ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಾನವೀಯ ಸಂಬಂಧ ಬೆಳೆಸುವ ಕೆಲಸ ಶ್ಲಾಘನೀಯ – ರವಿ ಹೆಗಡೆ

ಬೆಂಗಳೂರು : ಇಂದು ಸೋಷಿಯಲ್ ಮೀಡಿಯಾಗಳು ಎಷ್ಟು ಪ್ರಭಾವಿತವಾಗಿವೆ ಎಂದರೆ ಒಂದು ಸರ್ಕಾರವನ್ನೇ ಕಿಡಿ ಹೊತ್ತಿಸಿ ಕೆಡವ ಬಲ್ಲಷ್ಟು ಪ್ರಭಾವಯುತವಾಗಿದೆ. ಪರಸ್ಪರ ಸಂಬಂಧಗಳನ್ನು ಸಂವಹನಗಳ ಮೂಲಕ ಸುಧಾರಿಸಬಹುದಾದ ಆಶಯ ಹೊಂದಿದ ಈ ಸೋಷಿಯಲ್ ಮೀಡಿಯಾಗಳು ಇಂದು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯೇ ಎಂಬ ಬಗ್ಗೆ ಸಂದೇಹವಿದೆ. ಇಂತಹ ಸಂದಿಗ್ಧ ಸಮಯಗಳಲ್ಲಿ ಉಪನ್ಯಾಸ, ಭರತನಾಟ್ಯ,ಗುರುತಿಸುವಿಕೆಯಂತಹ ಮಾನವೀಯ ಸಂಬಂಧ ಬೆಳೆಸುವ ಕೆಲಸ ಮಾಡುತ್ತಿರುವ ಲೆಕ್ಕಾಧಿಕಾರಿಗಳ ಸಂಘದ ಕೆಲಸ ಶ್ಲಾಘನೀಯ ಎಂದು ಸಂಪಾದಕರ ಸಂಪಾದಕ ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆಯವರು ಹೇಳಿದರು.
ಅವರು ಇಂದು ಆನಂದ್ ರಾವ್ ವೃತ್ತದ ಬಳಿ ಇರುವ ಲೆಕ್ಕಾಧಿಕಾರಿಗಳ ಸಂಘದಲ್ಲಿ ಶರಾವತಿ ಹಿನ್ನೀರಿನ ಮುಳುಗಡೆಯ ಪ್ರದೇಶದ ಬಾಧೆಗೊಳಪಟ್ಟು ಎಲ್ಲವನ್ನೂ ಕಳೆದುಕೊಂಡು ಉದ್ಯೋಗವನ್ನರಸುತ್ತಾ ಬೆಂಗಳೂರಿಗೆ ಬಂದು ಈಗ ನೂರಾರು ಜನರಿಗೆ ಉದ್ಯೋಗದಾತರಾದ ಸಹೋದರ ಸಾಧಕರಿಬ್ಬರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.
ಈ ಸಹೋದರರು ಇಂದು ನೂರಾರು ಜನರಿಗೆ ಉದ್ಯೋಗದಾತರಾಗಿದ್ದಾರಲ್ಲದೆ ಭಾರತದ ಜಿಡಿಪಿ ವೃದ್ದಿಸುವಲ್ಲಿ ಇವರ ಪಾತ್ರ ಬಹುಮುಖ್ಯವಾಗಿದೆ, ಹಲವರಿಗೆ ಪ್ರೇರಣೆ ಯಾಗಲಿದೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂತಸವಾಗಿದೆ ಎಂದು ಹೇಳಿದರು.
ಯೋಗ ಕುರಿತು ಡಾ. ಮಾರುತಿ ರಾಮ್ ಮನೋಜ್ಞವಾದ ಉಪನ್ಯಾಸ ನೀಡಿದರು. ಕೆಪಿಟಿಸಿಎಲ್ ನಿವೃತ್ತ ಇಂಜಿನಿಯರ್ ಶ್ರೀನಿವಾಸ್ ಅವರ ಪುತ್ರಿ ವಿದುಷಿ ರಂಜನಾ ಅವರ ದಾಸರ ಪದಗಳನ್ನಾಧಾರಿತ ರೂಪಕ ಭರತನಾಟ್ಯ ಪ್ರದರ್ಶನ ಎಲ್ಲರ ಮನ ತಣಿಸಿತು.
ಸನ್ಮಾನ ಕಾರ್ಯಕ್ರಮದಲ್ಲಿ ಸಾಹಿತಿ, ಕಾದಂಬರಿಕಾರ ಡಾ. ಗಜಾನನ ಶರ್ಮ ಹಾಗೂ ಸಾಹಿತಿ ಪ್ರಸಂಗಕರ್ತ ಗಿಂಡೀಮನೆ ಮೃತ್ಯುಂಜಯ ಅವರ ಮಾತುಗಳು ಸಭಿಕರ ಮನಸ್ಸನ್ನು ಆರ್ದ್ರಗೊಳಿಸಿತು. ಸನ್ಮಾನಿತರಾದ ಎಂ ಎಸ್ ವೆಂಕಟೇಶ್ ಹೆಗಡೆ ಹಾಗೂ ಎಂ ಎಸ್ ವಿನಾಯಕ ಹೆಗಡೆ ಅವರ ಛಲ, ಪರಿಶ್ರಮ, ಮಾದರಿಯದು; ಇಂತಹವರನ್ನು ಗುರುತಿಸುವುದು ಸೌಭಾಗ್ಯ ಎಂದು ಮಾರ್ಮಿಕವಾಗಿ ನುಡಿದರು. ಹೈಕೋರ್ಟ್ ನ ಸೀನಿಯರ್ ಅಡ್ವೋಕೇಟ್ ವಿಘ್ನೇಶ್ವರ ಶಾಸ್ತ್ರಿ ಅವರು ಡಿವಿಜಿ ಅವರ ಕಗ್ಗವನ್ನು ಪ್ರಸ್ತಾಪಿಸಿ ಕಷ್ಟಗಳ ಸುರಿಮಳೆಯಾದರೂ ದೀನ ದುರ್ಬಲರಿಗೆ ಬೆಲ್ಲಸಕ್ಕರೆ ಯಂತಾದ ಸಹೋದರರ ಗುಣಗಾನ ಮಾಡಿದರು.
ಪ್ರಕಾಶಕಿ ವಿಶಾಲಾಕ್ಷಿ ಶರ್ಮ ಅವರ ಪರಿಸರ ಪಾಠದಿಂದ ಆರಂಭವಾದ ಕಾರ್ಯಕ್ರಮದಲ್ಲಿ ಅಮೃತಾ ಗಣೇಶ್ ಪ್ರಾರ್ಥನೆ ಮಾಡಿದರು, ಮಧುಸೂದನ್ ರಾವ್ ಅಭಿನಂದನಾ ಪತ್ರ ಓದಿದರೆ, ನಿವೃತ್ತ ಆರ್ಥಿಕ ಸಲಹೆಗಾರರಾದ ಎಚ್ ಆರ್ ರೇಖಾ ಪರಿಚಯ ಕಾರ್ಯಕ್ರಮ ನೆರವೇರಿಸಿದರು. ಡಾ. ಪೂರ್ಣಿಮಾ ಗೋಪಾಲ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಕವಿಗಳಾದ ಪ್ರಭಾಕರ್ ಗಂಗೊಳ್ಳಿ ,ಡಾ. ಅಂಬುಜಾಕ್ಷಿ ಬೀರೇಶ, ರೇಣುಕಾ ಪ್ರಸನ್ನ, ಸಿದ್ದಣ್ಣ ಸೊನ್ನದ, ಕೊಪ್ಪರಂ ಅನ್ನಪೂರ್ಣ, ಧೀರೇಂದ್ರ ನಾಗರಹಳ್ಳಿ, ಸಂಘದ ಸದಸ್ಯರುಗಳಾದ ಗೋಪಾಲ, ಉಲಿಗೇಸ್ವಾಮಿ, ಸತ್ಯನಾರಾಯಣ ಬಿ, ಎಸ್ ಜೆ ಕೃಷ್ಣಮೂರ್ತಿ, ಹಿರಿಯರಾದ ಕೊಡಕ್ಕಲ್ ಶಿವಪ್ರಸಾದ್ , ವತ್ಸಲಾ, ಗೀತಾ ಸಭಾಹಿತ,
ಎಸ್‌ ಪಿ ಸುರೇಶ್ ,ಯುವ ವಕೀಲರಾದ ಸಾಗರ್ ಶಾಸ್ತ್ರಿ, ಐಶ್ವರ್ಯ ಮುಂತಾದ ಗಣ್ಯರು, ಸನ್ಮಾನಿತರ ಕುಟುಂಬದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ವಿಶ್ವೇಶ್ವರ ಗಾಯತ್ರಿ ಅವರು ವಂದನಾರ್ಪಣೆ ನೆರವೇರಿಸಿದರು.

ವರದಿ ಕೊಡಕ್ಕಲ್ ಶಿವಪ್ರಸಾದ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!