ಬಳ್ಳಾರಿ / ಕಂಪ್ಲಿ : ತಾಲೂಕಿನ ದೇವಲಾಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಜನ ಸಭೆ ಶುಕ್ರವಾರ ನಡೆಯಿತು.
ಸಂಘದ ಅಧ್ಯಕ್ಷ ಗೌಡ್ರು ಕೆ.ಸಿದ್ದಪ್ಪ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸಂಘವು 3324 ಜನ ಸದಸ್ಯರನ್ನು ಹೊಂದಿದ್ದು, ಸುಮಾರು 94.61 ಲಕ್ಷ ಷೇರು ಬಂಡವಾಳ ಹೊದಿದೆ. ರೂ.ಸುಮಾರು 49.40 ಲಕ್ಷ ಠೇವಣಿ ಸಂಗ್ರಹಿಸಿದೆ. ಕೃಷಿಯೇತರ ಸಾಲವಾಗಿ ರೂ.11.83 ಲಕ್ಷ ಸಾಲ ನೀಡಲಾಗಿದೆ ಮತ್ತು ಸದಸ್ಯರ ಕೆ.ಸಿ.ಸಿ ಸಾಲ ರೂ.487.78 ಲಕ್ಷ 615 ಜನರಿಗೆ ವಿತರಿಸಿದೆ. 88.10 ಲಕ್ಷ ಮಧ್ಯಮಾವಧಿ ಸಾಲ ಮತ್ತು 10.54 ಲಕ್ಷ ಎಸ್ ಎಚ್ ಜಿ ಸಾಲ ಸೇರಿದಂತೆ ಒಟ್ಟು 598.73 ಲಕ್ಷ ಸಂಘದ ಸದಸ್ಯರಿಗೆ ಸಾಲ ವಿತರಿಸಲಾಗಿದೆ. 2024-25 ನೇ ಸಾಲಿನಲ್ಲಿ 171.19 ಲಕ್ಷ ರಸಗೊಬ್ಬರವನ್ನು ಮಾರಾಟ ಮಾಡಲಾಗಿದೆ. ಸಂಘವು 2024-25 ನೇ ಸಾಲಿನಲ್ಲಿ 10.98 ಲಕ್ಷ ನಿವ್ವಳ ಲಾಭಗಳಿಸಿದೆ. ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿಯಲ್ಲಿದ್ದು, ಸುತ್ತಲಿನ ರೈತ ಬಾಂಧವರಿಗೆ ಸೇವೆ ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಘವನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಹೊಂದಲು ಸಹಕರಿಸಬೇಕು ಎಂದರು.
ಪ್ರಭಾರಿ ಮುಖ್ಯಕಾರ್ಯನಿರ್ವಾಹಕ ಕೊಮಾರೆಪ್ಪ ಕೆ ಇವರು ಸಭೆಯ ವರದಿಯನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಗುಬಾಜಿ ಶಿಲ್ಪಮ್ಮ ರಾಮಾಂಜಿನಿ, ನಿರ್ದೇಶಕರಾದ ಎಸ್.ಹನುಮಂತಪ್ಪ, ಗೊರವರ ಹನುಮಂತಪ್ಪ, ಗೌಡ್ರು ಷಣ್ಮುಖಪ್ಪ, ಗೌಡ್ರು ಮಲ್ಲಿಕಾರ್ಜುನ, ಕಾರಿಗನೂರು ಹನುಮಂತಪ್ಪ, ಕೆ. ಮಹಾದೇವಪ್ಪ, ವಿ.ಮುಕ್ಕಣ್ಣ, ಪೂಜಾರಿ ರಮೇಶ, ಗೌಡ್ರು ಮಲ್ಲಮ್ಮ, ಕುರಿ ವಿಶ್ವನಾಥ, ದೇವರಮನೆ ಗಂಗಾಧರ, ಮುಖಂಡರಾದ ಜಿ.ಮರೇಗೌಡ, ಗೌಡ್ರು ಅಂಜಿನಪ್ಪ, ಬಳ್ಳಾರಿ ರಮೇಶ, ಗೌಡ್ರು ಬುಡುಗಣ್ಣ, ಪಿಡ್ಡಪ್ಪ, ದೇವರಮನೆ ಮಲ್ಲಿಕಾರ್ಜುನ, ಕರಿಬಸಪ್ಪ, ಶಿವುಕುಮಾರ, ಗೌಡ್ರು ನಾಗರಾಜ, ಆನಂದಪ್ಪ, ಲಿಂಗನಗೌಡ, ಸಿಬ್ಬಂದಿಗಳಾದ ಗೌಡ್ರು ಲಿಂಗನಗೌಡ, ಎಸ್.ಮನೋಜ್, ಹೆಚ್.ಮಾರೇಶ, ಪಿ.ಕಾಸೀಂಸಾಬ್ ಸೇರಿದಂತೆ ಸಿಬ್ಬಂದಿ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















