ಚಾಮರಾಜನಗರ :ಗುಂಡ್ಲುಪೇಟೆ ಪಟ್ಟಣವು ನಮ್ಮ ಕರ್ನಾಟಕ ರಾಜ್ಯದ ಗಡಿ ಭಾಗವಾಗಿದ್ದು ಗಡಿ ಭಾಗದಲ್ಲಿ ನೆರೆ ರಾಜ್ಯವಾದ ತಮಿಳುನಾಡು ಹಾಗೂ ಕೇರಳಕ್ಕೆ ಹಲವಾರು ಪ್ರವಾಸಿಗರು ಹಾದು ಹೋಗುವ ತಾಣವಾಗಿದ್ದರಿಂದ ರಾಷ್ಟ್ರೀಯ ಹೆದ್ದಾರಿಯ ಮಧ್ಯ ಭಾಗದಲ್ಲಿರುವ ವಿದ್ಯುತ್ ಕಂಬಗಳಿಗೆ ಕೆಂಪು ಮತ್ತು ಹಳದಿ ಬಣ್ಣವನ್ನು ಹೊಡಿಸುವುದರಿಂದ ಕನ್ನಡದ ಗೌರವ ಹೆಚ್ಚಾದಂತೆ ಆಗುತ್ತದೆ. ಆದ್ದರಿಂದ ಪುರಸಭೆ ಇಲಾಖೆಯ ವತಿಯಿಂದ ತಾವುಗಳು ಇದರ ಬಗ್ಗೆ ಶೀಘ್ರ ಗಮನ ಹರಿಸಬೇಕೆಂದು ಸಂಘಟನೆ ವತಿಯಿಂದ ಪುರಸಭೆ ಮುಖ್ಯಾಧಿಕಾರಿಗಳಾದ ಶರವಣರವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷರಾದ ಎ.ಅಬ್ದುಲ್ ಮಾಲಿಕ್ ಮಾತನಾಡಿ ಮೈಸೂರು ಊಟಿ ಮುಖ್ಯ ರಸ್ತೆ ಹಾಗೂ ಸುಲ್ತಾನ್ ಬತ್ತೇರಿ ರಸ್ತೆ ಮತ್ತು ಚಾಮರಾಜನಗರ ರಸ್ತೆ ಸೇರಿದಂತೆ ಸುಮಾರು 87ವಿದ್ಯುತ್ ಕಂಬಗಳಿರುವುದರಿಂದ ಇದಕ್ಕೆ ಕೆಂಪು ಹಳದಿ ಬಣ್ಣದಿಂದ ಕೂಡಿದರೆ ಪಟ್ಟಣದ ಸೌಂದರ್ಯ ಹೆಚ್ಚುತ್ತದೆ ಎಂದು ತಿಳಿಸಿದರು. ಇದೇ ವೇಳೆ ತಾಲ್ಲೂಕು ಗೌರವಾಧ್ಯಕ್ಷರಾದ ರಾಮೇಗೌಡ, ಸಲಹೆಗಾರರಾದ ಎಸ್.ಮುಬಾರಕ್, ಟೌನ್ ಉಪಾಧ್ಯಕ್ಷರಾದ ಸಾದಿಕ್ ಪಾಷ, ಟೌನ್ ಗೌರವಾಧ್ಯಕ್ಷರಾದ ಶಕೀಲ್, ಸಂಚಾಲಕರಾದ ಮಿಮುಕ್ರಿರಾಜು, ಡ್ಯಾನ್ಸರ್ ಪವನ್, ಕನ್ನಡಪರ ಹಿರಿಯ ಹೋರಾಟಗಾರರಾದ ಬ್ರಹ್ಮಾನಂದ್, ಕರ್ನಾಟಕ ಗಡಿನಾಡು ಪರಿಸರ ಸಂರಕ್ಷಣಾ ಸಂಘದ ತಾಲ್ಲೂಕು ಅಧ್ಯಕ್ಷರಾದ ಪಿ.ಬಾಲು, ಭೀಮನಬೀಡು ರಫೀಕ್ ಸೇರಿದಂತೆ ಇತರರು ಹಾಜರಿದ್ದರು.
ವರದಿ ಗುಂಡ್ಲುಪೇಟೆ ಕುಮಾರ್




















