ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ತುಳಜಾಪುರ ಅಂಬಾಭವಾನಿ ದೇವಿಯು ಅಸಂಖ್ಯಾತ ಭಕ್ತಗಣ ಹೊಂದಿದ್ದು, ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಬೀದರ್ ಜಿಲ್ಲೆಯಿಂದ ಅಪಾರ ಸಂಖ್ಯೆಯ ಭಕ್ತರು ಪಾದಯಾತ್ರೆ ಮೂಲಕ ತೆರಳುತ್ತಿದ್ದಾರೆ. ಪ್ರತಿ ವರ್ಷ ಮಹಾನವಮಿ ಅಮಾವಾಸ್ಯೆಯಿಂದ ಹುಣ್ಣಿಮೆವರೆಗೆ ಬೀದರ್ ಜಿಲ್ಲೆಯ, ಬಸವಕಲ್ಯಾಣ, ಹುಮ್ನಾಬಾದ್, ಔರಾದ್, ಭಾಲ್ಕಿ ಸೇರಿದಂತೆ ಅಕ್ಕಪಕ್ಕ ಜಿಲ್ಲೆಗಳಿಂದ ಭಕ್ತರ ದಂಡು ತುಳಜಾಪುರ ಅಂಬಾಭವಾನಿ ದರ್ಶನಕ್ಕೆ ತೆರಳುತ್ತಿದ್ದು, ದಾರಿಯುದ್ದಕ್ಕೂ ‘ಆಯಿ ರಾಧಾ ಉಧೋ, ಉಧೋ, ಅಂಬಾಭವಾನಿ ಮಾತಾಕಿ ಜಯ ‘ ಎಂಬ ನಾಮಘೋಷಗಳೊಂದಿಗೆ ತುಳಜಾಪುರಕ್ಕೆ ಪ್ರಯಾಣ ಬೆಳೆಸುತ್ತಾರೆ. ಇನ್ನು ದಾರಿಯುದ್ದಕ್ಕೂ ಪಾದಯಾತ್ರೆ ತೆರಳುವ ಭಕ್ತರಿಗೆ ರಾಷ್ಟೀಯ ಹೆದ್ದಾರಿ ಸಸ್ತಾಪೂರ ಬಂಗಲಾ, ಮಂಠಾಳ, ಹೀಗೆ ಅಲ್ಲಲ್ಲಿ ಸ್ವಯಂ ಸೇವಕರು, ವಿವಿಧ ಸಂಘಟನೆಗಳು, ಹೆದ್ದಾರಿ ಪಕ್ಕದಲ್ಲಿರುವ ವ್ಯಾಪಾರಿಗಳು ಎರಡು ಕಿಲೋಮೀಟರ್ ಅಂತರದಲ್ಲಿ ಪಾದಯಾತ್ರಿಗಳಿಗೆ ಅಲ್ಲಲ್ಲಿ ಟೆಂಟ್ ವ್ಯವಸ್ಥೆ ಮಾಡಿ ಬಾಳೆಹಣ್ಣು, ಚುಡವಾ, ಉಪ್ಪಿಟ್ಟು, ಸಿರಾ, ಅನ್ನ, ಚಹಾ-ಬಿಸ್ಕಿಟ್, ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡುತ್ತಿದ್ದಾರೆ.
ವರದಿ :ಶ್ರೀನಿವಾಸ ಬಿರಾದಾರ



















