ಚಾಮರಾಜನಗರ /ಹನೂರು : ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಇದೆ ಸೆಪ್ಟಂಬರ್ 15 ರಂದು ಸಾಲೂರು ಬೃಹನ್ಮಠದಲ್ಲಿ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ “ಉಘೇ ಮಾದಪ್ಪ” ಕೃತಿ ಬಿಡುಗಡೆ ಸಮಾರಂಭ ಕಾರ್ಯಕ್ರಮ ನಡೆಯಲಿದೆ.
ಶಿಕ್ಷಕರಾದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎ. ವೀರಪ್ಪ ಮಲೆಮಹದೇಶ್ವರ ಬೆಟ್ಟದ ಮಾಹಿತಿಯನ್ನು ಒಳಗೊಂಡ ಸ್ಥಳ ಪುರಾಣ ಒಳಗೊಂಡ ” ಉಫೇ ಮಾದಪ್ಪ ” ಪುಸ್ತಕವನ್ನು ಬಿಡುಗಡೆ ಮಾಡುವ ಕಾರ್ಯ ಹಮ್ಮಿಕೊಳ್ಳಲಾಗಿದೆ.
ಹನೂರು ವಲಯದ ಬಸಪ್ಪನದೊಡ್ಡಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವಿ. ವೀರಪ್ಪ ಅವರು ಉಘೇ ಮಾದಪ್ಪ ಶೀರ್ಷಿಕೆಯಡಿ ಹೊರ ತಂದಿರುವ ಶ್ರೀ ಮಲೆ ಮಹದೇಶ್ವರ ಬೆಟ್ಟದ ಮಾಹಿತಿಯನ್ನು ಒಳಗೊಂಡ ಸ್ಥಳ ಪುರಾಣ ಪುಸ್ತಕವನ್ನು ಸಹಸ್ರಾರು ಭಕ್ತರ ಮಡಿಲಿಗೆ ಅರ್ಪಣೆ ಮಾಡಲಿದ್ದಾರೆ.
ಜನಿಸಿದ ತಾಲೂಕಿನ ಶಾಗ್ಯ ಗ್ರಾಮದ ಶಿವರುದ್ರಮ್ಮ ಮತ್ತು ವಿರೂಪಾಕ್ಷಪ್ಪ ದಂಪತಿ ಪುತ್ರರಾದ ವಿ.ವೀರಪ್ಪರವರು 1970ರಲ್ಲಿ ಇವರು ಮಲೆ ಮಹದೇಶ್ವರ ಬೆಟ್ಟದಲ್ಲಿ ವಾಸವಾಗಿ ಪ್ರಾಥಮಿಕ ಶಾಲೆಯಿಂದ ಪ್ರೌಢ ಶಿಕ್ಷಣದವರೆಗೂ ಸಾಲೂರು ಮಠದ ಶ್ರೀ ಮಹದೇಶ್ವರ ಶಾಲೆಯಲ್ಲೇ ಕಲಿತರು. ಮೈಸೂರಿನಲ್ಲಿ ಟಿ. ಸಿ. ಎಚ್ ತರಬೇತಿ ಪಡೆದು 1992ರಲ್ಲಿ ಶಿಕ್ಷಕ ವೃತ್ತಿ ಸೇವೆಗೆ ಸೇರಿದರು.
ಕರ್ನಾಟಕ ಗಡಿಯಂಚಿನ ಗೋಪಿನಾಥಂ ಸರ್ಕಾರಿ ಶಾಲೆಯಲ್ಲಿ 6 ವರ್ಷ, ಆಣೆಹೊಲ ಗೋಪಿನಾಥಂ ಶಾಲೆಯಲ್ಲಿ ಶಾಲೆಯಲ್ಲಿ 6 ವರ್ಷ, ಗೊರಸಾಣೆ ಸ.ಕಿ.ಪ್ರಾ ಶಾಲೆಯಲ್ಲಿ 14 ವರ್ಷ ಶಿಕ್ಷಕರಾಗಿ ಹಾಗೂ ತುಳಸಿಕೆರೆ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ 2 ವರ್ಷ, ಮೆದಗನಾಣೆ ಶಾಲೆಯಲ್ಲಿ 1 ವರ್ಷ ಸೇವೆ ಸಲ್ಲಿಸಿದ್ದಾರೆ.
ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿದ ಬಳಿಕ ಮತ್ತೆ ಗೋಪಿನಾಥಂ ಸ.ಹಿ.ಪ್ರಾ. ಶಾಲೆಯಲ್ಲಿ 4 ವರ್ಷ ಕರ್ತವ್ಯ ನಿರ್ವಹಿಸಿದ ಇವರು ಪ್ರಸ್ತುತ ಬಸಪ್ಪನದೊಡ್ಡಿ ಶಾಲೆಯಲ್ಲಿ ಕಳೆದ 2 ವರ್ಷದಿಂದ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಭಾಗದ ಗುಡ್ಡಗಾಡು ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸಿ 32 ವರ್ಷ ಸೇವೆ ಸಲ್ಲಿಸಿದ ಇವರ ಸೇವಾ ಕಾರ್ಯವನ್ನು ಗುರುತಿಸಿ 2023ರಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಕೆ.ಪಿ.ಚಿಕ್ಕವೀರಯ್ಯ ಶಿಕ್ಷಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಶ್ರೀ ಮಹದೇಶ್ವರ ಬೆಟ್ಟ “ಉಘೇ ಮಾದಪ್ಪ” ಎಂಬ 144 ಪುಟಗಳು ಇರುವ ಶ್ರೀ ಕ್ಷೇತ್ರದ ಸ್ಥಳ ಪುರಾಣದ ಮಾಹಿತಿಯನ್ನು ತಿಳಿಸುವಂತಹ ಪುಸ್ತಕವನ್ನು ಹೊರ ತಂದಿರುವುದು ಭಕ್ತರು ಹಾಗೂ ಜನರಿಗೆ ಉತ್ತಮ ಪುಸ್ತಕವಾಗಿದೆ.
ಈ ಪುಸ್ತಕದಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ರಚನೆ, ಮಾದಪ್ಪನ ಸನ್ನಿಧಿಯ ವಾಸ್ತವಿಕತೆ, ಪೌರಾಣಿಕ ಹಿನ್ನೆಲೆ, ಮರಿದೇವರ ಜನನ ಮತ್ತು ಬೆಳವಣಿಗೆ ಶ್ರೀ ಸಾಲೂರು ಬೃಹನ್ಮಠ, ಶ್ರೀ ಕ್ಷೇತ್ರದಲ್ಲಿ ಜರುಗುವ ಹರಕೆ ಮತ್ತು ಸೇವೆಗಳು, ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು, ವಸತಿ ಗೃಹಗಳ ಮಾಹಿತಿಗಳು ಇವೆ.
ಶ್ರೀ ಕ್ಷೇತ್ರದಲ್ಲಿ ಪೂಜನೀಯ ಸ್ಥಳಗಳು, ಆಲಂಬಾಡಿ ಗ್ರಾಮದ ಹಿನ್ನೆಲೆ, ಹೊಗೇನಕಲ್ ಜಲಪಾತ, ಪರಂಪರೆಯ ದೇವರ ಗುಡ್ಡರು, ಶ್ರೀ ಮಹದೇಶ್ವರರು ಸಂಚರಿಸಿದ ಎಪ್ಪತ್ತೇಳು ಮಲೆಗಳ ಸಂಪೂರ್ಣ ಮಾಹಿತಿಯಲ್ಲಿ ಒಳಗೊಂಡಿದೆ. ಜನಪದ ಗೀತೆಗಳು, ಕಂಸಾಳೆ ಹಾಡುಗಳನ್ನು ತಿಳಿಸಲಾಗಿದೆ.
ದೇಗುಲದ ಒಳಾಂಗಣ, ಹೊರಾಂಗಣ, ಶಿವ ಪಾರ್ವತಿಯ ಉತ್ಸವ ಮೂರ್ತಿ, ಅನ್ನ ಬ್ರಹೋತ್ಸವ, ಗುರು ಬ್ರಹೋತ್ಸವ, ಮಾದಪ್ಪನ ತಪ್ಪಲಿನ ದೇಗುಲಗಳು, ಮ.ಬೆಟ್ಟಕ್ಕೆ ಮೈಸೂರು ಮಹಾರಾಜರು ಭೇಟಿ ನೀಡಿ ಸಂದರ್ಭ, ಮೈಸೂರು ಮಹಾರಾಜರು ನೀಡಿದ ಕೊಡುಗೆಗಳ ಉಪಯುಕ್ತ ಮಾಹಿತಿಯ ಪುಸ್ತಕವಾಗಿದೆ.
ವರದಿ: ಉಸ್ಮಾನ್ ಖಾನ್



















