ಬಳ್ಳಾರಿ / ಕಂಪ್ಲಿ: ವಿದ್ಯಾರ್ಥಿಗಳು ಮೂಢನಂಬಿಕೆ ಮೌಡ್ಯತೆಯಿಂದ ಹೊರಬಂದು ವಾಸ್ತವ ಬದುಕಿಗೆ ಹತ್ತಿರವಾಗಬೇಕು ಎಂದು ಅಂಬೇಡ್ಕರ್ ವಿಚಾರವಾದಿ ಹೆಚ್. ಪಂಪಾಪತಿ ಹೇಳಿದರು.
ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿರುವ 1ನೇ ವಾರ್ಡಿನ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಸಾಮಾಜಿಕ ಜಾಲತಾಣಗಳ ಅತಿ ಬಳಕೆಯಿಂದ ಕಾಲಹರಣ ಮತ್ತು ಅನಾರೋಗ್ಯಕ್ಕೆ ತುತ್ತಾಗುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರಿಂದ ಯುವಕ, ಯುವತಿಯರು ಪುಸ್ತಕಗಳನ್ನು ಓದುವ ಕಡೆ ಗಮನಹರಿಸಬೇಕು. ಒಂದು ಒಳ್ಳೆಯ ನಿರ್ಧಾರ ತೆಗೆದುಕೊಂಡರೆ ಅರ್ಧ ಗೆದ್ದಂತೆ, ಇನ್ನರ್ಧ ಪ್ರಯತ್ನ ಮತ್ತು ಪರಿಶ್ರಮ ಗೆಲ್ಲಿಸುತ್ತೆ. ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಗುಣಮಟ್ಟದ ಶಿಕ್ಷಣ ಪಡೆದುಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬೇಕು ಹಾಗೂ ಗುರು ಹಿರಿಯರನ್ನು ಗೌರವಿಸಬೇಕು. ಸತತ ಪ್ರಯತ್ನ ನಿರಂತರ ಅಭ್ಯಾಸ ಕಠಿಣ ಪರಿಶ್ರಮ ಆತ್ಮವಿಶ್ವಾಸದಿಂದ ಮಾತ್ರ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಲಿಕ್ಕೆ ಸಾಧ್ಯ ಹಾಗೂ ತಂತ್ರಜ್ಞಾನದ ಕಡೆ ಹೊಲವನ್ನು ಮೂಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಮಾರೇಶ, ಜಡೇಶ, ದೊಡ್ಡ ಗಾದಿಲಿಂಗಪ್ಪ, ತಾಳೂರು ಪಕ್ಕೀರಪ್ಪ, ರಾಮಕೃಷ್ಣ, ಮಲ್ಲೇಶ, ಹನುಮಂತ, ಮಹೇಶ, ತಾಯಪ್ಪ, ಅಂಜಿ, ಸ್ವಾಮಿ, ಗಂಗಪ್ಪ, ಮಹೇಶ, ಮರಿಸ್ವಾಮಿ ಸೇರಿದಂತೆ ಶಿಕ್ಷಣಪ್ರೇಮಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















