ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪದವಿ ಕಾಲೇಜಿನ ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು ?

ಕೊಪ್ಪಳ : ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಪ್ರಾರಂಭವಾಗಿ ಸುಮಾರು ಒಂದೂವರೆ ತಿಂಗಳಾಗುತ್ತಾ ಬಂದರೂ ಅತಿಥಿ ಉಪನ್ಯಾಸಕರ ನೇಮಕಾತಿ ಆಗಿಲ್ಲದ ಕಾರಣದಿಂದ ತರಗತಿಗಳಲ್ಲಿ ಪಾಠ, ಪ್ರವಚನಗಳು ಸರಿಯಾಗಿ ನಡೆಯುತ್ತಿಲ್ಲ, ಎಂಬುದು ಈಗ
ಸರಕಾರದ ಗಮನಕ್ಕೂ ಬಂದಿದೆ, ಈ ಸಂಬಂಧ ಕೋರ್ಟ್ ನಲ್ಲಿ ಅನೇಕ ಅತಿಥಿ ಉಪನ್ಯಾಸಕರು ಕೇಸ್ ದಾಖಲಿಸಿರುವುದರಿಂದ, ಸರಕಾರ ಈ ಬಗ್ಗೆ ಏನೂ ಮಾತಾಡದೇ ತೀರ್ಪು ಬಂದ ನಂತರ ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆ ಪ್ರಾರಂಭಿಸುತ್ತೇವೆ, ಎಂದು ಹೇಳುತ್ತಿದ್ದಾರೆ, ಈಗಾಗಲೇ ನಾಲ್ಕು ಬಾರಿ ಈ ಕುರಿತು ವಾದ ಪ್ರತಿವಾದದ ಚರ್ಚೆ ಆಗಿದ್ದರೂ
ಅಂತಿಮ ತೀರ್ಪು ಬರದೇ ಇರುವುದರಿಂದ ಕಾಲೇಜುಗಳ ಪ್ರಾಂಶುಪಾಲರೂ ಕೂಡಾ ಏನೂ ಮಾಡದ ಅಸಹಾಯಕ ಸ್ಥಿತಿಯಲ್ಲಿರುವರು. ಕಾಲೇಜಿನ ಅಧ್ಯಕ್ಷರಾದ, ಶಾಸಕರು ಈ ಬಗ್ಗೆ ಒಂದು ಬಾರಿಯೂ ವಿಚಾರಿಸದೇ ಇರುವುದು, ನಮ್ಮ ಶಿಕ್ಷಣ ವ್ಯವಸ್ಥೆ ಯ
ಅವಸ್ಥೆಯನ್ನು ತೋರಿಸುತ್ತದೆ,
ಇನ್ನು ಕೆಲವೇ ದಿನಗಳಲ್ಲಿ ಪದವಿ ಕಾಲೇಜುಗಳ ಸೆಮಿಸ್ಟರ್ ಪರೀಕ್ಷೆಗಳು ನಡೆಯಲಿದ್ದು, ಉಪನ್ಯಾಸಕರಿಲ್ಲದ ಕಾರಣದಿಂದ ಪಠ್ಯ ಕ್ರಮ
ಅಪೂರ್ಣವಾಗಿ, ಪರೀಕ್ಷೆಯನ್ನು ಹೇಗೆ ಎದುರಿಸುವುದು ಎಂಬ ಆತಂಕ ಎಲ್ಲಾ ವಿದ್ಯಾರ್ಥಿಗಳಲ್ಲಿ ಮನೆ ಮಾಡಿದೆ, ಮತ್ತು ಅವರನ್ನು ಚಿಂತೆಯಲ್ಲಿ ಮುಳುಗಿಸಿದೆ, ಈ ಬಗ್ಗೆ ವಿದ್ಯಾರ್ಥಿಗಳು
ಪ್ರಾಂಶುಪಾಲರನ್ನು ಹಲವು ಬಾರಿ ಕೇಳಿದರೂ ಯಾವ ಪ್ರಯೋಜನ ವಾಗಿಲ್ಲ, ಈ ಕುರಿತಂತೆ ಅನೇಕ ಪತ್ರಿಕೆ ಗಳಲ್ಲಿ ಉಪನ್ಯಾಸಕರ ನೇಮಕಾತಿಗೆ ಒತ್ತಾಯಿಸಿ ಪ್ರತಿಭಟನೆ ಮಾಡಿರುವ ವರದಿಗಳೂ ಪ್ರಕಟವಾಗಿವೆ, ಇದೆಲ್ಲಾ ವಿಷಯಗಳ ಅರಿವಿದ್ದೂ
ತಮಗೇನೂ ಸಂಬಂಧವಿಲ್ಲವೆನ್ನುವಂತೆ
ಜಾಣ ಕುರುಡನ್ನು ನಟಿಸುತ್ತಿರುವ ಸರಕಾರ, ಮತ್ತು
ಶಿಕ್ಷಣ ಇಲಾಖೆ, ಇನ್ನು ಮೇಲಾದರೂ ಎಚ್ಚೆತ್ತು ಕೊಂಡು ಸೂಕ್ತ ಕ್ರಮಗಳನ್ನು ಅನುಸರಿಸುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಹಸನಾಗುವತ್ತ ಹೆಜ್ಜೆ
ಇಡಲೆಂದು ಆಶಿಸುತ್ತಾ, ಈ ಬರಹಕ್ಕೆ ವಿರಾಮ ನೀಡುವೆ.

  • ಶಿವಪ್ರಸಾದ್ ಹಾದಿಮನಿ.
    ಕೊಪ್ಪಳ.583231.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

One Response

  1. ಒಳ್ಳೆಯ ಲೇಖನ ಪ್ರಸ್ತುತ ಕಾಲೇಜ್ ಶಿಕ್ಷಣದ ಬಗ್ಗೆ ಮತ್ತು ಪದವಿ ತರಗತಿಗಳ ಕುರಿತು ನಡೆಯುತ್ತಿರುವ ವಿದ್ಯಮಾನಗಳ ಕುರಿತು ಹೇಳಿದ್ದಾರೆ ಮತ್ತು ಸರ್ಕಾರ ಜಾಣ ಕುರುಡನಂತೆ ನಟಿಸುತ್ತಿದೆ ಎಂಬುದನ್ನು ಉಲ್ಲೇಖ ಮಾಡಿರುವುದು ಸತ್ಯ

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!