೧. ಕವಿತೆ.
ಬರೆಯಬೇಕೆಂದು ಕುಳಿತೆ
ನಾನೊಂದು ಕವಿತೆ,
ಬತ್ತಿ ಹೋಗಿದೆ
ಪದಗಳ ಒರತೆ,
ನಾನು ಬರೆದರೂ
ಅದಾಗುತ್ತಿಲ್ಲ ಕವಿತೆ,
ನೀನೆಲ್ಲಿ ಅವಿತೆ?
ಓ ನನ್ನ ಕವಿತೆ.
೨. ವಿರೋಧಿ.
ನಾನು ಅನ್ಯಾಯದ ವಿರೋಧಿ
ಸಮಾಜದ ವಿರೋಧಿಯಲ್ಲ,
ನಾನು ವ್ಯಕ್ತಿ ವಿರೋಧಿಯಲ್ಲ,
ವ್ಯವಸ್ಥೆಯ ವಿರೋಧಿ!.
೩. ಜಾತಿ ಗಣತಿ.
ಜಾತ್ಯತೀತ ದೇಶದಲ್ಲೀಗ
ನಡೆದಿದೆ ಜಾತಿಯ ಗಣತಿ,
ಜಾತಿ ಜಾತಿ, ಜಾತಿ ಎಂದೇ
ಹೊಡೆದಾಡಿದರೆ ಆದೀತೇ,
ದೇಶದ ಪ್ರಗತಿ?!.
- ಶಿವಪ್ರಸಾದ್ ಹಾದಿಮನಿ.✍️.
ಕನ್ನಡ ಉಪನ್ಯಾಸಕರು.
ಸರಕಾರಿ ಪ್ರ. ದ. ಮಹಿಳಾ ಕಾಲೇಜು ಕೊಪ್ಪಳ.




















