ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಕ್ಕಳಿಗೆ ದಸರಾ ರಜೆಯನ್ನು ಸಜೆಯಾಗಿಸಿದ ಖಾಸಗಿ ಶಿಕ್ಷಣ ಸಂಸ್ಥೆಗಳು: ಜಯಕರ್ನಾಟಕ ಅಧ್ಯಕ್ಷ ನಾಗೇಶ ಗದ್ದಿಗಿ ಆಕ್ರೋಶ.

ಯಾದಗಿರಿ/ ಗುರುಮಠಕಲ್: ಸರ್ಕಾರ ಸುತ್ತೋಲೆ ಹೊರಡಿಸಿ ಸೆ.20 ರಿಂದ ಅ.7ವರೆಗೆ ದಸರಾ ರಜೆ ಘೋಷಣೆ ಮಾಡಿದ್ದರೂ ಅದನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಲಿಸದೇ ಶಾಲೆ ನಡೆಸುತ್ತಿರುವುದು ಆದೇಶಕ್ಕೆ ಬೆಲೆ ಕೊಡದ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸುವಂತೆ ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ನಾಗೇಶ ಗದ್ದಿಗಿ ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಸರ್ಕಾರ ರಜೆ ಘೋಷಣೆ ಮಾಡಿದ್ದರೂ ಖಾಸಗಿ ಶಿಕ್ಷಣ ಸಂಸ್ಥೆಗಳು ಎಂದಿನಂತೆ ಶಾಲೆಗಳು ನಡೆಸುತ್ತಿರುವುದರಿಂದ ಸರ್ಕಾರದ ಆದೇಶದ ಉಲ್ಲಂಘನೆ ಆಗಿದ್ದು, ಶಿಕ್ಷಣ ಸಂಸ್ಥೆಗಳಿಗೆ ಸಂಸ್ಕೃತಿ ಪರಂಪರೆಯ ಜ್ಞಾನವೂ ಇಲ್ಲದಂತೆ ವರ್ತಿಸಿರುವುದು ಸಂಸ್ಥೆಗಳ ಶಿಕ್ಷಣ ಪ್ರಸಾರ ಕಾರ್ಯವನ್ನು ಪ್ರಶ್ನಿಸುವಂತಾಗಿದೆ.

‘ಶಾಸಗಿ ಶಾಲೆಗಳು ಸರ್ಕಾರದ ಆದೇಶ ಚಾಚೂ ತಪ್ಪದೆ ಪಾಲಿಸುತ್ತೇವೆ ಎಂದು ಲಿಖಿತವಾಗಿ ಬರೆದು ಪರವಾನಿಗೆ ಪಡೆಯುವ ಖಾಸಗಿ ಶಾಲೆಗಳು ನಂತರ ತಮ್ಮದೇ ಕಾನೂನು ಜಾರಿ ಮಾಡಿಕೊಂಡು ಸರ್ಕಾರದ ಆದೇಶವನ್ನು ಉಲ್ಲಂಘಿಸುವುದು ನಿರಂತರ ನಡೆಯುತ್ತಲಿದ್ದು ಈದೀಗ ದಸರಾ ರಜೆಯ ವಿಷಯದಲ್ಲಿಯೂ ಮುಂದುವರೆಸಿದೆ, ಶಾಲೆಗಳಿಗೆ ದಸರಾ ರಜೆಯ ವೇಳೆ ಇರುವುದರಿಂದ ಕುಟುಂಬ ಸಮೇತ ತಮ್ಮೂರಿಗೆ ತೆರಳಬೇಕು ಎನ್ನುವ ಪಾಲಕರಿಗೆ ಭ್ರಮನಿರಸನವಾಗಿದೆ. ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ರಜೆ ಇಲ್ಲ, ಶಾಲೆಗೆ ಬರಲೇಬೇಕು ಎಂದು ಒತ್ತಡ ಹಾಕುತ್ತಾರೆ.

ಮಕ್ಕಳಿಗೆ ಮೊದಲೇ ಪುಸ್ತಕದ ಹೊರೆ ಹೊರಿಸಿ ಅವರ ಸರ್ವಾಂಗೀಣ ವಿಕಾಸಕ್ಕೆ ಸೀಮಿತಗೊಳಿಸಿದ್ದು ಈಗ ರಜೆಯ ಕಾಲದಲ್ಲಿಯೂ ಅವರಿಗೆ ಸಂಸ್ಕೃತಿಕ, ಆಚರಣೆ ಆಚಾರ ವಿಚಾರಗಳಲ್ಲಿ ಭಾಗಿಯಾಗದಂತೆ ಮಾಡುತ್ತಿರುವುದು ಶಿಕ್ಷಣ ಸಂಸ್ಥೆಗಳ ದುಂಡಾವರ್ತನೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ರಜೆ ಕೊಡಬೇಕಾದ ಸಂದರ್ಭದಲ್ಲಿ ಶಾಲೆಯಲ್ಲಿ ಪರೀಕ್ಷೆಗಳನ್ನು ನಿಗದಿಪಡಿಸಿ, ನಿಮ್ಮ ಮಕ್ಕಳು ಶಾಲೆ ಬಿಟ್ಟರೆ ಗೈರು ಹಾಜರಿ ಹಾಕುವ ಬೆದರಿಕೆ ಅಲ್ಲದೇ ಮಕ್ಕಳ ಮೇಲೆ ಪರೀಕ್ಷೆಯ ಭೂತ ಸವಾರಿ ಮಾಡುವಂತೆ ಮಾಡಿರುವುದು ಅಪರಾಧ ಅಷ್ಟೇ ಅಲ್ಲದೇ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಣ ರೂಪಿಸಬೇಕಾದ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಆದೇಶ ಉಲ್ಲಂಘನೆ ಮಾಡುವುದಲ್ಲದೇ ಮಕ್ಕಳಿಗೆ ರಜೆಯನ್ನು ಸಜೆಯಾಗಿಸಿರುವುದಕ್ಕೆ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!