ಬಳ್ಳಾರಿ / ಕಂಪ್ಲಿ : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನರಿಗೆ ಬಹಳಷ್ಟು ಅನುಕೂಲವಾಗಿವೆ. ಆದ್ದರಿಂದ ಅರ್ಹರಿಗೆ ಅವುಗಳನ್ನು ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿ ವರ್ಗದವರ ಪಾತ್ರ ಮಹತ್ವದ್ದಾಗಿದೆ ಎಂದು ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಕೆ. ಶ್ರೀನಿವಾಸ್‌ರಾವ್ ಹೇಳಿದರು.
ತಾಲೂಕಿನ ದೇವಲಾಪುರ ಗ್ರಾ. ಪಂ ಕಛೇರಿಯಲ್ಲಿ ಸರ್ಕಾರದ ನಿರ್ದೇಶನದಂತೆ ಗ್ಯಾರಂಟಿ ಯೋಜನೆಗಳ ನಡೆ, ಗ್ರಾಮ ಪಂಚಾಯಿತಿಗಳ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರವು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಅಭೂತಪೂರ್ವ ಯಶಸ್ವಿ ಕಂಡಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳು ಮತ್ತು ಸಮಿತಿಯು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕಾಗಿದೆ ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ ಯೋಜನೆಗಳ ಸದುಪಯೋಗದೊಂದಿಗೆ ಜನರು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಇನ್ನೂ ಯಾರಿಗೆ ಯೋಜನೆಗಳು ತಲುಪಿಲ್ಲ ಅಂತವರನ್ನು ಗುರುತಿಸಿ, ಯೋಜನೆಗಳನ್ನು ಮುಟ್ಟಿಸುವ ಕೆಲಸವಾಗಬೇಕು ಎಂದರು.
ಗ್ರಾ. ಪಂ ಅಧ್ಯಕ್ಷೆ ಪೂಜಾರಿ ಈರಮ್ಮ ಇವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಈ ಸಂದರ್ಭದಲ್ಲಿ ತಾ. ಪಂ ಇಒ ಆರ್.ಕೆ.ಶ್ರೀಕುಮಾರ, ನರೇಗಾ ಎಡಿ ಮಲ್ಲನಗೌಡ ಕೆ.ಎಸ್, ಸಿಡಿಪಿಒ ಪ್ರದೀಪ್, ಕೆಇಬಿಯ ಇಇ ಮಲ್ಲಿಕಾರ್ಜುನಗೌಡ, ಎಇ ಭೀಮೇಶ, ಆಹಾರ ಇಲಾಖೆಯ ಪರಶುರಾಮ, ಯುವನಿಧಿಯ ಹಟ್ಟೆಪ್ಪ, ಗ್ಯಾರಂಟಿ ಸಮಿತಿ ಸದಸ್ಯರಾದ ಶಿವರಾಜಕುಮಾರ, ಸೊಸೈಟಿ ಅಧ್ಯಕ್ಷ ಸಿದ್ದಯ್ಯ ಸೇರಿದಂತೆ ಗ್ರಾಮಸ್ಥರು, ಜನರು ಇದ್ದರು.
ಮೆಟ್ರಿ : ತಾಲೂಕಿನ ಮೆಟ್ರಿ ಗ್ರಾಮದ ಹಳೇ ಗ್ರಾಪಂ ಕಟ್ಟಡದ ಆವರಣದಲ್ಲಿ ಗ್ಯಾರಂಟಿ ಯೋಜನೆಯ ಸಭೆ ನಡೆಯಿತು.
ವರದಿ : ಜಿಲಾನಸಾಬ್ ಬಡಿಗೇರ್



















