ಕೊಪ್ಪಳ : ದಸರಾ ಸಂಭ್ರಮ ನಿಮಿತ್ಯ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಸೆ.೨೯ ರಂದು ಬೆಳಿಗ್ಗೆ ೧೦.೩೦ ಕೆ ಕೊಪ್ಪಳದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪರಿಷತ್ತಿನ ಕೊಪ್ಪಳ ತಾಲೂಕು ಉದ್ಘಾಟನೆ , ಪದಾಧಿಕಾರಿಗಳಿಗೆ ಪದಗ್ರಹಣ ಹಾಗೂ ಸಿದ್ದಯ್ಯ ಪುರಾಣಿಕ ಟ್ರಸ್ಟ್ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ ಹಾಗೂ ಜಿಲ್ಲಾ ಮಟ್ಟದ ದಸರಾ ಚುಟುಕು ಕವಿಗೋಷ್ಠಿ ಆಯೋಜಿಸಲಾಗಿದೆ.
ಕೊಪ್ಪಳ ವಿ.ವಿ. ಕುಲಪತಿ : ಪ್ರೊ. ಬಿ.ಕೆ.ರವಿ ರವರು ಕಾಯ೯ಕ್ರಮ ಉದ್ಘಾಟಿಸಲಿದ್ದಾರೆ. ಸಾಹಿತ್ಯ ಆಕಾಡೆಮಿ ಸದಸ್ಯರೂ ,ಗಂಗಾವತಿ ಸರಕಾರಿ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಪ್ರೊ.ಸಿ. ಬಿ. ಚಿಲ್ಕರಾಗಿ ಅವರು ಅಧ್ಯಕ್ಷತೆ ವಹಿಸುವರು. ನಗರಸಭಾ ಅಧ್ಯಕ್ಷ ರಾದ ಅಮ್ಜದ್ ಪಟೇಲ್ , ಸಾಹಿತಿಗಳಾದ ಡಿ.ಎಂ. ಬಡಿಗೇರ ,ಡಾ.ಮಹಾಂತೇಶ್ ಮಲ್ಲನಗೌಡರ, ಶ್ರೀ ನರೇಂದ್ರ ಪಾಟೀಲ್ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಕನಾ೯ಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಅಧಿಕಾರಿ ಸುಮಂಗಲಾ ಹಂಚಿನಾಳ ಅವರು ಅಭಿನಂದನಾ ನುಡಿ ಹೇಳಲಿದ್ದಾರೆ. ನೂತನ ತಾಲೂಕು ಪದಾಧಿಕಾರಿಗಳಿಗೆ ಜಿಲ್ಲಾ ಚುಸಾಪ ಅಧ್ಯಕ್ಷ ರುದ್ರಪ್ಪ ಭಂಡಾರಿ ಅವರು ಪದಗ್ರಹಣ ನಡೆಸುವರು, ಸಿದ್ದಯ್ಯ ಪುರಾಣಿಕ ಟ್ರಸ್ಟ್
ಅಧ್ಯಕ್ಷ ಶ್ರೀ ಅಜ್ಮೀರ್ ನಂದಾಪುರ ಹಾಗೂ ೧೦ಜನ ಸದಸ್ಯರುಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು. ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಮಹಾಂತೇಶ್ ನೆಲಾಗಣಿ ಅವರು ಪ್ರಾಸ್ತಾವಿಕ ಮಾತನಾಡಲಿದ್ದಾರೆ.
ಜಿಲ್ಲಾ ಮಟ್ಟದ ಮುಕ್ತ ಚುಟುಕು ಕವಿಗೋಷ್ಠಿಯಲ್ಲಿ ಭಾಗವಹಿಸುವವರು.
ಶಿವಪ್ರಸಾದ್ ಹಾದಿಮನಿ
ಮೊ : 79967 90189 ಇವರಲ್ಲಿ ಹೆಸರು ನೋಂದಾಯಿಸಬಹುದು ,ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಪ್ರಕಟಣೆ ತಿಳಿಸಿದೆ.
- ಕರುನಾಡ ಕಂದ



















