ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನ್ಯಾಯದ ಹರಿಕಾರ ಪೈಗಂಬರ್ ಮಹಮ್ಮದ್ (ಸ) ಸೀರತ್ ಅಭಿಯಾನ ರಾಜ್ಯ ವ್ಯಾಪಿ ಆರಂಭ

ಬಳ್ಳಾರಿ : ನ್ಯಾಯದ ಹರಿಕಾರ ಪ್ರವಾದಿ ಪೈಗಂಬರ್ ಮೊಹಮ್ಮದ್ (ಸ) ಸೀರತ್ ಅಭಿಯಾನ 2025 ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ವಿವಿಧ ಸಂಘಟನೆಗಳ ಸಹಾಯದಲ್ಲಿ ರಾಜ್ಯ ವ್ಯಾಪಿ ಏಕಕಾಲಕ್ಕೆ ಆರಂಭಗೊಂಡಿದೆ ಎಂದು ಜಿಲ್ಲಾ ಜಮಾತೆ ಇಸ್ಲಾಮಿ ಹಿಂದ್ ಸ್ಥಾನೀಯ ಘಟಕದ ಅಧ್ಯಕ್ಷರಾದ ಸೈಯದ್ ನಿಜಾಮುದ್ದೀನ್ ತಿಳಿಸಿದರು. ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಸೆಪ್ಟೆಂಬರ್ 3 ರಂದು ಪತ್ರಿಕಾಗೋಷ್ಠಿ ಮೂಲಕ ಎರಡು ಹೊಸ ಪುಸ್ತಕಗಳ ಬಿಡುಗಡೆ ಮಾಡುವುದು. ಸೀರತ ಅಧ್ಯಯನಕ್ಕೆ ಸಂಬಂಧಿಸಿದಂತೆ ದೇಶ ಬಾಂಧವರೊಂದಿಗೆ ಸಮಾಲೋಚನೆಗಳು ಹಾಗೂ ಸಮುದಾಯದ ಪ್ರಮುಖ ವ್ಯಕ್ತಿಗಳು ಸಂಸ್ಥೆಗಳು ಸಂಘಟನೆಗಳೊಂದಿಗೆ ಸಭೆಗಳನ್ನು ಮಾಡುವುದು,
ಸ್ಥಾನೀಯ ಶಾಖೆಯ ಎಲ್ಲಾ ಸದಸ್ಯರು ಹಾಗೂ ಕಾರ್ಯಕರ್ತರ ಮೂಲಕ ವೈಯಕ್ತಿಕ ಭೇಟಿಗಳ ಸಮಯದಲ್ಲಿ ಪೈಗಂಬರ್ ಮೊಹಮ್ಮದ್ ( ಸ ) ಅರಿಯಿರಿ ಎಂಬ ಪುಸ್ತಕದ ಕನ್ನಡ ಅನುವಾದವನ್ನು ನಗರದ ಗೌರವಾನ್ವಿತ ಸಹೋದರ ಸಹೋದರರಿಗೆ ಪರಿಚಯಿಸಿ ಉಡುಗರೆಯಾಗಿ ನೀಡುವುದು,
ಸಾಧ್ಯವಾದಲೆಲ್ಲಾ ಸಣ್ಣ ಪ್ರಮಾಣದ ವಿವಿಧ ಏರಿಯಗಳಲ್ಲಿ ಪೈಗಂಬರ್ ರವರ ಜೀವನ ಕುರಿತು ಪ್ರವಚನಗಳು ಏರ್ಪಡಿಸುವುದು, ಶುಕ್ರವಾರದ ಪ್ರಾರ್ಥನೆಯ ನಂತರ ಮಸೀದಿಗಳಲ್ಲಿ ಮೊಹಮ್ಮದ್ (ಸ) ಅರಿಯಿರಿ ಸಾರ್ವಜನಿಕವಾಗಿ ಪುಸ್ತಕ ಬಿಡುಗಡೆ ಗೊಳಿಸಲಾಗುವುದು, ಸೀರತ ಅಭಿಯಾನದ ಉದ್ದಕ್ಕೂ ಪೈಗಂಬರ್ ಮೊಹಮ್ಮದ್ (ಸ) ಜೀವನದ ಎಲ್ಲಾ ಪ್ರೇರಕ ಅಂಶಗಳನ್ನು ಸಮುದಾಯದಲ್ಲಿ ಬೆಳೆಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಸಮುದಾಯದವರೊಂದಿಗೆ ಪೈಗಂಬರ್ ಮೊಹಮ್ಮದ್ (ಸ) ಸೀರತ್ ( ಜೀವನ ಚರ್ಯೆ) ಕುರಿತು ಜಾಗೃತಿ ಮತ್ತು ಆಂದೋಲನ ಮೂಡಿಸುವುದು.
ಬಳ್ಳಾರಿ ಜಿಲ್ಲೆಯ ಕೆ. ವೀರಪುರ ಹಾಗೂ ಜಾಲಬೆಂಚಿ ಗ್ರಾಮಗಳಲ್ಲಿ ದೇಶ ಬಾಂಧವರೊಂದಿಗೆ ಪೈಗಂಬರ್ ಮೊಹಮ್ಮದ್ (ಸ) ಸೀರತ್ ಕುರಿತು ಪ್ರವಚನ ಏರ್ಪಡಿಸಲಾಗಿದೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಪಿ.ಎಚ್. ಡಿ. /ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿ ಪೈಗಂಬರ್ ಮೊಹಮ್ಮದ್ (ಸ) ಜೀವನ ಕುರಿತು ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಇತರೆ ಸಮಾಜಮುಖಿ ಕೆಲಸಗಳಲ್ಲಿ ಆಸ್ಪತ್ರೆ ವೃದ್ಧಶ್ರಮ, ಅನಾಥಾಶ್ರಮಗಳ ಭೇಟಿ ನೀಡುವುದು 7ರಂದು ಬೆಳಗಲ್ ಕ್ರಾಸ್ ಇಲ್ಲಿರುವ ಪಾರ್ಕ್ ನಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ದಿನದ ಸೆಪ್ಟೆಂಬರ್ 28ರಂದು ಸಂಜೆ 6:30ಕ್ಕೆ ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ದೇಶ ಬಾಂಧವರೊಂದಿಗೆ ಸಮಾರೋಪ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಇರುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯ ವಿವಿಧ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!