ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ ಗ್ರಾಮದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮಳೆಯನ್ನು ಲೆಕ್ಕಿಸದೆ ಎತ್ತು ಎತ್ತಿನ ಬಂಡಿ ಮತ್ತು ಟ್ರ್ಯಾಕ್ಟರ್ ಗಳೊಂದಿಗೆ ನೂರಾರು ರೈತರು ಎರಡೂವರೆ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿತ್ತು ಮತ್ತು ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು.
ರೈತ ನಮ್ಮ ದೇಶದ ಬೆನ್ನೆಲುಬು, ರೈತನು ತನ್ನ ಹೊಲದಲ್ಲಿ ಬೆಳೆ ಬೆಳೆದು ಮಾರುಕಟ್ಟೆಗೆ ಹಾಕುತ್ತಾನೆ. ಧಾರಾಕಾರ ಹಾಗೂ ನಿರಂತರ ಮಳೆಯಿಂದ ಹೊಲದಲ್ಲಿ ನೀರು ನಿಂತಿರುತ್ತದೆ. ಇದರಿಂದ ಬೆಳೆ ಸಂಪೂರ್ಣವಾಗಿ ನಾಶವಾಗಿರುತ್ತದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಮನವಿ ಪತ್ರ ಕೊಟ್ಟರು ಸಹಿತ ಯಾವುದೇ ಪರಿಹಾರ ಸಿಕ್ಕಿಲ್ಲ. ಕಳೆದ ವರ್ಷವೂ ಕೂಡ ಬೆಳೆ ನಾಶಕ್ಕೆ ಪರಿಹಾರ ಹಾಕುತ್ತೇನೆಂದು ಸರ್ಕಾರ ಹೇಳಿತು. ಆದರೂ ಇನ್ನೂ ಪರಿಹಾರ ಬಂದಿರುವುದಿಲ್ಲ. ರೈತರು ತೊಗರಿ ಉದ್ದು ಹೆಸರು ಸೋಯಾಬಿನ್ ಮತ್ತು ಇತರೆ ಬೆಳೆಗಳನ್ನು ಬಿತ್ತುವ ಸಲುವಾಗಿ ಸಾಲವನ್ನು ಮಾಡಿರುತ್ತಾರೆ. ಮಳೆಯಿಂದಾಗಿ ಎಲ್ಲವೂ ನಾಶವಾಗಿರುತ್ತದೆ. ಇದರ ಅರ್ಥ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂದು ಆಗುತ್ತದೆ. ರೈತರು ಸಾಲವನ್ನು ತೀರಿಸಲಾಗದೆ ತಾಲೂಕಿನಲಿ ಎಷ್ಟೋ ಜನ ರೈತರು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ ಮಾಡಿಕೊಂಡಿದ್ದಾರೆ. ರೈತರು ಸಂಕಷ್ಟದಲ್ಲಿದ್ದಾರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಾಗಲಿ ಚುನಾಯಿತ ಪ್ರತಿನಿಧಿಗಳಾಗಲಿ ಯಾವ ರೈತನ ಹೊಲಕ್ಕೆ ಬಂದಿಲ್ಲ. ತಕ್ಷಣವೇ ಬಂದು ಬೆಳೆ ಸಮೀಕ್ಷೆ ಮಾಡಿ. ಮತ್ತು ಹಿಂಗಾರು ಬಿತ್ತನೆಗೆ ಬೀಜ ರಸಗೊಬ್ಬರ ಉಚಿತ ಕೊಡಬೇಕೆಂದು ಆಗ್ರಹಿಸುತ್ತೇವೆ ಮತ್ತು ಸರ್ಕಾರ ತಕ್ಷಣ ಪರಿಹಾರ ಕೊಡಬೇಕು ಬೆಣ್ಣೆ ತೊರೆ ನದಿಯಿಂದ ನೀರು ಬಿಟ್ಟಿರುವುದರಿಂದ ಕಣಸೂರ ಮತ್ತು ಗೋಟೂರ ಗ್ರಾಮದ ಮಧ್ಯದ ಸೇತುವೆ ಪೂರ್ತಿಯಾಗಿ ಮುಳುಗಡೆಯಾಗಿರುತ್ತದೆ. ಆದ ಕಾರಣ ಕೋಡ್ಲಿ ರಟಕಲ್ ಮಾರ್ಗವಾಗಿ ಕಲಬುರ್ಗಿ ಹೋಗುವುದಕ್ಕೆ ಬಸ್ಸಿನ ವ್ಯವಸ್ಥೆ ಮಾಡಿರುತ್ತೀರಿ. ರಟಕಲ್ ಮಾರ್ಗವಾಗಿಎರಡು ಬಸ್ಸು ಮಾತ್ರ ಬರುತ್ತದೆ. ಅದು ಸರಿಯಾದ ಸಮಯಕ್ಕೆ ಬರುವುದಿಲ್ಲ. ವಿದ್ಯಾರ್ಥಿಗಳಿಗೆ ಶಾಲಾ,ಕಾಲೇಜು ಹೋಗುವುದಕ್ಕೆ ತೊಂದರೆಯಾಗುತ್ತಿದೆ. ಚಿಂಚೋಳಿ, ಕಾಳಗಿ,ಕಲ್ಬುರ್ಗಿ ಘಟಕದ ವ್ಯವಸ್ಥಾಪಕರಿಗೆ ಎಷ್ಟೋ ಬಾರಿ ಹೋರಾಟ ಮಾಡಿದ್ದೀವಿ ಮನವಿ ಪತ್ರ ಕೊಟ್ರು ಸಹಿತ ಬಸ್ ಅನ್ನು ಬಿಡುತ್ತಿಲ್ಲ. ಅದಕ್ಕಾಗಿ ಪ್ರತಿನಿತ್ಯ ಗಂಟೆಗೆ ಒಂದು ಬಸ್ಸಿನಂತೆ ಹತ್ತಾರು ವರ್ಷಗಳು ಬಿಡಬೇಕೆಂದು ಒತ್ತಾಯ ಮತ್ತು ರಟಕಲ್ ಗ್ರಾಮದಲ್ಲಿ ಕಾಲುವೆ ತುಂಬಿ ಗಬ್ಬು ನಾರುತ್ತಿದೆ ಇದರಿಂದ ಜನರ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ನಿರಂತರ ಮಳೆಯಿಂದ ರಟಕಲ ಗ್ರಾಮದಲ್ಲಿ ರಸ್ತೆಗಳು ಹಾಳಾಗಿವೆ, ಗುಂಡಿಗಳು, ತೆಗ್ಗುಗಳು ಆಗಿರುತ್ತದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಎಲ್ಲವನ್ನು ದುರಸ್ತಿ ಮಾಡಬೇಕು ಜನರಿಗೆ ಹಲವು ಭಾಗ್ಯಗಳನ್ನು ಕೊಡುವುದರ ಜೊತೆಗೆ ರೈತರ ಕಷ್ಟ ಸಮಸ್ಯೆಗೆ ಕೂಡಲೇ ಸರ್ಕಾರ ವು ಸ್ಪಂದಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವು ಮಾಡಬೇಕಾಗುತ್ತದೆ, ಪರಿಹಾರ ಕೊಡಬೇಕು ಎಂದು ವೀರಣ್ಣ ಗಂಗಾಣಿ ರೈತಸೇನೆ ತಾಲೂಕ ಅಧ್ಯಕ್ಷರು ಕಾಳಗಿ ರವರು ಈ ಸಂದರ್ಭದಲ್ಲಿ ಮಾತನಾಡಿದರು.
ರಟಕಲ ಗ್ರಾಮದ ಪ್ರತಿಭಟನಾ ಸ್ಥಳಕ್ಕೆ ಬಂದಿರುವ ಡೆಪ್ಯೂಟಿ ತಹಶೀಲ್ದಾರರು ರವಿಕುಮಾರ್ ಹಾಗೂ ತಾ. ಪಂ. ಇಓ ಬಸವಲಿಂಗಪ್ಪ ಡಿಗಿ ಮತ್ತು ಕಾಳಗಿ ಬಸ್ ಘಟಕದ ವ್ಯವಸ್ಥಾಪಕರು ರವರಿಗೆ ರಸ್ತೆ ತಡೆದು ಮನವಿ ಪತ್ರ ಕೊಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು ಶರಣಬಸಪ್ಪ ಮಮಶೆಟ್ಟಿ, ವೀರಣ್ಣ ಗಂಗಾಣಿ, ಕಲ್ಯಾಣಿ ತೆಳಕೆರಿ, ಶೌಕತ್ ಹೊಲಕುಂದಿ, ಶರಣು ಸಿಗಿ, ವೀರೇಶ್ ಬುಕ್ಕುಟಿಗಿ, ಸುನಿಲ್ ವಾಡೆದ, ನಾಗಯ್ಯ ಬುಕುಟಗಿ, ವಿಜಯ ಸರಡಗಿ, ಜಗನ್ನಾಥ ಜಡಗಿ, ಮಹಾಂತೇಶ ನಗಾರಿ, ವಿನೋದ ಸಿಗಿ, ಮಿರಾ ಮಡಕಿ ಇನ್ನೂ ಅನೇಕ ರೈತ ಮುಖಂಡರು ರೈತರು ಭಾಗಿಯಾಗಿದ್ದರು.
ವರದಿ ಚಂದ್ರಶೇಖರ್ ಆರ್ ಪಾಟೀಲ್



















