ಯಾದಗಿರಿ :2025- 26ನೇ ಸಾಲಿನ ವಕೀಲರ ಸಂಘದ ಆಡಳಿತ ಮಂಡಳಿಗೆ ನಡೆದ ಮತದಾನದಲ್ಲಿ ವಾಸುದೇವ ಕಟ್ಟಿಮನಿ ಅವರು 106 ಮತಗಳನ್ನು ಪಡೆಯುವ ಮೂಲಕ ಉಪಾಧ್ಯಕ್ಷ ಸ್ಥಾನಕ್ಕೆ ಜಯ ಸಾಧಿಸಿದ್ದಾರೆ ಈ ಸಂಬಂಧ ನ್ಯಾಯವಾದಿಗಳ ಸಂಘದ (ರಿ.) ಶಹಾಪುರ ಕಾರ್ಯಾಲಯದಲ್ಲಿ, ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕುರಕುಂದ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಮಲ್ಲು ಹಲಗಿ ಅವರಿಂದ ಹೃದಯಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ( ಎಂ.ಆರ್.ಎಚ್.ಎಸ್ ) ವಡಗೇರಾ ತಾಲೂಕು ಅಧ್ಯಕ್ಷ ಹಣಮಂತ ಮಾಲಹಳ್ಳಿ, ವಕೀಲರಾದ ಹಣಮಂತ ಬೇಟೆಗಾರ, ಶರಣು ಹೊಸಮನಿ ಇಟಗಿ, ಬಸಪ್ಪ ದೊಡ್ಮನಿ, ಮಲ್ಲಿಕಾರ್ಜುನ್ ಬೀರನಕಲ್ ಹಾಜರಿದ್ದರು.
- ಕರುನಾಡ ಕಂದ



















