
ಬೆಳಗಾವಿ ಅಥಣಿ ಬಿಜೆಪಿ ಮಂಡಲ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಗಿರೀಶ ಬುಟಾಳಿ ಅವರಿಗೆ ಅಥಣಿಯ ಮಾಜಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಮಹೇಶ ಕುಮಠಳ್ಳಿ ಹಾಗೂ ಶ್ರೀ ಸಂಜಯ ಪಾಟೀಲ ಮಾಜಿ ಶಾಸಕರು ಬೆಳಗಾವಿ ಗ್ರಾಮೀಣ ಹಾಗೂ ಪಕ್ಷದ ಎಲ್ಲಾ ಪ್ರಮುಖರು, ಪದಾಧಿಕಾರಿಗಳು ಕಾರ್ಯಕರ್ತರು ಶುಭಾಶಯ ತಿಳಿಸಿದರು. ಅವರಿಗೆ ಬಿಜೆಪಿ ಕಾರ್ಯಕರ್ತರು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ನಿಮ್ಮ ಅಧ್ಯಕ್ಷತೆಯಲ್ಲಿ ಹಾಗೂ ಮಾರ್ಗದರ್ಶನದಲ್ಲಿ ನಾವೆಲ್ಲಾ ಕಾರ್ಯಕರ್ತರು ಪಕ್ಷ ಸದೃಢಗೊಳಿಸುವುದಕ್ಕೆ ಹಾಗೂ ಅಧಿಕಾರಕ್ಕೆ ತರುವುದಕ್ಕೆ ಹಗಲಿರುಳು ಶ್ರಮಿಸಲು ಸದಾ ಸಿದ್ಧ ಎಂದು ಹೇಳಿದರು.
ಈ ವೇಳೆ ಮಾಜಿ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರಾದ ಉಮೇಶರಾವ್ ಬಂಟೊಟ್ಕರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿದ್ದಪ್ಪಣ್ಣ ಮುದುಕನ್ನವರ್ , ನಿಂಗಪ್ಪ ನಂದೇಶ್ವರ,ಅಥಣಿ ಬಿಜೆಪಿ ಮಂಡಲ ನೂತನ ಅಧ್ಯಕ್ಷರಾದ ಗಿರೀಶ್ ಬುಟಾಳಿ, ಗಣ್ಯ ವ್ಯಕ್ತಿಗಳು ಮತ್ತು ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ. ವಿಠ್ಠಲ ಖೋಕಾಟೆ



















