ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದೇವಿಗೆ ವಿಶೇಷ ಮಹಾಭಿಷೇಕ ಹಾಗೂ ವಿಶೇಷ ಅಲಂಕಾರ

ರಟಕಲ್ ಗ್ರಾಮದಲ್ಲಿ ಅಂಬಾ ಭವಾನಿಗೆ ವಿಜಯದಶಮಿ ದಿನದಂದು ವಿಶೇಷ ಪೂಜೆ ಹಾಗೂ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಗೆ ಷಟಸ್ಥಲ ಶ್ರೀ ರೇವಣ ಸಿದ್ದೇಶ್ವರ ಶಿವಾಚಾರ್ಯರು ಹಾಗೂ ವಿರಕ್ತಮಠದ ನೀಲಕಂಠ ದೇವರು ರಟಕಲ್ ಚಾಲನೆ ನೀಡಿದರು.

ಕಾಳಗಿ : ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ ಗ್ರಾಮದಲ್ಲಿ ನವರಾತ್ರಿ ನಿಮಿತ್ಯವಾಗಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ದಿ.1 -10 -2025 ಮಹಾನಮಿ 10ನೇ ದಿನ ಸಾಯಂಕಾಲ 05 ಗಂ. ತೊಟ್ಟಿಲು ಕಾರ್ಯಕ್ರಮ ನಡೆದಿದೆ. ದಿನಾಂಕ 2.10.2025 ವಿಜಯದಶಮಿ ಪಾಡ್ಯ ದಂದು ದೇವಿಗೆ ವಿಶೇಷ ಮಹಾಭಿಷೇಕ ಹಾಗೂ ವಿಶೇಷ ಅಲಂಕಾರ ಹಾಗೂ ಪ್ರಮುಖ ಬೀದಿಯಲ್ಲಿ ಸಾಯಂಕಾಲ 4:00ಗೆ ವಿಜೃಂಭಣೆಯಿಂದ ಷಟಸ್ಥಲ ಶ್ರೀ ರೇವಣ ಸಿದ್ದೇಶ್ವರ ಶಿವಾಚಾರ್ಯರು ಹಾಗೂ ವಿರಕ್ತಮಠದ ನೀಲಕಂಠ ದೇವರು ಮೆರವಣಿಗೆ ಚಾಲನೆ ನೀಡಿದರು. ಅಂಬಾ ಭವಾನಿಯ ಮೂರ್ತಿಯು ಗ್ರಾಮದ ಪ್ರಮುಖ ಬೀದಿಯಲ್ಲಿ ಡೊಳ್ಳು, ಬಾಜಾ ಬಜಂತ್ರಿ,ವೀರಗಾಸೆ, ಭಜನೆ, ಮಕ್ಕಳಿಂದ ಕೋಲಾಟ, ಸಹಯೋಗದಲ್ಲಿ ಭವ್ಯವಾದ ಮೆರವಣಿಗೆ ಮಾಡಲಾಯಿತು. ಹಿರಿಯರು ತಾಯಂದಿರು ಯುವಕರು ಮುದ್ದು ಮಕ್ಕಳು ಎಲ್ಲಾ ಸದ್ಭಕ್ತರು ಬಂದು ಈ ಒಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ತಾಯಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಿದ್ದಾರೆ ಎಂದು ಅಂಬಾಭವಾನಿ ದೇವಸ್ಥಾನದ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಮಾನಶೆಟ್ಟಿ ಸಿಗಿ, ಮತ್ತು ಅಂಬಾಭವಾನಿ ಸದ್ಭಕ್ತ ಮಂಡಳಿಯ ಸರ್ವ ಸದಸ್ಯರು ಸಂತಷವನ್ನು ವ್ಯಕ್ತಪಡಿಸಿದ್ದಾರೆ.
ಅಂಬಾನಿ ಭವಾನಿ ಮಂದಿರ ಬೆಳಿಗ್ಗೆ ಕಲಬುರ್ಗಿ ಗ್ರಾಮೀಣ ಶಾಸಕರಾದ ಬಸವರಾಜ್ ಮತ್ತೆ ಮೂಡ್ ರಟಕಲ ಗ್ರಾಮದಲ್ಲಿ ಧರ್ಮಸಭೆ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಷಟಸ್ಥಲ ಶ್ರೀ ರೇವಣ ಸಿದ್ದೇಶ್ವರ ಶಿವಾಚಾರ್ಯರು ಹಾಗೂ ವಿರಕ್ತಮಠದ ನೀಲಕಂಠ ದೇವರು, ಕಲಬುರ್ಗಿ ಗ್ರಾಮೀಣ ಶಾಸಕರಾದ ಬಸವರಾಜ್ ಮತ್ತೆ ಮೂಡ್, ಶ್ರೀ ಬಸವರಾಜ್ ಕಿಣಿ, ಸುಧಾಕರ ಸ್ವಂತ, ಶ್ರೀಕಾಂತ್ ಆಷ್ಟಗಿ, ಸಂತೋಷ್ ಚೌಕ, ಚಂದ್ರಕಾಂತ ಜೋಗೇರ, ಸಿದ್ದಣ್ಣ ಬೀರನಳ್ಳಿ, ಚಂದ್ರಕಾಂತ ಸಿಗಿ, ಪ್ರಕಾಶ ಬಡಿಗೇರ, ರವಿ ಕುಡುಗುಂಟಿ, ಸಿದ್ದು ಸಕ್ಕರಿ, ನಾಗರಾಜ್ ಬಡಿಗೇರ, ಸಿಲಾಧರ ಸೂಗೂರು, ಶಿವು ಕುರುಕೋಟಿ, ಶ್ರೀ ಶಿವಶರಣಪ್ಪ ಕಲಶೆಟ್ಟಿ ಉಪಾಧ್ಯಕ್ಷರು, ವೀರಣ್ಣ ಗಂಗಾಣಿ, ಮಲ್ಲು ಮರುಗುತ್ತಿ ಕಾರ್ಯಕ್ರಮ ನಿರೂಪಣೆ ನಿರ್ಮಿಸಿದರು. ಅರ್ಚಕ ಪ್ರಜ್ವಲ್ ದುದ್ಗಿ ಮಠ ಹಾಗೂ ಅಧ್ಯಕ್ಷರಾದ ಮಾನ್ ಶೆಟ್ಟಿ ಸಿಗಿ, ಶಿವಶರಣ ಕಲಶೆಟ್ಟಿ, ಬಸವರಾಜ್ ಕಿನ್ನಿ ಸುಧಾಕರ್ ಸಾಂಗ್, ಸಿದ್ದಲಿಂಗ ಹಾಲ್ಮಠ, ಶರಣಬಸಪ್ಪ ಮಮ್ ಶೆಟ್ಟಿ, ರವಿ ಕೊಡಗುಂಟಿ ಸಾಯಂಕಾಲ 4:00ಗೆ ಮೆರವಣಿಗೆ ನಡೆಯಲಾಯಿತು. ರಟಕಲ್ ಗ್ರಾಮದ ಭಕ್ತಾದಿಗಳು ಮತ್ತು ಊರಿನ ಪ್ರಮುಖರು ಉಪಸ್ಥಿತರಿದ್ದರು.

ವರದಿ ಚಂದ್ರಶೇಖರ ಆರ್. ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!