
ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ನಗರ ಆರೋಗ್ಯ ಕೇಂದ್ರ ಕೋರಮಂಡಲ ವ್ಯಾಪ್ತಿಯ ಸ್ಕೂಲ್ ಆಫ್ ಮೈನ್ಸ್ ನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿಯನ್ನು ವೈದ್ಯಾಧಿಕಾರಿಗಳು ನೀಡಿದರು.
19 ವರ್ಷ ಮೇಲ್ಪಟ್ಟು 60 ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿ ರಕ್ತದಾನ ನೀಡಬಹುದು. ವಿದ್ಯಾರ್ಥಿಗಳಿಂದ 30 ಯೂನಿಟ್ಸ್ ರಕ್ತವನ್ನು ಸಂಗ್ರಹಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಉಷಾ ಮೇಡಂ ಸಿಬ್ಬಂದಿ ವರ್ಗದವರು ನಗರ ಆರೋಗ್ಯ ಕೇಂದ್ರ ಕೋರಮಂಡಲ ವೈದ್ಯಾಧಿಕಾರಿಗಳಾದ ಆಶಾಲತಾ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ ಆಶಾ ಮೆಂಟರ್ ಕವಿತಾ ಹಾಗೂ ಆರೋಗ್ಯ ಸಿಬ್ಬಂದಿ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ವರದಿ ನಾರಾಯಣಸ್ವಾಮಿ ಸಿ.




















