ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜಗತ್ತಿನಲ್ಲಿ ಶ್ರೇಷ್ಠತೆಯು ಕಳಕಳಿಯಿಂದ ಬರುತ್ತದೆ : ಸೋಮರೆಡ್ಡಿ ಅಳವಂಡಿ

ಜಗತ್ತಿನಲ್ಲಿ ಶ್ರೇಷ್ಠತೆಯು ಕಳಕಳಿಯಿಂದ ಬರುತ್ತದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಜಿಲ್ಲಾ ಶಾಖೆಯ ಸಭಾಪತಿ ಸೋಮರೆಡ್ಡಿ ಅಳವಂಡಿ ಅವರು ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ದಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಕೊಪ್ಪಳ ಮತ್ತು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪ್ರಥಮ ಚಿಕಿತ್ಸೆ ದಿನಾಚರಣೆ-2025 ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಅವರು ಮುಂದುವೆರೆದು ಮಾತನಾಡಿ ಎಲ್ಲರೂ ಮಾನವೀಯ ಸೇವೆಯನ್ನು ಮಾಡಬೇಕು, ನಮ್ಮ ಅಕ್ಕ ಪಕ್ಕದವರು ಸಂಕಷ್ಟಕ್ಕೆ ಒಳಪಟ್ಟಾಗ ಅವರ ನೆರವಿಗೆ ಧಾವಿಸಬೇಕು. ಎಲ್ಲರಲ್ಲಿ ಮಾನವೀಯತೆ, ಸಮಾಜದ ಪರ ಕಾಳಜಿ ಇರಬೇಕು. ನೀವು ಅಕ್ಕಪಕ್ಕದ ಸಮಸ್ಯೆಗಳಿಗೆ ಪರಿಹಾರ ಹುಡುಕಿದರೆ ನಿಮ್ಮ ಜೀವನದ ದಾರಿ ಸುಗಮವಾಗುತ್ತದೆ ನಿಮಗೆ ಉತ್ತಮವಾದ ಅವಕಾಶಗಳು ಇವೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ. ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಮನಸ್ಥಿತಿಯನ್ನು ಬೆಳಿಸಿಕೊಳ್ಳಬೇಕು. ನಮ್ಮ ಚಿಂತನೆಗಳು ಸಮಾಜ ಮುಖಿಯಾಗಿರಬೇಕು. ಕೊಪ್ಪಳದ ರೆಡ್ ಕ್ರಾಸ್ ವತಿಯಿಂದ ಒಂದು ಲಕ್ಷ ಇಪ್ಪತ್ತು ಸಾವಿರ ಜನರಿಗೆ ರಕ್ತ ಕೊಟ್ಟಿದೆ. ರೆಡ್ ಕ್ರಾಸ್ ಘಟಕವು ಅನೇಕ ಜನಪರ ಉಪಯೋಗ ಕೆಲಸಗಳನ್ನು ಮಾಡಿದೆ. ಜಗತ್ತಿನ 198 ದೇಶ ಗಳಲ್ಲಿ ರೆಡ್ ಕ್ರಾಸ್ ಶಾಖೆಗಳು ಇವೆ. ಇದರ ಉದ್ದೇಶ ಮಾನವ ಕಲ್ಯಾಣವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಜಿಲ್ಲಾ ಶಾಖೆಯ ನಿರ್ದೇಶಕರಾದ ಡಾ. ಶಿವನಗೌಡ ಪಾಟೀಲ್ ಅವರು ವಿಶ್ವ ರೆಡ್ ಕ್ರಾಸ್ ಸಂಸ್ಥೆಯ ಇತಿಹಾಸ ಮತ್ತು ಪ್ರಥಮ ಚಿಕಿತ್ಸೆಯ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅವರು ಮಾತನಾಡುತ್ತಾ ಒಬ್ಬ ವ್ಯಕ್ತಿಗೆ ಅಪಘಾತವಾದಾಗ ತಕ್ಷಣ ಸಿಗುವ ಮತ್ತು ತುರ್ತು ಸಂದರ್ಭದಲ್ಲಿ ಸಿಗುವ ಸೌಲಭ್ಯಗಳಿಂದ ಚಿಕಿತ್ಸೆ ಕೊಡಬೇಕು. ಇಲ್ಲಿ ಸಮಯ ಇರುವುದಿಲ್ಲ. ತಕ್ಷಣ ಆಂಬುಲೆನ್ಸ್ ಗೆ ಕರೆ ಮಾಡಿ ತಿಳಿಸಬೇಕು. ಪರಿಸ್ಥಿತಿಯನ್ನು ಹದಗೆಡದಂತೆ ನೋಡಿಕೊಳ್ಳಬೇಕು. ಗಾಯಳುಗಳಿಗೆ ಧೈರ್ಯ ಕೊಡಬೇಕು. ಇದರ ಮುಖ್ಯ ಉದ್ದೇಶ ಜೀವ ರಕ್ಷಣೆ. ಇದರಿಂದ ಜೀವನ ಚೇತರಿಕೆಗೆ ಸಹಾಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕೊಪ್ಪಳ ತಾಲೂಕಿನ ಕಾಮನೂರಿನ ಆಯುರ್ವೇದ ಚಿಕಿತ್ಸಾಲಯದ ವೈದ್ಯಧಿಕಾರಿ ಶ್ರೀ ಮತಿ ಕವಿತಾ ಹ್ಯಾಟಿ ವವರು ಮಹಿಳಾ ಆರೋಗ್ಯ ಮತ್ತು ಪ್ರಥಮ ಚಿಕಿತ್ಸೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಯವರು ಮಾತನಾಡುತ್ತಾ ರೆಡ್ ಸಂಸ್ಥೆಯ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಲ್ಲರಲ್ಲಿ ಸೇವಾ ಮನೋಭಾವನೆಯನ್ನು ಬೆಳಿಸಿಕೊಳ್ಳಬೇಕು. ಎಲ್ಲರೂ ಪ್ರಥಮ ಚಿಕಿತ್ಸೆ ಕುರಿತು ಜಾಗೃತಿ, ಅರಿವು ಮತ್ತು ತಿಳಿವಳಿಕೆ ಇರಬೇಕು. ಇದು ಎಲ್ಲರಿಗೂ ಸಹಾಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಜಿಲ್ಲಾ ಶಾಖೆಯ ನಿರ್ದೇಶಕರು ಮತ್ತು ಸಂಯೋಜಕರಾದ ರಾಜೇಶ್ ಯಾವಗಲ್ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಡಾ. ಅಶೋಕ ಕುಮಾರ, ಶಿಕ್ಷಣ ಪ್ರೇಮಿ ಬಿ. ಜಿ. ಕರಿಗಾರ, ಕಾಲೇಜಿನ ಹಿರಿಯ ಪ್ರಾಧ್ಯಾಪಕರದಾ ಡಾ. ಪ್ರದೀಪ್ ಕುಮಾರ, ಪ್ರೊ.ವಿಟೋಬ, ಡಾ. ನರಸಿಂಹ ಉಪಸ್ಥಿತರಿದ್ದರು. ಪ್ರಾಸ್ತವಿಕವಾಗಿ ಕೊಪ್ಪಳ ರೆಡ್ ಕ್ರಾಸ್ ಸಂಸ್ಥೆಯ ದೇವೆಂದ್ರಪ್ಪ ಅವರು ಮಾತಾನಾಡಿದರು. ಕಾರ್ಯಕ್ರಮವನ್ನು ಡಾ. ಅಶೋಕ ಕುಮಾರ ನಿರೂಪಿಸಿ, ಸ್ವಾಗತಿಸಿದರು. ಅಕ್ಕಮ್ಮ ಪ್ರಾರ್ಥನೆ ಗೀತೆ ಹಾಡಿದರು. ಡಾ. ಪ್ರದೀಪ್ ಕುಮಾರ ವಂದಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!