ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಚುಟುಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಪದಗ್ರಹಣ, ಅಭಿನಂದನಾ ಸಮಾರಂಭ

ಕೊಪ್ಪಳ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಪದಗ್ರಹಣ, ಮತ್ತು ಸಿದ್ದಯ್ಯ ಪುರಾಣಿಕ ಟ್ರಸ್ಟ್ ನ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ ಯಶಸ್ವಿಯಾಗಿ ಜರುಗಿತು.

ಕೊಪ್ಪಳ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳ ತಾಲೂಕ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಜರುಗಿತು, ಕಾರ್ಯಕ್ರಮದ ಉಧ್ಘಾಟನೆಯನ್ನು ಕೊಪ್ಪಳ ವಿಶ್ವ ವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಬಿ. ಕೆ. ರವಿಯವರು, ಸಸಿಗೆ ನೀರೆರೆಯುವ ಮೂಲಕ ಉಧ್ಘಾಟನೆ ಮಾಡಿ, ಕೊಪ್ಪಳದ ನೆಲ, ಶರಣರು ನಡೆದಾಡಿದ ಪುಣ್ಯ ಭೂಮಿ, ಇಲ್ಲಿ ಅಪಾರ ಸಂಖ್ಯೆಯ ಕವಿ, ಸಾಹಿತಿಗಳು ಇದ್ದಾರೆ, ಇದು ಸಾಂಸ್ಕೃತಿಕ ತಾಣವಾಗಿದೆ, ದಸರಾ ಕಾವ್ಯ ಸಂಭ್ರಮದ ಮೂರನೇ ಕವಿಗೋಷ್ಠಿ ನಾಳೆ, ನಮ್ಮ ವಿಶ್ವ ವಿದ್ಯಾಲಯದಲ್ಲಿ ಇದೆ, ಈ ಕಾರ್ಯಕ್ರಮ ಕ್ಕೆ ಎಲ್ಲ ಕವಿಗಳೂ ಆಗಮಿಸಬೇಕು ಎಂದು ವಿನಂತಿಸುತ್ತೇನೆ, ಎಂದರು.
ವೇದಿಕೆಯ ಮೇಲೆ ಸಾಹಿತಿಗಳಾದ ಡಿ. ಎಂ ಬಡಿಗೇರ, ಎಸ್. ಎಂ ಕಂಬಾಳಿಮಠ, ನರೇಂದ್ರ ಪಾಟೀಲ, ಪ್ರೇಮಾ ಮುದ್ಗಲ್, ಗೀತಾ ಪಾಟೀಲ್, ಸುಮಂಗಲಾ ಹಂಚಿನಾಳ, ಮುಂತಾದವರಿದ್ದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಥಮ ದರ್ಜೆ
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಯಮನೂರಪ್ಪ ತಳವಾರ ವಹಿಸಿದ್ದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಕೊಪ್ಪಳ
ಆಯೋಜಿಸಿದ್ದ, ಚುಟುಕು ಕವಿಗೋಷ್ಠಿ, ಮತ್ತು ಸಿದ್ದಯ್ಯ ಪುರಾಣಿಕ ಟ್ರಸ್ಟನ ಪದಾಧಿಕಾರಿಗಳ ಅಭಿನಂದನಾ ಸಮಾರಂಭವನ್ನು ಉಧ್ಘಾಟಿಸಿ ಮಾತನಾಡುತ್ತಿರುವ ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ, ಡಾ. ಬಿ. ಕೆ. ರವಿ. ಅವರು.


ಇದೇ ಸಂದರ್ಭದಲ್ಲಿ, ಸಿದ್ದಯ್ಯ ಪುರಾಣಿಕ ಟ್ರಸ್ಟಿನ ಪದಾಧಿಕಾರಿಗಳಾಗಿ ಆಯ್ಕೆಯಾದ ಡಾ. ಸಿದ್ದಲಿಂಗಪ್ಪ ಕೊಟ್ನೇಕಲ್, ಶಿ. ಕಾ ಬಡಿಗೇರ, ಗೀತಾ ಪಾಟೀಲ, ಪ್ರೇಮಾ ಮುದ್ಗಲ್ ಅವರುಗಳನ್ನು, ಕುಲಪತಿಗಳು, ವೇದಿಕೆಯ ಮೇಲಿದ್ದ ಗಣ್ಯರು ಮತ್ತು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರುದ್ರಪ್ಪ ಭಂಡಾರಿಯವರಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಅನ್ನಪೂರ್ಣ ಮನ್ನಾಪುರ ಅವರು ಪ್ರಾರ್ಥನಾ ಗೀತೆ ಹಾಡಿದರು.
ಕೊಪ್ಪಳ ತಾಲೂಕ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ ಕುಮಾರ ಹದ್ದಣ್ಣವರ್
ಸ್ವಾಗತಿಸಿದರು, ಕಾರ್ಯಕ್ರಮದಲ್ಲಿ ಡಾ. ಮಹಾಂತೇಶ ನೆಲಾಗಣಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ಸುಮಂಗಲಾ ಹಂಚಿನಾಳ ಅವರು ಅಭಿನಂದನಾ ನುಡಿಗಳನ್ನಾಡಿದರು.
ಕೊಪ್ಪಳ ವಿಶ್ವ ವಿದ್ಯಾ ಲಯದ
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಡಾ. ಬಸವರಾಜ ಗಡಾದ್ ಕಾರ್ಯಕ್ರಮ ನಿರೂಪಿಸಿದರು.
ನಂತರ ನಡೆದ ದಸರಾ ಚುಟುಕು ಗೋಷ್ಠಿಯಲ್ಲಿ
ಹದಿನೆಂಟು ಜನ ಕವಿ /ಕವಿಯತ್ರಿಯರು ತಮ್ಮ ಚುಟುಕುಗಳನ್ನು ವಾಚಿಸಿದರು.
ಕವಿಗೋಷ್ಠಿಯಲ್ಲಿ ಎ. ಪಿ. ಅಂಗಡಿ, ಪುಷ್ಪ ಲತಾ ಯೋಳಭಾವಿ, ಸೋಮಶೇಖರ ಕಂಚಿ, ಮೈಲಾರಪ್ಪ ಉಂಕಿ, ರವಿ ಎಸ್. ಹಿರೇಮನಿ, ರಾಜೇಶ್ವರಿ, ಕೆ. ಮುಮ್ತಾಜ್ ಬೇಗಂ, ಕೋಮಲಾ ಕುದ್ರಿಮೋತಿ, ಅನ್ನಪೂರ್ಣ ಮನ್ನಾಪುರ,ಶಿ ಕಾ ಬಡಿಗೇರ,
ಶಿವಪ್ಪ ಕೋಗಳಿ, ನಾಗರತ್ನ ಬನ್ನಿ ಕೊಪ್ಪ, ಬಾಲಾಜಿ,ಮುರಾರಿ, ರುದ್ರಪ್ಪ ಭಂಡಾರಿ, ಶಿವಪ್ರಸಾದ್ ಹಾದಿಮನಿ ಇವರುಗಳು ವೈವಿದ್ಯಮಯವಾದ ಚುಟುಕುಗಳನ್ನು ವಾಚಿಸಿ,
ಚುಟುಕು ಕವಿಗೋಷ್ಠಿ ಯನ್ನು ಯಶಸ್ವಿಗೊಳಿಸಿದರು,
ಅಧ್ಯಕ್ಷ ತೆಯನ್ನು ವಹಿಸಿದ್ದ ಡಾ ಯಮನೂರಪ್ಪ ತಳವಾರ ಚುಟುಕು ಸಾಹಿತ್ಯ, ವಚನ ಸಾಹಿತ್ಯ ದಿಂದ ಆರಂಭವಾಗಿ ಇಲ್ಲಿಯವರೆಗೆ ವಿಸ್ತಾರವಾಗಿ ಬೆಳೆದಿದ್ದು ಇಂದು ಅನೇಕ ಕವಿಗಳು ಈ ಸಾಹಿತ್ಯವನ್ನು ಬೆಳೆಸುತ್ತಿದ್ದಾರೆ, ಇದು ಹೆಮ್ಮೆಯ ಸಂಗತಿಯಾಗಿದೆ, ಎಂದರು. ಶಿವಪ್ರಸಾದ್ ಹಾದಿಮನಿ, ಕವಿಗೋಷ್ಠಿ ಕಾರ್ಯಕ್ರಮ ವನ್ನು ನಿರೂಪಿಸಿದರೆ, ಡಾ. ಅಮೀನ್ ಸಾಬ್ ಮುಲ್ಲಾ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!