ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

” ಗಾಂಧಿ ಜಯಂತಿ ಮತ್ತು ನಾವು. “

ಸತ್ಯ ಶಾಂತಿ ಅಹಿಂಸೆಗಳೆಂಬ
ಅಸ್ತ್ರಗಳನ್ನು ಬೋಧಿಸಿ ಪಾಲಿಸಿದ ಗಾಂಧೀ,
ನ್ಯಾಯ ನೀತಿ ಸಮಾನತೆಗಾಗಿ
ಅಹೋರಾತ್ರಿ ದುಡಿದ ಗಾಂಧೀ
ಗುಲಾಮಗಿರಿಯ ದಾಸ್ಯದಿಂದ
ನಮ್ಮನೆಲ್ಲ ಪಾರು ಮಾಡಲು
ಪ್ರಾಣವನ್ನೇ ತ್ಯಾಗ ಮಾಡಿದ ಗಾಂಧೀ,
ಮತ್ತೆ ಬಂದಿದೆ ನಿನ್ನ ಜಯಂತಿ, ಪ್ರತಿ ವರ್ಷವೂ ಬರುವಂತೆ?!.
ಗಾಂಧಿ ನಮಗೆ ನೀ ಮಾತ್ರ
ಬೇಕು! ನಿನ್ನ ತತ್ವ ಸಿದ್ಧಾಂತ,
ಆದರ್ಶ ಗಳಲ್ಲ,
ಅಕ್ಟೋಬರ್ ಬಂತೆಂದರೆ ಸಾಕು,ಹರಿದಾಡುತ್ತವೆ ನಮ್ಮವರ ಬಾಯಲ್ಲಿ,
ನಿನ್ನ ತತ್ವ ಆದರ್ಶಗಳು,! ನಿನ್ನ
ಹೆಸರಿನ ಸಮೇತ, ಯಾಕೆಂದರೆ
ನೀನಲ್ಲವೇ ಮಹಾತ್ಮ?!,
ನಿನ್ನ ಆಹಾರ ಉಡುಗೆ, ತೊಡುಗೆ ಬಗ್ಗೆ ಏನೇನೋ
ಕುಹಕ ಮಾತುಗಳು!
ನಿನ್ನ ಸರಳ ಜೀವನ ಕಂಡು
ಕರಬುವವರೇ ಅಧಿಕ!
ಅಂದಹಾಗೆ ನೀ ಕಂಡ
ರಾಮರಾಜ್ಯದ ಕನಸು,
ಇನ್ನೂ ಕನಸಾಗೇ ಉಳಿದಿದೆ,
ನನಸಾಗುವ ದಿನಗಳು ದೂರ ಹೋದಂತಿವೆ,ಇಂಥ ವೇಳೆಯಲ್ಲಿ, ಮತ್ತೇ ಬಂದಿದೆ ನಿನ್ನ ಜಯಂತಿ !, ನಿನ್ನ ಹೆಸರ ಹೇಳಿ ನಾವೂ ಆಚರಿಸುತ್ತಲೇ
ಇದ್ದೇವೆ,
ಆಚರಿಸುತ್ತಲೇ ಇದ್ದೇವೆ…

  • ಶಿವಪ್ರಸಾದ್ ಹಾದಿಮನಿ.
    ಕೊಪ್ಪಳ.
    ಸ. ಪ್ರ. ದ.ಮಹಿಳಾ ಕಾಲೇಜು.
    ಕನ್ನಡ ಉಪನ್ಯಾಸಕರು.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!