ಬಳ್ಳಾರಿ/ ಕಂಪ್ಲಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ B C ಟ್ರಸ್ಟ್ ವತಿಯಿಂದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯದಂತ ಸ್ವ ಸಹಾಯ ಸಂಘದ ಪಾಲುದಾರರ ಸದಸ್ಯರ ಮಕ್ಕಳು ವೃತ್ತಿಪರ ( ಟೆಕ್ನಿಕಲ್ ಕೋರ್ಸ್ ) ಶಿಕ್ಷಣಗಳಾದ ITI, diploma, engineering, nursing, LLB, BSc, BSc agri, B Pharma, BAMS, BVA,BHM, paramedical, MBA, B.Ed, D.Ed, BDS, ಈ ರೀತಿಯ ವೃತ್ತಿಪರ ಶಿಕ್ಷಣಗಳಿಗೆ ವಿದ್ಯಾರ್ಥಿಗಳಿಗೆ ಮೂರು ವರ್ಷ ಮೇಲ್ಪಟ್ಟ ಕೋರ್ಸುಗಳಿಗೆ ಪ್ರತಿ ತಿಂಗಳಿಗೆ 1000/- ರೂಪಾಯಿಗಳು ಮತ್ತು ಮೂರು ವರ್ಷದ ಒಳಗಿನ ಕೋರ್ಸು ಗಳಿಗೆ ಪ್ರತಿ ತಿಂಗಳಿಗೆ 400/-ರೂಪಾಯಿಗಳು ಸುಜ್ಞಾನ ನಿಧಿ ಸ್ಕಾಲರ್ಶಿಪ್ ನೀಡಿಕೊಂಡು ಬರುತ್ತಿದ್ದು ಕಳೆದ ವರ್ಷ 145 ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಣೆ ಮಾಡಲಾಗುತ್ತಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಸುಮಾರು 127 ವಿದ್ಯಾರ್ಥಿಗಳಿಗೆ ಪೂಜ್ಯರು ಮಂಜೂರಾತಿಯನ್ನು ನೀಡಿದ್ದು, ಪಟ್ಟಣದ ತಳವಾರ ಓಣಿಯಲ್ಲಿ ಇರುವ ಶ್ರೀ ಎಲ್ಲಮ್ಮ ದೇವಸ್ಥಾನದ ಸಮುದಾಯ ಭವನದಲ್ಲಿ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಗೊಂಡಿರುವ 127 ವಿದ್ಯಾರ್ಥಿಗಳಿಗೆ ಸುಮಾರು 11 ಲಕ್ಷ 55,000 /- ರೂಪಾಯಿಗಳ ಮಂಜೂರಾತಿ ಪತ್ರಗಳ ವಿತರಣಾ ಕಾರ್ಯಕ್ರಮ ನಡೆಸಲಾಯಿತು. ಸದ್ರಿ ಕಾರ್ಯಕ್ರಮವನ್ನು ಧರ್ಮಸ್ಥಳ ಸಂಸ್ಥೆಯ ಬಳ್ಳಾರಿ ಜಿಲ್ಲೆಯ ನಿರ್ದೇಶಕರಾದ ರೋಹಿತಾಕ್ಷ ಅವರು ಭಾಗವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ, ಈ ಕಾರ್ಯಕ್ರಮ ನಡೆಸುತ್ತಿರುವ ಉದ್ದೇಶ ಮತ್ತು ಯೋಜನೆಯ ವಿವಿಧ ಸೌಲಭ್ಯಗಳಾದ ಸುಜ್ಞಾನ ನಿಧಿ ಶಿಷ್ಯವೇತನ, ಜ್ಞಾನದೀಪ ಶಿಕ್ಷಕರ ನೇಮಕ,ಯೋಜನೆಯ CSC ( ಕಾಮನ್ ಸರ್ವಿಸ್ ಸೆಂಟರ್ ) ಗಳಲ್ಲಿ ಮಾಡುತ್ತಿರುವ ಸರ್ವಿಸ್ ಗಳ ಬಗ್ಗೆ, ಶಾಲೆಗಳಿಗೆ ಮೂಲ ಸೌಕರ್ಯ ವದಗಣೆ, ಮಾಶಾಸನ, ಇನ್ನೂ ಹಲವು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸದ್ರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಪ್ತಗಿರಿ ಸಹಕಾರಿ ಬ್ಯಾಂಕ್ ಅಧ್ಯಕ್ಷರು ಮತ್ತು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಡಾ. ವೆಂಕಟೇಶ್ ಬರಮಕ್ಕನವರ್, ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಶಾರದಾ ಜೆ ಹಿರೇಮಠ, ಈಶ್ವರಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸಂಚಾಲಕರಾದ ಕುಮಾರಿ ಸಕಲೇಶ್ವರಿ, ಭಾರತಿ ಮಹಿಳಾ ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷರಾದ ಜ್ಯೋತಿ , ಮಾಜಿ ಪುರಸಭೆ ಸದಸ್ಯರಾದ ಬಿ. ಈರಪ್ಪ, ಹಾಗೂ ಧರ್ಮಸ್ಥಳ ಸಂಸ್ಥೆಯ ತಾಲೂಕಿನ ಯೋಜನಾಧಿಕಾರಿಗಳಾದ ರಾಘವೇಂದ್ರ, ಸಂಸ್ಥೆಯ ತಾಲೂಕಿನ ಕೃಷಿ ಅಧಿಕಾರಿಗಳಾದ ಸಂಜುಕುಮಾರ್, ತಾಲೂಕಿನ ಜ್ಞಾನವಿಕಾಸ ಸಮನ್ವಯಧಿಕಾರಿ ಶ್ರೀಮತಿ ರೇಖಾ, ವಲಯದ ಮೇಲ್ವಿಚಾರಕರಾದ, ಮಂಜಣ್ಣ, ಸಂದೀಪ್ ಮತ್ತು ಕಂಪ್ಲಿ ವಲಯದ ಸೇವಾಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ವರದಿ : ಜಿಲಾನಸಾಬ್ ಬಡಿಗೇರ್



















