ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೂಡ್ಲಿಗಿ : ಸಮಸ್ಯೆಗಳ ಕಂತೆಯಲ್ಲಿ ಸಂತೆ.. ಹೇಳತೀರದು ಸಂತೆಯ ವ್ಯಥೆ

ವಿಜಯನಗರ ಜಿಲ್ಲೆ ಕೂಡ್ಲಿಗಿ : “ಸಂತೆ ” ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿರುವ , ವ್ಯವಹಾರ ಕೇಂದ್ರವಾಗಿದೆ. ನಿಗದಿತ ದಿನದಂದು ನಿಗದಿತ ಸ್ಥಳದಲ್ಲಿ , ಗ್ರಾಮೀಣ ಜನರು ಹಾಗೂ ಪಟ್ಟಣ ವಾಸಿಗಳು ವ್ಯಾಪಾರಸ್ಥರು ಪರಸ್ಪರ ಸಂಧಿಸುವ ವ್ಯಾಪಾರ ಕೇಂದ್ರ ಬಿಂದುವಾಗಿದೆ. “ಸಂತೆ” “ಮಾರುಕಟ್ಟೆ” ಅಥವಾ “ಬಜಾರ್” ಎಂದು ಕರೆಯುವ ವ್ಯಾಪಾರ ಕೇಂದ್ರವಾಗಿದೆ. ಇದು ಒಂದು ನಿರ್ದಿಷ್ಟ ದಿನದಂದು ನಿಗದಿತ ಸ್ಥಳದಲ್ಲಿ , ನಗರ ಹಾಗೂ ಗ್ರಾಮೀಣ ಜನರಿಗಾಗಿ ಅನುಕೂಲವಾಗುವ ತಾತ್ಕಾಲಿಕ ಬೃಹತ್ ವ್ಯಾಪಾರ ಕೇಂದ್ರ ಸ್ಥಳವಾಗಿದೆ. ಪಟ್ಟಣದ ಹೃದಯ ಭಾಗದಲ್ಲಿ ಪಟ್ಟಣದ ನಾಗರೀಕರು ಹಾಗೂ , ಸುತ್ತಮುತ್ತಲಿನ ಹಳ್ಳಿಗಳ ಜನರಿಗಾಗಿ ಅನುಕೂಲವಾಗುವಂತೆ ಏರ್ಪಡಿಸಲಾಗುವ. ತಾತ್ಕಾಲಿಕ ವಾರಾಂತ್ಯದ ದೊಡ್ಡ ಮಾರುಕಟ್ಟೆಯಾಗಿದ್ದು, ಅಲ್ಲಿ ಜನರು ತಮ್ಮ ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಬಹುದು ಮತ್ತು ಮಾರಾಟ ಮಾಡಬಹುದಾಗಿದೆ. ಈ ಹಿಂದೆ ಸಂತೆ ಸಾಂಸ್ಕೃತಿಕ ಹಾಗೂ ವ್ಯಾಪಾರ ಕೇಂದ್ರವಾಗಿತ್ತು , ಈಗ ಆಧುನಿಕ ಭರಾಟೆಗೆ ಸಿಕ್ಕು ಸಂತೆ ಕೇವಲ ವ್ಯಾಪಾರ ಕೇಂದ್ರ ಮಾತ್ರವಾಗಿ ಉಳಿದಿದೆ. ಬೃಹತ್ ಪಟ್ಟಣಗಳಲ್ಲಿ ನಗರಗಳಲ್ಲಿ ವಾರದ ಸಂತೆ ಕಾಣೆಯಾಗಿ , ಸಂತೆ ಮಾರುಕಟ್ಟೆ ದಿನ ನಿತ್ಯ ನಡೆಯುತ್ತದೆ. ಕೆಲವು ನಗರ ಪಟ್ಟಣಗಳಲ್ಲಿ ” ಸಂತೆ ” ” ಮಾಲ್ “ಎಂಬ ನಾಮಾಂಕಿತ ಹೊಂದಿ ಬಹುತೇಕ ಖಾಸಗೀಕರಣವಾಗಿದೆ ಸಂತೆ.

ಅಲೆಮಾರಿ ಸಂತೆ ಮಾರುಕಟ್ಟೆ : ಕೂಡ್ಲಿಗಿ ಪಟ್ಟಣ ಅಭಿವೃದ್ಧಿಯತ್ತ ಸಾಗುತ್ತಿದೆಯಾದರೂ , ಸಂತೆ ಮಾರುಕಟ್ಟೆ ಮಾತ್ರ ಸಮಸ್ಯೆಗಳ ಕಂತೆಯಾಗಿದೆ ಅದು ಹೇಳತೀರದಷ್ಟು ವ್ಯಥೆಗಳಿಂದ ಕೂಡಿದೆ. ಕೂಡ್ಲಿಗಿಯ ಯುವ ಪೀಳಿಗೆಗೆ ಸಂತೆ ಅಂದ್ರೆ ನೆನಪಿಗೆ ಬರೋದು , ಹೊಸಪೇಟೆ ರಸ್ತೆಯಿಂದ ಕೊಟ್ಟೂರು ರಸ್ತೆ ಮತ್ತು ಮದಕರಿ ವೃತ್ತದಿಂದ ಲಕ್ಷ್ಮೀ ಬಜಾರ್ ಅಥವಾ ಹಳೇ ಸಾರ್ವಜನಿಕ ಆಸ್ಪತ್ರೆ ವಲಯ. ಅದಕ್ಕಿಂತ ಮುನ್ನ ಹತ್ತಾರು ವರ್ಷಗಳ ಹಿಂದೆ , ಈಗಿನ ಅಂಚೆ ಕಚೇರಿ ಕೊಟ್ಟೂರು ರಸ್ತೆ ಹಾಗೂ ಹಳೇ ಅಗ್ನಿ ಶಾಮಕ ಠಾಣೆಯ ವಲಯದಲ್ಲಿ ನಡೆಸಲಾಗುತ್ತಿತ್ತು. ಆದ್ರೆ ಕೆಲ ವರ್ಷಗಳಿಂದ ಸಂತೆ ಮಾರುಕಟ್ಟೆ , ಅಲೆಮಾರಿ ಸಂತೆ ಮಾರುಕಟ್ಟೆಯಾಗಿ ಪರಿವರ್ತನೆಯ‍ಗಿದೆ. ತಾಲೂಕು ಕೇಂದ್ರಸ್ಥಾನವಾಗಿದ್ದರೂ ಕೂಡಾ , ಪಟ್ಟಣದಲ್ಲಿ ಸಂತೆಗಾಗಿ ನಿಗಧಿತ ಸ್ಥಳ ದೊರಕದಾಗಿದೆ. ಅಲೆಮಾರಿ ಸಂತೆಯಾಗಿಬಿಟ್ಟಿದೆ ಇದು ಪಟ್ಟಣದ ನ‍ಾಗರೀಕರ ದುರ್ದೈವಾಗಿದ್ದು , ಈವರೆಗೂ ಸುಸಜ್ಜಿತ ಸಂತೆಗೆಂದು ಸ್ವಂತದ್ದು ಮೈದಾನವನ್ನು ಕಲ್ಪಿಸಲಾಗಿಲ್ಲ. ಸದ್ಯ ಕೂಡ್ಲಿಗಿ ಪಟ್ಟಣದಲ್ಲಿ ಸಂತೆ ಮೊರಬ ಅಥವಾ ಬೆಂಗಳೂರು ರಸ್ತೆಯಲ್ಲಿನ , ಶ್ರೀಕೊತ್ತಲಾಂಜನೇಯ ಬಯಲು ಜಾಗ ಎಂದೇ ಗುರುತಿಸಿರುವ ಬಯಲು ಪ್ರದೇಶದಲ್ಲಿ ಜರುಗುತ್ತಿದೆ. ಕಾರಣಾಂತರದಿಂದಾಗಿ ಸೆ 5ರಂದು ಸಂತೆಯನ್ನು , ಎಪಿಎಂಸಿ ಮಾರುಕಟ್ಟೆ ವಲಯದಲ್ಲಿ ನಡೆಸಲಾಯಿತು. ಅದೇನೆ ಇರಲಿ ತಾಲೂಕು ಕೇಂದ್ರಸ್ಥಾನವಾಗಿರುವ ಕೂಡ್ಲಿಗಿ ಪಟ್ಟಣದಲ್ಲಿ , ಸಂತೆಗೆಂದು ನಿಗಧಿತ ಸ್ಥಳ ದೊರಕದಾಗಿದೆ ಅದು ಅಲೆಮಾರಿ ಸಂತೆಯಾಗಿ ಮಾರ್ಪಾಟಾಗಿದೆ. ಸಂತೆ ಕೂಡ್ಲಿಗಿ ನಾಗರೀಕರ ಪಾಲಿಗೆ ಸಮಸ್ಯೆಗಳ ಕಂತೆಯಾಗಿದ್ದು , ಅಸಂಖ್ಯಾತ ಅವ್ಯವಸ್ಥೆಗಳ ಆಗರವಾಗಿದ್ದು ಹೇಳತೀರದ ವ್ಯಥೆಗಳಿಂದ ಕೂಡಿದೆ.

“ಸಂತೆ ” ಬಲು ದೂರ ದೂರ..ಬಡವರಿಗೆ ಬಲು ದುಭಾರಿ..!?

ಕೂಡ್ಲಿಗಿ ಪಟ್ಟಣದ ಸಂತೆ ನಾಗರೀಕರ ಪಾಲಿಗೆ , ಗ್ರ‍ಾಮೀಣ ಜನತೆಯ ಪಾಲಿಗೆ ದೂರ ದೂರ..ವಾಗಿದೆ. ಮಾತ್ರವಲ್ಲ ಸಂತೆ ಪಟ್ಟಣದ ಹೊರವಲಯದಲ್ಲಿದ್ದು , ಮಹಿಳೆಯರಿಗೆ ವೃದ್ಧರಿಗೆ ಬಲು ದೂರ ಮಾತ್ರವಲ್ಲ, ಸಂತೆ ಬಲು ದುಬಾರಿಯಾಗಿದೆ ಎನ್ನುತ್ತಾರೆ ಗ್ರಾಮೀಣ ಜನರು ಪ್ರಜ್ಞಾವಂತರು. ಕಾರಣ ಪಟ್ಟಣದ ಹೃದಯ ಭಾಗದಲ್ಲಿ ಜರುಗುತ್ತಿದ್ದ ಸಂತೆಯನ್ನು , ಪಟ್ಟಣದ ಯಾವುದೋ ಮೂಲೆಯಲ್ಲಿ ಅದು ಅಭಿವೃದ್ಧಿ ಪಥದತ್ತ ಸಾಗುವ ಜಾಗಕ್ಕೆ ಸ್ಥಳ‍ಾಂತರಿಸಲ‍ಾಯಿತು. ಅದು ಅವೈಜ್ಞಾನಿಕ ನಿಲುವು ಆಗಿದ್ದು , ಬಡವರಿಗೆ ರೈತಾಪಿ ಜನರಿಗೆ ಗ್ರಾಮೀಣ ಜನರಿಗೆ ಅನಾನು ಕೂಲವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕಾರಣ ಸಂತೆ ಆರ್ಥಿಕ ಸಭಲರೇ ಹೆಚ್ಚಿರುವ ನಗರಾಭಿವೃದ್ಧಿ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದ್ದು , ಅಲ್ಲಿಗೆ ಡಾ॥ ಬಿ.ಆರ್. ಅಂಬೇಡ್ಕರ್ ನಗರ ಹಾಗೂ ರಾಜೀವ ಗಾಂದೀನಗರವಾಸಿಗಳಿಗೆ ತುಂಬಾ ದೂರವಾಗಲಿದೆ. ಬಹುತೇಕ ಗ್ರಾಮೀಣ ಪ್ರದೇಶದವರಿಗೆ ಹೇಳತೀರದಂತಹ , ಕಷ್ಟ ನಷ್ಟ ಅನುಭವಿಸುವಂತಾಗಿದೆ ಎಂದು ಕೆಲ ಸಂಘಟನೆಗಳ ಮುಖಂಡರು ಅಭಿಪ್ರಾಯವಾಗಿದೆ. ಎಸ್.ಸಿ, ಎಸ್.ಟಿ ಜನಾಂಗದವರು , ರೈತರು ಕಾರ್ಮಿಕರು ಬಡವರು ದೀನ ದಲಿತರು ಹೆಚ್ಚಿರುವ ಅಂಬೇಡ್ಕರ್ ನಗರ ರಾಜೀವ ಗಾಂಧೀನಗರವಾಸಿಗಳಿಗೆ ಸಂತೆ ದೂರ ದೂರ ಮಾತ್ರವಲ್ಲ ಬಲು ದುಬಾರಿಯಾಗಿದೆ ಎನ್ನಲಾಗುತ್ತಿದೆ. ಗ್ರಾಮೀಣ ಜನರು ಕಡಿಮೆ ಬೆಲೆಗೆ ಸಂತೆ ಮಾಡುವ ನಿರೀಕ್ಷೆಯನ್ನು ಕೈಬಿಟ್ಟಿದ್ದಾರೆ , ಅವರಿಗೂ ಕೂಡ ತೀರ ದೂರ ದೂರ ದುಭಾರಿಯಾಗಿದೆ ಎಂದು ಅಸಂಖ್ಯಾತ ಮಹಿಳೆಯರು ತಿಳಿಸಿದ್ದಾರೆ. ಕಾರಣ ಬಸ್ ನಿಲ್ದಾಣದಿಂದ ಪ್ರಮುಖ ವೃತ್ತಗಳಿಂದ ಬಹು ದೂರವಿರುವ ಸಂತೆ , ಮಾರುಕಟ್ಟೆಗೆ ತೆರಳಲು ವಾಹನ ಅವಲಂಭಿಸಲೇ ಬೇಕಾಗುತ್ತದೆ. ತಾವು ಹಳ್ಳಿಯಿಂದ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಬಂದರೂ ಕೂಡ , ಸಂತೆಗೆ ತೆರಳಲು ತಾವು ಖಾಸಗೀ ವಾಹನಕ್ಕೆ ದುಬಾರಿ ಬಾಡಿಗೆ ನೀಡಲೇಬೇಕಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳ ಹಿಂದೆ 100ರಿಂದ 200ರೂ ಸಂತೆ ಮಾಡುವ ಸಂದರ್ಭದಲ್ಲಿ , ಈಗ 250ರಿಂದ 400ಕ್ಕೂ ಹೆಚ್ಚು ಹಣ ಭರಿಸುವ ದುಸ್ಥಿತಿ ನಿರ್ಮಾಣವಾಗಿದೆ. ಈಗಿನ ಸಂತೆ ಪಟ್ಟಣದ ಹೊರ ವಲಯದಲ್ಲಿರುವದರಿಂದಾಗಿ , ಸಂತೆಗಾಗಿ ದುಪ್ಪಟ್ಟು ಬೆಲೆ ತೆರಲೇಬೇಕಾಗಿದ್ದು. ಈ ಮೊದಲಿನಂತೆಯೇ ಪಟ್ಟಣದ ಹೃದಯ ಭಾಗದಲ್ಲಿಯೇ , ಸಂತೆ ನಡೆಸಿದರೆ ಪಟ್ಟಣದವರಿಗೆ ಗ್ರಾಮೀಣ ಜನರಿಗೆ ಸಕಲಿರಿಗೂ ಕ್ಷೇಮ ಎಂದು ತಿಳಿಸಿದ್ದಾರೆ.

ಹಳೇ ಸಂತೆ ಮೈದಾನದಲ್ಲಿ ಸಂತೆ ಮಾಡಿ ಸರ್ವಜನರ ಹಿತಕಾಪಾಡಿ :ಮಹಿಳೆಯರ ಹಿರಿಯ ನಾಗರೀಕರ ಮನವಿ

ಸಂತೆ ಬಡವರ ದೀನ ದಲಿತರ ರೈತರ ಕಾರ್ಮಿಕರ , ಅಲ್ಪಸಂಖ್ಯಾತರ ಪರಿಶಿಷ್ಟ ವರ್ಗ ಪರಿಶಿಷ್ಟ ಪಂಡದ ಜನರಿಗೆ ಅಕ್ಷಯ ಪಾತ್ರೆಯಾಗಿದೆ. ಆಂಖ್ಯಾತ ಗ್ರಾಮೀಣ ಜನರ ಪಾಲಿಗೆ ವ್ಯಾಪಾರ ಕೇಂದ್ರವಾಗಿದೆ , ನೂರಾರು ವ್ಯಾಪರಿಗಳ ಪಾಲಿನ ಕಾಮದೇನಾಗಿದೆ. ಅಂತಹ ಸಂತೆ ಪಟ್ಟಣದಾಚೆಗೆ ಸ್ಥಳಾಂತರಗೊಂಡ ಪರಿಣಾಮ , ಸರ್ವರಿಗೂ ಹತ್ತಾರು ಬಗೆಯ ಅನಾನುಕೂಲಗಳನ್ನು ಹುಟ್ಟುಹಾಕಿದೆ ಎಂದು ಹಲವು ಹೋರಾಟಗಾರರು ತಿಳಿಸಿದ್ದಾರೆ. ಕಾರಣ ಪಟ್ಟಣದ ಹಳೇ ಸಂತೆ ಮಾರುಕಟ್ಟೆಯಲ್ಲಿ ಮತ್ತು ಪಾಳುಬಿದ್ದಿರುವ ಹಳೇ ಸಾರ್ವಜನಿಕ ಆಸ್ಪತ್ರೆ ಕಟ್ಟಡಗಳನ್ನು ತೆರವುಗೊಳಿಸಿ, ಸಮತಟ್ಟಾಗಿಸಿ ಸಂತೆ ವ್ಯಾಪಾರಕ್ಕೆ ವೇದಿಕೆ ಮಾಡಿಕೊಡಬಹುದಾಗಿದೆ. ಪಾಳುಬಿದ್ದಿರುವ ಹಳೇ ಆಸ್ಪತ್ರೆಯ ಸಿಬ್ಬಂದಿಯವರ ವಸತಿ ಕಟ್ಟಡಗಳನ್ನು ತೆರವುಗೊಳಿಸಿ , ಸಮತಟ್ಟಾಗಿಸಿದ ಸ್ಥಳದಲ್ಲಿ ಸುಸಜ್ಜಿತ ಸಂತೆ ಮೈದ‍ಾನ ನಿರ್ಮಿಸಬೇಕಿದೆ. ಇದರಿಂದಾಗಿ ಡಾ॥ ಬಿ.ಆರ್. ಅಂಬೇಡ್ಕರ್ ನಗರವಾಸಿಗಳಿಗೆ , ರಾಜೀವ ಗಾಂಧೀನಗರ ವಾಸಿಗಳಿಗೆ , ಶ್ರೀಪೇಟೆಬಸವೇಶ್ವರ ನಗರ ಹಾಗೂ ರಾಮನಗರ ವಾಸಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ನಾಗರೀಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಟ್ಟಣ ಪಂಚಾಯ್ತಿಯ ಎಲ್ಲಾ ವಾರ್ಡ್ ಗಳ ವಾಸಿಗಳಿಗೆ , ಪಟ್ಟಣದ ಸುತ್ತ ಮುತ್ತಲ ಎಲ್ಲಾ ಗ್ರಾಮೀಣ ಜನರಿಗೆ ತುಂಬಾ ಅನುಕೂಲವಾಗಲಿದೆ.

ಪ್ರಭಾವಿಗಳು ಮನಸ್ಸು ಮಾಡಬೇಕಿದೆ : ಕಾರಣ ಪಟ್ಟಣದ ಹಾಗೂ ತಾಲೂಕಿನ ಪ್ರಭಾವಿ ಜನಪ್ರತಿನಿಧಿಗಳು , ಶೀಘ್ರವೇ ಉತ್ತಮ ಹಾಗೂ ಜನಪರ ನಿಲುವು ತಾಳಬೇಕಿದೆ. ಸಂಬಂಧಿಸಿದಂತೆ ಸಂಬಂಧ ಪಟ್ಟ ಇಲಾಖಾಧಿಕಾರಿಗಳು , ಸಂತೆಯನ್ನು ಹಳೇ ಸಂತೆ ಮೈದ‍ಾನದಲ್ಲಿಯೇ ಮುಂದುವರಿಸುವಲ್ಲಿ ಯೋಜಿಸಬೇಕಿದೆ. ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಸುಸಜ್ಜಿತ ಸಂತೆ ಮೈದಾನ ನಿರ್ಮಾಣ ಮಾಡಿ, ಸಕಲರಿಗೆ ಕ್ಷೇಮವಾಗುವ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ಶೀಘ್ರವಾಗಿ ಕೈಗೊಳ್ಳಬೇಕೆಂದು ನಾಗರೀಕರು ಒತ್ತಾಯಿಸಿದ್ದಾರೆ. ಈ ನಿಲುವಿಗೆ ಪಟ್ಟಣದ ಹಿರಿಯ ನಾಗರೀಕರು , ಹಾಗೂ ಪಟ್ಟಣದ ಸುತ್ತ ಮುತ್ತಲ ಗ್ರಾಮಗಳ ಜನರು , ಕಾರ್ಮಿಕರ ಸಂಘಟನೆಗಳು , ರೈತರ ಸಂಘಟನೆಗಳು , ಮಹಿಳ‍ಾ ಸಂಘಟನೆಗಳು , ಕನ್ನಡಪರ ಸಂಘಟನೆಗಳು ಹಿರಿಯ ನಾಗರೀಕರು ಈ ಮೂಲಕ ಒತ್ತಾಯಿಸಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!