ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರೆಡ್ಡಿ ಸಮುದಾಯ ಜನಗಣತಿಯಲ್ಲಿ ಹಿಂದೂ ರೆಡ್ಡಿ ಎಂದು ಬರೆಯಿಸಿ

ಬಾಗಲಕೋಟೆ: ರೆಡ್ಡಿ ಸಮುದಾಯದಲ್ಲಿನ ಉಪ ಪಂಗಡದವರೆಲ್ಲಾ ಸಾಮಾಜಿಕ, ಶೈಕ್ಷಣಿಕ, ಗಣತಿ ವೇಳೆ ಜಾತಿ ಕಾಲಂನಲ್ಲಿ ಹಿಂದೂ ರೆಡ್ಡಿ ಎಂದು ಬರೆಸುವಂತೆ ಎರೆಹೊಸಳ್ಳಿಯ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿಗಳು ಹೇಳಿದರು.

ಅವರು ಸೋಮವಾರ ನಗರದಲ್ಲಿನ ರೆಡ್ಡಿ ಸಮುದಾಯ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೆಡ್ಡಿ ಸಮುದಾಯದಲ್ಲಿ ಆರು ಉಪ ಪಂಗಡಗಳು ಇದ್ದು, ಎಲ್ಲರ ಆಹಾರ, ಪೂಜಾ ವಿಧಿವಿಧಾನಗಳು, ಅಂತ್ಯಕ್ರಿಯೆಗಳು ಸೇರಿದಂತೆ ಎಲ್ಲವೂ ಬೇರೆ ಬೇರೆ ಆಗಿವೆ. ಆದರೆ ಮೂಲದಲ್ಲಿ ನಾವೆಲ್ಲ ರೆಡ್ಡಿ ಸಮುದಾಯದವರು ಹಾಗಾಗಿ ಜನಗಣತಿ ವೇಳೆ ಎಲ್ಲರೂ ಹಿಂದೂ ರೆಡ್ಡಿ ಎಂದು ದಾಖಲಿಸಬೇಕು ಎಂದು ಅವರು ಮನವಿ ಮಾಡಿದರು.
ಹಿಂದೂ ರೆಡ್ಡಿ ಎಂದು ಬರೆಸುವದರಿಂದ ಸಮುದಾಯದ ಭವಿಷ್ಯದ ಪೀಳಿಗೆಗೆ ಮೀಸಲು ಸೌಲಭ್ಯಗಳು ಸಿಗಲು ಸಾಧ್ಯವಾಗಲಿದೆ ಎನ್ನುವದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಅವರು ಹೇಳಿದರು.

ಕರ್ನಾಟಕ ರೆಡ್ಡಿ ಜನಸಂಘ ೧೯೨೫ ರಲ್ಲಿ ಸ್ಥಾಪಿತವಾಗಿ ಸಮುದಾಯದ ಸರ್ವತೋಮುಖ ಅಭಿವೃದ್ದಿಗಾಗಿ ಕೆಲಸ ಮಾಡುತ್ತಾ ಬಂದಿದ್ದು ಇಂದು ಅದು ೧೦೦ನೇ ವಸಂತವನ್ನು ಪೂರೈಸಿ ಶತಮಾನೋತ್ಸವ ಸಂಭ್ರಮದಲ್ಲಿದೆ. ಶತಮಾನೋತ್ಸವ ಅಂಗವಾಗಿ ಬೆಂಗಳೂರಿನ ಗಾಯಿತ್ರಿ ವಿಹಾರದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಕರ್ನಾಟಕ ರೆಡ್ಡಿ ಜನಸಂಘ ಶತಮಾನೋತ್ಸವ ಕಾರ್ಯಕ್ರಮ ಆರಂಭಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ನಾಡಿನ ಸಮುದಾಯದ ಜನತೆ ಭಾಗವಹಿಸಬೇಕೆಂದು ಹೇಳಿದರು.

ರೆಡ್ಡಿ ಜನಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಸಮುದಾಯವನ್ನು ಒಟ್ಟು ಗೂಡಿಸಲು ಶ್ರಮಿಸುತ್ತಿರುವ ಸಂಘಟನೆ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಕೆಲಸ ಮಾಡುತ್ತಿದ್ದು,
ಬಾಗಲಕೋಟೆಯಲ್ಲಿಯೂ ಕೂಡಾ ೫ ಎಕರೆ ಜಾಗೆಯಲ್ಲಿ ವಿದ್ಯಾ ಸಂಸ್ಥೆ ಸ್ಥಾಪಿಸಲು ನಿರ್ಧರಿಸಿದೆ. ಸಮುದಾಯದ ಮುಖಂಡರು ಅಗತ್ಯ ಜಾಗೆಯನ್ನು ಗುರುತಿಸಿದ್ದಲ್ಲಿ ಆ ಜಾಗೆಯನ್ನು ಸಂಘದ ಹೆಸರಿನಲ್ಲಿ ಖರೀದಿಸಿ ವಿದ್ಯಾ ಸಂಸ್ಥೆ ಆರಂಭಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ರಂಗರಡ್ಡಿ ರೆಡ್ಡಿ, ಆರ್.ಎಲ್. ಕಟಗೇರಿ, ಶಾಂತರಾಜ್, ಮಹೇಶ ಕಕರೆಡ್ಡಿ, ದಯಾನಂದ ಪಾಟೀಲ, ಪರ್ವತಗೌಡ, ನಾರಾಯಣ ಹಾದಿಮನಿ, ಅಚ್ಯುತ್ ರೆಡ್ಡಿ, ವಿರೂಪಾಕ್ಷ ಹಾದಿಮನಿ, ಆರ್.ಎಸ್.ಪಾಟೀಲ ಇದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!