ಬಳ್ಳಾರಿ / ಕಂಪ್ಲಿ : ಸಮೀಪದ ದಮ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸುಮಾರು 9.43 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಅಧ್ಯಕ್ಷ ಜಿ. ಸಂಜೀವರೆಡ್ಡಿ ಹೇಳಿದರು.
ಇಲ್ಲಿನ ಕಛೇರಿ ಆವರಣದಲ್ಲಿ ಮಂಗಳವಾರ ನಡೆದ ವಾರ್ಷಿಕ ಮಹಾಜನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕಾರ ನೀಡುವ ಜತೆಗೆ ಸಂಘದಲ್ಲಿ ವ್ಯಾಪಾರ, ವ್ಯವಹಾರ ಮಾಡಬೇಕು ಎಂದರು. ಮುಖ್ಯಕಾರ್ಯನಿರ್ವಾಹಕ ಎಸ್.ಎಂ.ರೇವಣಸಿದ್ದಯ್ಯ ಅವರು ವಾರ್ಷಿಕ ವರದಿ ಮಂಡಿಸಿ ಮಾತನಾಡಿ, ಸಂಘವು 2440 ಸದಸ್ಯರಿದ್ದು, ಒಟ್ಟು ಷೇರು ಬಂಡವಾಳ 214.94 ಲಕ್ಷಗಳಿರುತ್ತದೆ. ರೂ.342.72 ಲಕ್ಷ ಠೇವಣಿ ಹೊಂದಿರುತ್ತದೆ. ಸಂಘವು 884 ಜನ ಸದಸ್ಯರಿಗೆ ರೂ.1859.67 ಲಕ್ಷ ಬೆಳೆಸಾಲ ವಿತರಿಸಿದೆ. ರೂ.249.87 ಲಕ್ಷದ ರಾನಾಯನಿಕ ಗೊಬ್ಬರ, ಪಡಿತರ ಆಹಾರ ಧಾನ್ಯಗಳನ್ನು ಸಮರ್ಪಕವಾಗಿ ವಿತರಿಸಿ, ಇದರಿಂದ ರೂ.9.64 ಲಕ್ಷ ವ್ಯಾಪಾರಿ ಲಾಭವಾಗಿಗಳಿಸಿರುತ್ತದೆ. ಸಂಘವು ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದ್ದು, ಇನ್ನೂ ಹೆಚ್ಚಿನ ಮಟ್ಟದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಈ ವೇಳೆ ಉಪಾಧ್ಯಕ್ಷ ಡಿ.ಅಂಜೀನಪ್ಪ, ನಿರ್ದೇಶಕರಾದ ಪಿ.ಶಂಕರಗೌಡ, ಸಿ.ಗೋಪಾಲ, ಎಂ.ದೇವರೆಡ್ಡಿ, ಕೆ.ಮಲ್ಲಿಕಾರ್ಜುನ, ಎ.ಸರ್ವೋತ್ತಮಗೌಡ, ಪೂಜಾರಿ ಬಸವರಾಜ, ಕಾಳಿ ಮಂಜುನಾಥ, ಜೆ.ಪುಷ್ಪ, ಜಿ.ಮಂಗಮ್ಮ, ಚಲುವಾದಿ ಹಂಪಮ್ಮ, ಕೆ.ಪಂಪಾಪತಿ, ಸಿ.ಮಾಣಿಕ್ಯರೆಡ್ಡಿ, ಬಿ.ವಿ.ಕುಮಾರ ಶರ್ಮ, ಪಿ.ಶಿವಪ್ಪ ಸೇರಿದಂತೆ ರೈತ ಮುಖಂಡರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















