ಷಕರಾದ ಶ್ರೀ ಮಹಾಂತೇಶ್ ಮುಖ್ಯಪಾಧ್ಯರು, ಶ್ರೀ ರಮೇಶ್ ದೈಹಿಕ ಶಿಕ್ಷಕರು, ಶ್ರೀ ವಿಠಲರಾವ್, ಶ್ರೀ ಮಾರುತಿ, ಶ್ರೀ ಸುಶೀಲ್ ಕುಮಾರ್, ಶ್ರೀ ರತನ್ ಕುಮಾರ್, ಶ್ರೀಮತಿ ವಿಮಲಮ್ಮ, ಶ್ರೀಮತಿ ಶಶಿಕಲಾ, ಶ್ರೀಮತಿ ಅನಿತಾ, ಶ್ರೀಮತಿ ಹರಿಯಲಬಾಯಿ, ಶ್ರೀಮತಿ ಶೋಭಾವತಿ, ಶ್ರೀಮತಿ ಮೀನಾಕುಮಾರಿ, ಶ್ರೀಮತಿ ಜ್ಯೋತಿ (ಚಿತ್ರಕಲಾ ಶಿಕ್ಷಕಿ), ಶ್ರೀಮತಿ ಪ್ರಭಾವತಿ ಹಾಗೂ ಶ್ರೀಮತಿ ಮೀನಾಕ್ಷಿ (LKG-UKG ಶಿಕ್ಷಕಿ) ಇವರಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗುರುಗಳ ಮಹತ್ವವನ್ನು ಸ್ಮರಿಸಲಾಯಿತು. “ಗುರುಬ್ರಹ್ಮಾ ಗುರುವಿಷ್ಣು ಗುರುದೇವೋ ಮಹೇಶ್ವರಃ” ಎಂಬ ಶ್ಲೋಕದ ಉಲ್ಲೇಖದ ಮೂಲಕ ಶಿಕ್ಷಕರ ಸ್ಥಾನವನ್ನು ದೈವದ ಸ್ಥಾನಕ್ಕೆ ಹೋಲಿಕೆ ಮಾಡಲಾಯಿತು.

ಶಿಕ್ಷಕರ ದಿನದ ಪ್ರಯುಕ್ತ ವಿದ್ಯಾರ್ಥಿಗಳು ತಮ್ಮ ಭಾಷಣಗಳಲ್ಲಿ, ” ಗುರುಗಳು ಸಮಾಜದ ದೀಪಸ್ತಂಭರು, ಜ್ಞಾನವೇ ಶ್ರೇಷ್ಠ ಧನ “, “ಒಳ್ಳೆಯ ಶಿಕ್ಷಕನು ಹೃದಯದಿಂದ ಬೋಧಿಸುತ್ತಾನೆ” ಎಂಬ ನುಡಿಗಳನ್ನು ಉಲ್ಲೇಖಿಸಿ ಶಿಕ್ಷಕರ ತ್ಯಾಗ ಮತ್ತು ಸೇವೆಯನ್ನು ಕೊಂಡಾಡಿದರು.

ಗ್ರಾಮಸ್ಥರು ಹಾಗೂ ಪೋಷಕರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶಿಕ್ಷಕರಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು.
ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸಂತೋಷ ಪಡಸಲೆ ಅವರು ಶಿಕ್ಷಕರನ್ನು ಗೌರವ ಸನ್ಮಾನ ನೆರವೆರಿಸಿ ಮಾತನಾಡಿದರು. “ಶಿಕ್ಷಕರ ಪ್ರೇರಣೆ ವಿದ್ಯಾರ್ಥಿಯ ಜೀವನವನ್ನು ರೂಪಿಸುತ್ತದೆ”, “ಗುರು ಇಲ್ಲದೆ ಶಿಕ್ಷಣವಿಲ್ಲ, ಶಿಕ್ಷಣವಿಲ್ಲದೆ ಭವಿಷ್ಯವಿಲ್ಲ” ಎಂದು ಹೇಳಿ ಶಿಕ್ಷಕರ ಸೇವೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲ ಶಿಕ್ಷಕರಿಗೂ ವಿದ್ಯಾರ್ಥಿಗಳು ಹಾಗೂ ಪೋಷಕರ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು.

ವರದಿ: ಸಾಗರ ಪಡಸಲೆ, ಬೀದರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!