ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅಲಬೂರಿನ ಎಮ್. ಆರ್. ಎಸ್. ಎಸ್. ಸರ್ಕಾರಿ ಪ್ರೌಢಶಾಲೆ ಬಾಲಕರ ಖೋ – ಖೋ ಹಾಗೂ ಬಾಲ್ ಬ್ಯಾಡ್ಮಿಂಟನ್ ಮತ್ತು ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಊರಿನ ಹಾಗೂ ಶಾಲೆಯ ಹೆಮ್ಮೆಯನ್ನು ಮತ್ತೊಮ್ಮೆ ಹೆಚ್ಚಿಸುತ್ತಾರೆ. ವಿದ್ಯಾರ್ಥಿಗಳ ಜೊತೆ ದೈಹಿಕ ಶಿಕ್ಷಕರಾದ ಸತೀಶ್ ಹಾಗೂ ಶಾಲೆಯ ಸಹ ಶಿಕ್ಷಕರಾದ ನಾಗರಾಜ್ , ಬಸವರಾಜ್ ಹಾಗೂ ಮುಖ್ಯಗುರುಗಳಾದ ಮಂಗಳಮ್ಮ , ಶಾಲೆಯ ಎಲ್ಲಾ ಸಹ ಶಿಕ್ಷಕರಗಳು ಹಾಗೂ ಊರಿನ ಹಳೆಯ ವಿದ್ಯಾರ್ಥಿಗಳ ಸಹಕಾರ ಮತ್ತು ಊರಿನ ಜನರ ಪ್ರೋತ್ಸಾಹದಿಂದ ಈ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಸಾಧಿಸಿರುತ್ತಾರೆ.
ವರದಿಗಾರರು: ಎನ್ ಚಂದ್ರಗೌಡ



















