
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ಕುದರಿಮೋತಿ ಗ್ರಾಮದಲ್ಲಿ ವಿಸ್ತಾರ್ ಸಂಸ್ಥೆಯ ಕನಸು ಕಿಶೋರಿ ಸಂಘಟನೆ ಯೋಜನೆ ವತಿಯಿಂದ ಬಾಲ್ಯ ವಿವಾಹ ಮತ್ತು ಲಿಂಗ ತಾರತಮ್ಯ ತಡೆಯಲು ಗೋಡೆ ಬರಹ ಅಭಿಯಾನ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು ಈ ಕಾರ್ಯಕ್ರಮ ಉದ್ದೇಶಿಸಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಮಾತನಾಡಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ನಾವು ಅನೇಕ ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದೇವೆ ಆದರೂ ಇನ್ನೂ ನಾವು ಅನೇಕ ಬಾಲ್ಯ ವಿವಾಹಗಳನ್ನು ಮಾಡುತ್ತಿದ್ದಾರೆ, ಬಾಲ್ಯ ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು ವಿಸ್ತಾರ್ ಸಂಸ್ಥೆಯ ನಿರ್ದೇಶಕರು ಆಶಾ ವಿ ಅವರು ಮಾತನಾಡಿ ಇತ್ತೀಚೆಗೆ ನಾವು ಪತ್ರಿಕಾ ವರದಿಗಳನ್ನು ನೋಡುತ್ತಿದ್ದೇವೆ ಕರ್ನಾಟಕದಲ್ಲಿ ಬಾಲ ತಾಯಿಂದರ ಸಂಖ್ಯೆ ಜಾಸ್ತಿಯಾಗುತ್ತಿದೆ ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎಂದರು. ಕಿಶೋರಿ ಮಾತನಾಡಿ ನಮಗೆ ಬೇಗ ಮದುವೆ ಮಾಡದೆ ನಮಗೆ ಎಲ್ಲದರಲ್ಲೂ ಭಾಗವಹಿಸುದವುಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದರು ಈ ಸಂದರ್ಭದಲ್ಲಿ ಜಯಶ್ರೀ ಮರಿಯಮ್ಮ ಅಲಿಸಾಬ ಗವಿಸಿದ್ದಮ್ಮ ಮತ್ತು ಗೋಡೆ ಬರಹದ ಉಮೇಶ ಚಿತ್ರಗಾರ ಹಾಗೂ ಕಿಶೋರಿಯರು ಇದ್ದರು.
- ಕರುನಾಡ ಕಂದ




















