
ಬೆಳಗಾವಿ: ಅಥಣಿ ಪಟ್ಟಣದ ವಿಕ್ರಮಪುರ ನಗರದಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನೂತನವಾಗಿ ಸರಕಾರಿ ಪ್ರೌಢಶಾಲೆ ಉದ್ಘಾಟನೆಯನ್ನು ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸವದಿಯವರು ಶಾರದಾಂಬೆ ಭಾವಚಿತ್ರಕ್ಕೆ ಪೂಜೆ ಮಾಡುವುದರ ಮುಖಾಂತರ ಉದ್ಘಾಟಿಸಿದರು.
ಇದೇ ವೇಳೆ ಮಾತನಾಡಿದ ಶಾಸಕರು ನಾವು ಅಥಣಿ ಪಟ್ಟಣದಲ್ಲಿ ಎರಡು ಸರಕಾರಿ ಪ್ರೌಢ ಶಾಲೆಗಳನ್ನು ಪ್ರಾರಂಭಿಸಿದ್ದೇವೆ, ಒಟ್ಟು ರಾಜ್ಯದಲ್ಲಿ 140 ಶಾಲೆಗಳನ್ನು ಮಂಜೂರಾತಿ ಮಾಡಿದ್ದಾರೆ. ಅದರಲ್ಲಿ 9 ಪ್ರೌಢಶಾಲೆ ಅಥಣಿ ಕ್ಷೇತ್ರಕ್ಕೆ ಮಂಜೂರಾಗಿವೆ. ಎರಡು ಅಥಣಿ ನಗರದಲ್ಲಿದ್ದು ಉಳಿದಿದ್ದು ಗ್ರಾಮೀಣ ಪ್ರದೇಶದಲ್ಲಿ ಇವೆ, ನಾವು ಅದಕ್ಕಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದೇವೆ. ನಾವು ಉತ್ತಮವಾದ ಹಾಗೂ ಗುಣಮಟ್ಟದ ಶಿಕ್ಷಣವನ್ನ ಕೊಡುವಂತಹ ಕೆಲಸ ಮಾಡುತ್ತಿದ್ದೇವೆ.
ಮುಂದಿನ 20 ವರ್ಷದಲ್ಲಿ ನಮ್ಮ ಎಲ್ಲಾ ಜನ ಶಿಕ್ಷಣ ಕಲ್ತಿರಬೇಕು ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಅದಕ್ಕೆ ನಾವು ಅಥಣಿ ತಾಲೂಕಿನಲ್ಲಿ 11 ಗ್ರಾಮಗಳಲ್ಲಿ ಒಂದನೆಯ ತರಗತಿಯಿಂದ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುತ್ತಿದ್ದೇವೆ. ಮತ್ತು ನಮ್ಮ ಭಾಗದಲ್ಲಿ ಒಂದು ಕೇಂದ್ರೀಯ ವಿದ್ಯಾಲಯದ ಸಲುವಾಗಿ 10 ಎಕರೆ ಜಮೀನು ಮೀಸಲು ಇಟ್ಟಿದ್ದೇವೆ, ರಾಜ್ಯ ಸರ್ಕಾರ್ದಿಂದ ಏಕೈಕ ಶಾಲೆ ಇದಾಗಿದ್ದು ಶಿಫಾರಸಿಗಾಗಿ ಕೇಂದ್ರದಲ್ಲಿದೆ ಕೆಲವೇ ದಿನಗಳಲ್ಲಿ ಮಂಜೂರಾತಿ ಸಿಗುತ್ತದೆ ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಅಥಣಿ ಪುರಸಭೆ ಅಧ್ಯಕ್ಷರಾದ ಶ್ರೀಮತಿ ಶಿವಲೀಲಾ ಬುಟಾಳಿ , ಅಥಣಿ ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ದತ್ತಾ ವಾಸ್ಟರ, ಅಥಣಿ ಜನಪ್ರಿಯ ಪುರಸಭೆಯ ಸದಸ್ಯರಾದ ಕಲ್ಲೇಶ್ ಮಡ್ಡಿ, ಮಾಧ್ಯಮದ ವರದಿಗಾರರಾದ ಅಜಿತ್ ಕಾಂಬಳೆ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ರಾಕೇಶ ಮೈಗೂರ ಪುರಸಭೆಯ ಉಪಾಧ್ಯಕ್ಷರಾದ ಶ್ರೀಮತಿ ಭುವನೇಶ್ವರಿ ಯಂಕಚ್ಚಿ , ಪುರಸಭೆ ಸದಸ್ಯರಾದ ರಿಯಾಜ್ ಸನದಿ , ಶ್ರೀ ರಾಜಶೇಖರ್ ಗುಡೋಡಗಿ, ಹಿರಿಯ ಮುಖಂಡರಾದ ಶ್ರೀ ರವಿ ಬಡಕಂಬಿ, ಶ್ರೀ ಶೇಖರ ನೇಮಗೌಡ,ಶ್ರೀ ಮಹಾಂತೇಶ ಠಕ್ಕಣ್ಣವರ,ಶ್ರೀ ಆಸಿಫ್ ತಾಂಬೊಳಿ, ವಿಲೀನ ಯಳಮಲ್ಲೇ, ರಾಮನಗೌಡ ಪಾಟೀಲ್ , ಯುವ ಮುಖಂಡರಾದ ಮಂಜು ಹೋಳಿಕಟ್ಟಿ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಶಿವಾನಂದ ಕಲ್ಲಾಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎಂ ಆರ್ ಮುಂಜೆ ಹಾಗೂ ಶಿಕ್ಷಕ ಶಿಕ್ಷಕಿಯರು ವಿಧ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ವರದಿಗಾರ ವಿಠ್ಠಲ ಖೋಕಾಟೆ



















