ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

೧೯ನೇ ವಾರ್ಷಿಕ ಸರ್ವಸಾಧಾರಣ ಸಭೆ

ಬಾಗಲಕೋಟೆ/ ಹುನಗುಂದ: ಅಝಾದ್ ಅಲ್ಪ ಸಂಖ್ಯಾತರ ಪತ್ತಿನ ಸಹಕಾರ ಸಂಘವು ಬರೀ ಮುಸ್ಲಿಂರಿಗೆ ಮೀಸಲಾಗಿಲ್ಲ, ಎಲ್ಲಾ ಸಮಾಜದವರನ್ನು ಒಳಗೊಂಡಿದೆ ಎಂದು ಸಂಘದ ಅಧ್ಯಕ್ಷ ಜಬ್ಬಾರ್ ಕಲಬುರ್ಗಿ ಹೇಳಿದರು.  
ಪಟ್ಟಣದ ಅಝಾದ್ ಅಲ್ಪ ಸಂಖ್ಯಾತರ ಪತ್ತಿನ ಸಹಕಾರ ಸಂಘದ ಕೇಂದ್ರ ಕಚೇರಿಯಲ್ಲಿ ನಡೆದ ೧೯ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸಂಘದ ಕಾರ್ಯ ನಿರ್ವಹಣೆ, ಸಮಸ್ಯೆ ಬಗ್ಗೆ ಮುಕ್ತ ಚರ್ಚೆಗೆ ವಾರ್ಷಿಕ ಸಭೆ ನಡೆಸಲಾಗುತ್ತದೆ ಶೇರುದಾರರು ಅಳುಕು ಅಂಜಿಕೆ ಇಲ್ಲದೆ ತಮ್ಮ ಅಹವಾಲು ಪ್ರಶ್ನಿಸಬಹುದು. ಸಂಘದ ೧೩೦೦ಕ್ಕೂ ಹೆಚ್ಚು ಸದಸ್ಯರೇ ಸಂಘದ ಬೆಳವಣಿಗೆಗೆ ಆಧಾರ ಸ್ತಂಭಗಳಾಗಿದ್ದಾರೆ ಎಂದರು.
ಉಪಾಧ್ಯಕ್ಷ ಮೆಹಬೂಬ್ ಸರ್ಕಾವಸ್ ಮಾತನಾಡಿ, ೨೦೦೬ರಲ್ಲಿ ಪ್ರಾರಂಭವಾದ ಆಜಾದ್ ಅಲ್ಪಸಂಖ್ಯಾತರ ಸಂಘ ೨೦೨೫ ಹೊತ್ತಿಗೆ ಸ್ವಂತ ಕಚೇರಿ ಹೊಂದುವಷ್ಟು ಸದೃಢವಾಗಿದೆ ಎಂದರು. ನಿರ್ದೇಶಕರಾದ ಇಮಾಮ ಕರಡಿ, ಹನುಮಂತ ನಡುವಿನಮನಿ, ಪರವೇಜ್ ಖಾಝಿ, ಮಹಮ್ಮದ್ ಶಬ್ಬೀರ್ ಮೌಲ್ವಿ, ರಜಾಕ ರೇಶ್ಮಿ ರಫೀಕ್, ಶರಣಪ್ಪ  ಹಳಪೇಟಿ ಕಾನೂನು ಸಲಹೆಗಾರ ಯೂನಸ್ ಸಂಗಮಕರ್ ಇದ್ದರು. ವ್ಯವಸ್ಥಾಪಕ ಮಹಬೂಬ್ ನಾಯಕ್ ನಿರೂಪಿಸಿ ವಂದಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!