ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮೂರು ದಿನಗಳಿಂದ ನಡೆದ ಕಾರ್ಯಾಚರಣೆ ಇಂದಿಗೆ ಅಂತ್ಯ, ಒಂದು ಕೋಟಿಗೂ ಅಧಿಕ ಮೌಲ್ಯದ ಸರಕಾರದ ವಿವಿಧ ಯೋಜನೆಯ ಅಕ್ಕಿ ಜಪ್ತಿ.

ಯಾದಗಿರಿ/ಗುರುಮಠಕಲ್: ಪಟ್ಟಣದ ಹೊರವಲಯ ಚಂಡರೀಕಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಇಂಡಸ್ಟ್ರೀಸ್ ಮತ್ತು ಶ್ರೀ ಲಕ್ಷ್ಮೀ ಬಾಲಾಜಿ ರೈಸ್ ಇಂಡಸ್ಟ್ರೀಸ್ ನಲ್ಲಿ ದಿ. 05.09.2025 ತಡ ರಾತ್ರಿಯಿಂದ 08.09.2025 ಸಾಯಂಕಾಲದವರೆಗೆ ನಡೆದ ಕಾರ್ಯಚರಣೆಯಲ್ಲಿ ಇಂದು ಶ್ರೀ ಲಕ್ಷ್ಮೀ ವೆಂಕಟೇಶ್ವರ ಇಂಡಸ್ಟ್ರೀಸ್ ಮತ್ತು ಶ್ರೀ ಲಕ್ಷ್ಮೀ ಬಾಲಾಜಿ ರೈಸ್ ಇಂಡಸ್ಟ್ರೀಸ್ ಗಳಲ್ಲಿ ಒಟ್ಟು 4108.90 ಕ್ವಿಂಟಲ್ ವಿವಿಧ ಲಾಟ್ ಗಳ ಅಕ್ಕಿ ವಶಪಡಿಸಿಕೊಂಡಿದ್ದು ಅದರ ಒಟ್ಟು ಮೌಲ್ಯ 01,17,92,394.20/- ರೂ ಆಗಿರುವುದಾಗಿ ಅನಿಲ್ ಕುಮಾರ ಧವಳಗಿ ಉಪನಿರ್ದೆಶಕರು ಆ. ನಾ. ಸಾ ಮತ್ತು ಗ್ರಾವ್ಯ ಇಲಾಖೆ ಯಾದಗಿರಿ ಇವರು ಪತ್ರಿಕೆಗಳಿಗೆ ಮಾಹಿತಿ ನೀಡಿದ್ದಾರೆ.

ಸರಕಾರದ ವಿವಿಧ ಯೋಜನೆಗಳ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ತಂದು ಶೇಖರಣೆ ಮಾಡಿ ಇದೇ ಅಕ್ಕಿಯನ್ನು ಪಾಲೀಶ್ ಮಾಡಿ ವಿವಿಧ ಬ್ರಾಂಡ್ ಗಳ ಹೆಸರಿನಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ಮಾಡಿ ಜಪ್ತಿ ಮಾಡಲಾಗಿದೆ ಈ ಎರಡು ರೈಸ್ ಮಿಲ್ ಮಾಲೀಕರಾದ ನರೇಂದ್ರ ರಾಥೋಡ್ ಮತ್ತು ಅಯ್ಯಪ್ಪ ರಾಥೋಡ್ ರವರ ಮೇಲೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಅಕ್ಕಿ ಸೇರಿದಂತೆ ಅಶೋಕ ಲೈಲ್ಯಾಂಡ್ ಲಾರಿ ನಂ. ಕೆಎ-39-ಎ-0227 ಅಂದಾಜು 25.00,000/- ಮತ್ತು
ಭಾರತ್ ಬೆಂಜ್ ಲಾರಿ ನಂಬರ್ ಕೆಎ-33-ಎ-5950 ಅಂದಾಜು 20.00.000/- ರೂ ವಾಹನ ವಶಕ್ಕೆ ಪಡೆಯಲಾಗಿದೆ.

ಸರಕಾರದ ವಿವಿಧ ಯೋಜನೆಯ ಅಕ್ಕಿ , Dynasty d ಚೀಲಗಳಲ್ಲಿ ತುಂಬಿರುವ ಅಕ್ಕಿ, Dara Duoble star ಲೇಬಲನಲ್ಲಿ ತುಂಬಿರುವ ಅಕ್ಕಿ ,ನುಚ್ಚು ಅಕ್ಕಿ, ಅಕ್ಕಿ ಮಿಶ್ರಿತ ಜೋಳ, ಅಕ್ಕಿ ಪೌಡರ್ ಹಿಟ್ಟು,
Volga rice d ತುಂಬಿರುವ ಅಕ್ಕಿ, Volga biriyani rice ಲೇಬಲ್ ನಲ್ಲಿ ತುಂಬಿರುವ ಅಕ್ಕಿ,
Indian white rice 5% broken, cordings ವಶಕ್ಕೆ ಪಡೆಯಲಾಗಿದೆ.

ಶಾಂತಗೌಡ ಬಿರದಾರ ತಹಸೀಲ್ದಾರರು, ಸಾಯಿಬಣ್ಣ ಆಹಾರ ನಿರೀಕ್ಷಕರು, ವೀರಣ್ಣ ಎಸ್. ದೊಡ್ಡಮನಿ ಪಿ.ಐ, ದಿನೇಶ್ ಪಿಎಸ್ಐ ಮತ್ತು ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!