ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿ ತಾಲ್ಲೂಕಿನ ನಿರಂತರವಾಗಿ ಜಿಟಿ, ಜಿಟಿ ಮಳೆ : ಜನಜೀವನ ಆಸ್ತವ್ಯಸ್ತ

ಬಳ್ಳಾರಿ/ ಕಂಪ್ಲಿ : ಕಳೆದ ಮೂರು, ನಾಲ್ಕು ದಿನಗಳಿಂದ ಆಗಾಗ ಬಂದು ಹೋಗುತ್ತಿದ್ದ ಮಳೆ ಶುಕ್ರವಾರ ಬೆಳಗಿನಿಂದಲೇ ಜಿಟಿ, ಜಿಟಿ ಮಳೆ ಶುರುವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಮುಂಗಾರು ಆರಂಭದ ದಿನಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಮಳೆ ನಂತರದ ಕೆಲವು ದಿನಗಳ ಕಾಲ ಹೊರಪು ಕೊಟ್ಟಿತ್ತು. ನಂತರ ಮಳೆ ಮಾಯವಾಗಿತ್ತು. ನಂತರದ ಕೆಲವು ದಿನ ಬೇಸಿಗೆಯ ಬಿಸಿಲನ್ನು ನೆನಪಿಸುವಂತ ಬಿರು ಬಿಸಿಲು ಸಾರ್ವನಿಕರಿಗೆ ಸಾಕಪ್ಪ ಸಾಕು ಎನ್ನುವಂತಾಗಿತ್ತು. ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣ, ಆಗಾಗ ತುಂತುರು ಮಳೆ ಬೀಳುತ್ತಿದ್ದು ಇದೇನಪ್ಪಾ ಬಿಸಿಲನಾಡು ಮಲೆನಾಡಾಯಿತಲ್ಲ ಎನ್ನುವಂತೆ ಪರಿಸ್ಥಿತಿ ಆರಂಭವಾಗಿತ್ತು. ಇದೀಗ ಎರಡು ದಿನಗಳ ಕಾಲ ಬಿಸಿಲಿನ ವಾತಾವರಣದಿಂದ ತಂಪಾದ ವಾತಾವರಣಕ್ಕೆ ಪರಿಸರ ಬದಲಾಗಿದೆ. ಅದರಲ್ಲೂ ಆಗಾಗ ತುಂತುರು ಮಳೆ ಬರುತ್ತಿತ್ತು. ಆದರೆ, ಬೆಳಗಿನಿಂದಲೇ ಜಿಟಿ ಜಿಟಿ ಆಗಾಗ ರಭಸದಿಂದ ಮಳೆಯಾಗತ್ತಿದ್ದು, ಜನಜೀವನ ಆಸ್ತವ್ಯಸ್ತವಾಗಿದೆ. ಜೊತೆಗೆ ನಿರಂತರ ಮಳೆಯಿಂದಾಗಿ ವಿದ್ಯುತ್ ಸರಬರಾಜಿಲ್ಲಿ ವ್ಯತ್ಯಯವಾಗುತ್ತಿದ್ದು ಸಾರ್ವಜನಿಕರಿಗೆ ತೊಂದರೆಯಾಗಿದೆ. ನಿರಂತರ ಜಿಟಿ ಜಿಟಿ ಮಳೆ ಕೃಷಿ ಚಟುವಟಿಕೆಗಳಿಗೂ ಆಡಚಣೆಯಾಗಿದ್ದು, ಬೆಳಗಿನಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆ ಸಾರ್ವಜನಿಕರನ್ನು ಮನೆಯಿಂದ ಹೊರಗೆ ಬಾರದಂತೆ ಮಾಡಿದ್ದು, ಗ್ರಾಮೀಣ ಪ್ರದೇಶಗಳ ಮುಖ್ಯ ರಸ್ತೆಗಳೂ ಸೇರಿದಂತೆ ಪಟ್ಟಣದ ಮುಖ್ಯ ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!