ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವೈದ್ಯರ ಬೇಜವಾಬ್ದಾರಿಗೆ ತಾಯಿ, ಮಗು ಸಾವು : ಕುಟುಂಬಸ್ಥರ ಆಕ್ರಂದನ : ಅಧಿಕಾರಿಗಳ ವಿರುದ್ಧ ಹಿಡಿಶಾಪ

ಬಳ್ಳಾರಿ/ ಕಂಪ್ಲಿ : ಕಂಪ್ಲಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ದಿವ್ಯ ನಿರ್ಲಕ್ಷ್ಯಕ್ಕೆ ಬಾಣಂತಿ ಮತ್ತು ಮಗು ಸಾವನ್ನಪ್ಪಿದ ಧಾರುಣ ಘಟನೆ ಕಂಪ್ಲಿ ತಾಲೂಕಿನಲ್ಲಿ ಶುಕ್ರವಾರ ನಡೆದಿದೆ.
ಸಾಮಾನ್ಯ ಹೆರಿಗೆಗೆ ಬಂದ ಮಹಿಳೆಯು ಇನ್ನೇನು ಮಗುವಿಗೆ ಜನ್ಮ ನೀಡುವ ಹಂಬಲದೊಂದಿಗೆ ಕಂಪ್ಲಿಯ ಸರ್ಕಾರಿ ಆಸ್ಪತ್ರೆಗೆ ಬಂದಂತಹ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ವೈದ್ಯರ ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿಗೆ ತಾಯಿ, ಮಗು ಜೀವ ತೆತ್ತಿದ್ದಾರೆ. ಆದರೆ, ಬಡ ಮಹಿಳೆಯ ಸಾವಿಗೆ ಯಾರು ಹೊಣೆ ಎಂಬ ನೂರಾರು ಪ್ರಶ್ನೆ ಜನರಲ್ಲಿದೆ. ಇದಕ್ಕೆ ಉತ್ತರ ಕೊಡಬೇಕಾದ ಆರೋಗ್ಯ ಇಲಾಖೆ ಮೌನಕ್ಕೆ ಜಾರಿದೆ. ಆರೋಗ್ಯ ಸಿಬ್ಬಂದಿಗಳ ಬೇಜವಾಬ್ದಾರಿ, ಇವರ ಬೇಕಾಬಿಟ್ಟಿ ಕೆಲಸಕ್ಕೆ ಬಡ ಜೀವಗಳು ಬಲಿಯಾಗುವಂತಾಗಿದೆ. ತಾಲೂಕಿನ ರಾಮಸಾಗರ ಗ್ರಾಮದ ನಿವಾಸಿ ಚಂದ್ರಮ್ಮ (28) ಮೃತಪಟ್ಟ ದುರ್ಧೈವಿ. ಇಲ್ಲಿನ ಕುಟುಂಬಸ್ಥರ ಮನೆಯಲ್ಲಿ ಕಣ್ಣೀರಿನ ಕಾರ್ಮೋಡ ಮಡುಗಟ್ಟಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ, ಮಗು ಜೀವ ಕಳೆದುಕೊಂಡು, ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮವಹಿಸಬೇಕೆಂಬುದು ಕುಟುಂಬಸ್ಥರ ಆಗ್ರಹವಾಗಿದೆ.

ಘಟನೆ ವಿವರ:
ಇಲ್ಲಿನ ರಾಮಸಾಗರ ಗ್ರಾಮದ ಸಣ್ಣ ವಿರೇಶ ಅವರ ಧರ್ಮಪತ್ನಿ ಚಂದ್ರಮ್ಮ ಇವರು ಸೆ.25ರಂದು ಬೆಳಿಗ್ಗೆ 10:30ರ ಸಮಯಕ್ಕೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆ ತವರು ಮನೆಯಾದ ಬೆಳಗೋಡಹಾಳ್ ಗ್ರಾಮದಿಂದ ಕಂಪ್ಲಿ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ, ತಜ್ಞ ವೈದ್ಯರು ಇಲ್ಲದ ಪರಿಣಾಮ ಅಲ್ಲಿನ ನರ್ಸ್ ಗಳು ಗರ್ಭಿಣಿಯನ್ನು ದಾಖಲಿಸಿಕೊಂಡು, ಎಲ್ಲಾ ರೀತಿಯಲ್ಲಿ ಆರೋಗ್ಯದ ಪರೀಕ್ಷೆ ನಡೆಸಿದ್ದಾರೆ. ನಂತರ ಖಾಸಗಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿ ರಿಪೋರ್ಟ್ ತಂದು ತೋರಿಸಿದ ಮೇಲೆ ವೈದ್ಯರು ಈ ರಿಪೋರ್ಟ್ನಲ್ಲಿ ಮಗು ಚನ್ನಾಗಿದೆ ಮತ್ತು ಸಾಮಾನ್ಯ ಹೆರಿಗೆಯಾಗಲಿದೆ ಎಂದು ಹೇಳಿ, ಸಂಜೆವರೆಗೂ ಗರ್ಭಿಣಿ ಕಡೆಗೆ ಗಮನ ಹರಿಸಿಲ್ಲ. ತದ ನಂತರ ಹೆರಿಗೆಗೆ ಕರೆದುಕೊಂಡು ಹೋಗಿ ಸಂಜೆ 5:40ರ ಸುಮಾರಿಗೆ ಹೆರಿಗೆ ಮಾಡಿಸಿದಾಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗು ಕಣ್ತೆರೆಯದೆ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಆದರೆ, ವೈದ್ಯರು ಮಗುವನ್ನು ಐಸಿಯುನಲ್ಲಿ ಕೆಲ ಒತ್ತು ಇರಿಸಿ, ನಂತರ ಮಗುವಿನ ಉಸಿರಾಟ ಇಲ್ಲ ಎಂದು ಕುಟುಂಬಸ್ತರನ್ನು ಕರೆಸಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಇತ್ತ ಕಡೆ ಬಾಣಂತಿ ಕಡೆಗೆ ಗಮನ ಹರಿಸದ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿಯು ರಕ್ತಸ್ರಾವದಿಂದ ನರಳುವಂತಾಗಿದೆ. ರಕ್ತಸ್ರಾವ ಕಂಡ ನಂತರ ಇನ್ನೇನು ಬಾಣಂತಿಯು ಬದುಕುವುದಿಲ್ಲ ಎಂಬುದನ್ನು ಅರಿತ ವೈದ್ಯರು ರಾತ್ರಿ 8ಗಂಟೆ ಸುಮಾರಿಗೆ ಬಳ್ಳಾರಿ ಬಿಮ್ಸ್ ಆಸ್ಪತ್ರೆಗೆ ಕರೆದೊಂಡು ಹೋಗುವಂತೆ ಸೂಚಿಸಿ ಕೈ ತೊಳೆದುಕೊಂಡಿದ್ದಾರೆ. ಕಂಪ್ಲಿಯಿಂದ ಬಳ್ಳಾರಿ ಬಿಮ್ಸ್ ರಾತ್ರಿ 9:30ಕ್ಕೆ ದಾಖಲಿಸಿದ ನಂತರ ಬಳ್ಳಾರಿ ಆಸ್ಪತ್ರೆಯ ವೈದ್ಯರು ಬೇಗ ಆಸ್ಪತ್ರೆಗೆ ಕರೆದುಕೊಂಡು ಬರಬೇಕಿತ್ತಲ್ಲಾ ಎಂದು ಕುಟುಂಬಸ್ಥರನ್ನು ಹೊಣೆಗಾರರನ್ನಾಗಿ ಮಾಡಲು ಹೊರಟು, ನಂತರ ಚಿಕಿತ್ಸೆ ನೀಡಿದ್ದಾರೆ. ಆದರೂ ಸಹ ರಕ್ತಸ್ರಾವ ಇಲ್ಲದ ಪರಿಣಾಮ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗಿನ ಜಾವ 3:40 ಗಂಟೆಗೆ ಬಾಣಂತಿ ಜೀವಬಿಟ್ಟಿದ್ದಾಳೆ. ಒಟ್ಟಿನಲ್ಲಿ ಕಂಪ್ಲಿ ಆಸ್ಪತ್ರೆಯ ವೈದ್ಯರ ಮತ್ತು ನರ್ಸಗಳ ನಿರ್ಲಕ್ಷ್ಯಕ್ಕೆ ತಾಯಿ, ಮಗು ಜೀವ ಕಳೆದುಕೊಂಡಿದ್ದಾರೆಂದು ಕುಟುಂಬಸ್ಥರ ಗಂಭೀರ ಆರೋಪವಾಗಿದೆ. ಮತ್ತು ಬಳ್ಳಾರಿಯಲ್ಲಿ ನಡೆದ ಬಾಣಂತಿಯರ ಸರಣಿ ಸಾವು ಮಾಸುವ ಮುನ್ನವೇ ಕಂಪ್ಲಿಯಲ್ಲಿ ಬಾಣಂತಿ ಮತ್ತು ಮಗು ಸಾವನ್ನಪ್ಪಿರುವುದು ಚರ್ಚೆಗೆ ಗ್ರಾಸವಾಗಿದೆ.

ಶಾಸಕರ ಭೇಟಿ :
ಬಾಣಂತಿ ಮತ್ತು ಮಗು ಸಾವನ್ನಪ್ಪಿದ ಘಟನೆ ತಿಳಿದ ಕಂಪ್ಲಿ ಶಾಸಕ ಜೆ. ಎನ್. ಗಣೇಶ ಇವರು ರಾಮಸಾಗರ ಗ್ರಾಮದಲ್ಲಿರುವ ಮೃತರ ಮನೆಗೆ ಶುಕ್ರವಾರ ದಿಢೀರ್ ಭೇಟಿ, ಸಂತಾಪ ಸೂಚಿಸಿದರು. ಕುಟುಂಸ್ಥರಿಗೆ ಧೈರ್ಯ ತುಂಬುವ ಜೊತೆಗೆ ಘಟನೆ ವಿವರ ತಿಳಿದುಕೊಂಡು, ನಿರ್ಲಕ್ಷ್ಯವಹಿಸಿದ ವೈದ್ಯರ, ಮತ್ತು ನರ್ಸ್ಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ನಾಲ್ಕು ಜನ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದೇವೆ. ಇಲ್ಲಿಯೇ ರಕ್ತಸ್ರಾವ ತಡೆಯುವುದಕ್ಕೆ ಬಹಳಷ್ಟು ಪ್ರಯತ್ನ ಮಾಡಿದ್ದೇವೆ. ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಕಳುಹಿಸಿಕೊಡಲಾಯಿತು. ಅಲ್ಲಿಯೂ ರಕ್ತಸ್ರಾವದ ಸಮಸ್ಯೆಯಿಂದ ಬಳ್ಳಾರಿ ಬಿಮ್ಸ್ನಲ್ಲಿ ಬಾಣಂತಿ ನಿಧನ ಹೊಂದಿದ್ದಾಳೆ. ಮಗುವಿನ ಉಳಿವಿಗಾಗಿ ಮಕ್ಕಳ ತಜ್ಞರು ಸೇರಿದಂತೆ ನಾವೆಲ್ಲರೂ ಬಹಳಷ್ಟು ಪ್ರಯತ್ನ ಮಾಡಿದರೂ ಮಗುವನ್ನು ಉಳಿಸಿಕೊಳ್ಳುವದಕ್ಕೆ ಆಗಿಲ್ಲ. ಇದರಲ್ಲಿ ವೈದ್ಯರ ನಿರ್ಲಕ್ಷ್ಯ ಏನಿಲ್ಲ.
– ಡಾ.ರವೀಂದ್ರ ಕನಿಕೇರಿ, ಹೆರಿಗೆ ತಜ್ಞರು, ಕಂಪ್ಲಿ.

ಕಂಪ್ಲಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ವೈದ್ಯರು ಇಲ್ಲದ ಪರಿಣಾಮ ನರ್ಸ್ಗಳು, ಆಶಾಕಾರ್ಯಕರ್ತೆ ಗರ್ಭೀಣಿಯ ಹೆರಿಗೆ ಮಾಡಿಸಿದ್ದಾರೆ. ಹೆರಿಗೆ ತಜ್ಞರೇ ಇಲ್ಲ. ಇವರ ಬೇವಾಬ್ದಾರಿಗೆ ಮಗು ಸಾವನ್ನಪ್ಪಿದೆ. ಒಂದು ತಾಸಿನ ನಂತರ ಬಾಣಂತಿ ಕಡೆಗೆ ಗಮನ ಹರಿಸಿದ್ದಾರೆ. ಅಷ್ಟೋತ್ತಿನ ರಕ್ತಸ್ರಾವದಿಂದ ಬಾಣಂತಿ ಬಳಲಿದ್ದು, ನಂತರ ಬಳ್ಳಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಅಲ್ಲಿಯೂ ಸಹ ಚಿಕಿತ್ಸೆ ಫಲಕಾರಿಯಾಗದೇ ಬಾಣಂತಿ ನಿಧನ ಹೊಂದಿದಳು. ನಿರ್ಲಕ್ಷ್ಯ ವಹಿಸಿದ ವೈದ್ಯರ ಸ್ಟಾಫ್ ನರ್ಸಗಳ ವಿರುದ್ಧ ಕಾನೂನು ಕ್ರಮವಾಗಬೇಕು. ಮತ್ತು ಸರ್ಕಾರದಿಂದ ಪರಿಹಾರ ಒದಗಿಸಬೇಕು. ಮುಂದಿನ ಕಾನೂನು ಹೋರಾಟಕ್ಕೂ ಸಿದ್ದ.

  • ಸಣ್ಣ ವಿರೇಶ, ಮೃತರ ಪತಿ. ರಾಮಸಾಗರ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!