ಬಳ್ಳಾರಿ / ಕಂಪ್ಲಿ : ತಾಲೂಕಿನ ರಾಮಸಾಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗಂಗೋತ್ರಿ ಜ್ಞಾನ ವಿಕಾಸ ಕೇಂದ್ರದಲ್ಲಿ ಜ್ವಲಂತ ಸಮಸ್ಯೆಗಳು ಮತ್ತು ಕೌಟುಂಬಿಕ ಸಾಮರಸ್ಯ ಕುರಿತು ಅರಿವು ಕಾರ್ಯಕ್ರಮ ಜರಗಿತು.
ಸಮನ್ವಯ ಅಧಿಕಾರಿ ರೇಖಾ ಮಾತನಾಡಿ ಶಿಸ್ತು ಸಮಯ ಪಾದನೆ, ವರದ ಮತ್ತು ತಿಂಗಳ ಸಭೆಯನ್ನು ಸರಿಯಾಗಿ ನಡೆಸಬೇಕು ಅಲ್ಲದೆ ಪುಸ್ತಕವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಶಿಕ್ಷಕ ಎಸ್. ರಾಮಪ್ಪ ಮಾತನಾಡಿ ಬಾಲ್ಯ ವಿವಾಹ, ಬಾಲಕಾರ್ಮಿಕತೆ, ವರದಕ್ಷಿಣೆ, ನಿರುದ್ಯೋಗ ದಂತಹ ಹಲವಾರು ಸಮಸ್ಯೆಗಳು ನಮ್ಮನ್ನು ಕಾಡುತ್ತಿದ್ದು ಅವುಗಳ ಬಗ್ಗೆ ಅರಿವನ್ನು ಹೊಂದಿ ಸರಿಯಾದ ಮಾರ್ಗದಲ್ಲಿ ಸಾಗಬೇಕು ಅಲ್ಲದೆ ಸದಸ್ಯರೆಲ್ಲರೂ ಕೂಡಿಕೊಂಡು ಪ್ರೀತಿ ವಾತ್ಸಲ್ಯದಿಂದ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗಾಯಿತ್ರಿ ಸೇವಾ ಪ್ರತಿನಿಧಿ ಮಹಿಳಾ ಸಂಘದ ಸದಸ್ಯರು ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















